ಸುದ್ದಿಲೈವ್/ಶಿವಮೊಗ್ಗ
18 ನೇ ಲೋಕಸಭೆಗೆ ನಡೆದ ಮಹಾಚುನಾವಣೆಯಲ್ಲಿ ಜನರು ಮತಚಲಾಯಿಸಿ 240 ಕ್ಷೇತ್ರಗಳಲ್ಲಿ ಬಿಜೆಪಿಯನ್ನೂ 292 ಸ್ಥಾನ ಎನ್ ಡಿಎಯನ್ನ ಆರಿಸಿಕಳುಹಿಸಿದ್ದಾರೆ. ಜನರಿಗೆ ಹೃತ್ಪೂರಕ ವಂದನೆಗಳು ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ 20 ಸ್ಥಾನ ಬರುತ್ತೇವೆ ಡಬ್ಬಲ್ ಡಿಜಿಟ್ ಬರ್ತೀವಿ ಎಂದಿದ್ದರು. ಆದರೆ ಜನ ಎನ್ ಡಿಎ ಗೆ ಬೆಂಬಲಿಸಿದ್ದಾರೆ. ಕಾಙಗ್ರೆಸ್ ಗೆ ನಿರಾಶೆ ಮೂಡಿಸಿದ್ದಾರೆ ಎಂದರು.
ದೂರದೃಷ್ಠಿಯಿಟ್ಟುಕೊಂಡು ಪ್ರಧಾನಿಮೋದಿಗೆ ಹೆಚ್ಚಿನ ಮತಕೊಟ್ಟಿದ್ದಾರೆ. ಈ ಗೆಲವನ್ನ ಕಾರ್ಯಕರ್ತರಿಗೆ ಅರ್ಪಿಸುವೆ. ಬೂತ್ ಮಟ್ಟದ ವರೆಗೆ ಸರ್ಕಾರದ ಯೋಜನೆಯನ್ನ ಮತದಾರರಿಗೆ ಮುಟ್ಟಿಸುವ ಕೆಲಸವನ್ನ ಕಾರ್ಯಕರ್ತರು ಶ್ರಮಿಸಿದ್ದಾರೆ. ಮೋದಿಅಪೇಕ್ಷಗೆ ತಕ್ಕಂತೆ ಭಾರತ ಮಾರ್ಗದರ್ಶನ ಮನನ ಅಡುವ ಜಾಗದಲ್ಲಿ ನಿಲ್ಲಬೇಕು ಎಂದರು.
ಮಲೆನಾಡಿನಂತ ಶಿವಮೊಗ್ಗದಲ್ಲಿ ಪರಿಸರ ಉಳಿಸಿಕೊಂಡು ಅಭಿವೃದ್ಧಿ ಕೆಲಸವಾಗಬೇಕು. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಗಾಂಜಾ ಸೇವನೆ ಮಾಡುವ ಯುವಕರು ರಾಕ್ಷಸೀಯ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದನ್ನ ತಡೆಹಿಡಿಯುವ ಕೆಲಸವನ್ನ ಎಲ್ಲಾ ಜನಪ್ರತಿನಿಧಿಗಳು ಮಾಡುವಂತೆ ನಮ್ಮವರು ಅಪೇಕ್ಷಿಸಿದ್ದಾರೆ. ಅದರಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.
2.43 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಜವಬ್ದಾರಿ ಹೆಚ್ಚಾಗಿದೆ. ದ್ವೇಷದ ಅಪಪ್ರಚಾರ ಚುನಾವಣೆ ವೇಳೆ ನಡೆದಿದೆ. ಈಗ ಜನ ತೀರ್ಒಉ ನೀಡಿದ್ದಾರೆ. ದ್ವೇಷವನ್ನ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದ ರಾಘವೇಂದ್ರ ಈ ಬಾರಿ ಮುಂಗಾರು ಕೈಗೊಡುವ ನಿರೀಕ್ಷೆ ಹೆಚ್ಚಾಗಿದೆ. ಈ ವೇಳೆ ರೈತರ ಮತ್ತು ಮತದಾರರ ನೆರವಿಗೆ ಧಾವಿಸುವಂತೆ ಕೆಲಸ ಆಗಬೇಕು ಎಂದರು.
ವಿಐಎಸ್ ಎಲ್ ಕಾರ್ಖಾನೆ, ಕಸ್ತೂರಿ ರಂಗನ ವರದಿ, ಬಗುರ್ ಹುಕುಂ, ಶರಾವತಿ ಮುಈ ಉಗಡೆ ಸಂತ್ರಸ್ತ್ರ ವಿಚಾರ ಬಗೆಹರಿಸಲಾಗುತ್ತಿಲ್ಲ. ಈ ಅವಧಿಯನ್ನ ಸಂಪೂರ್ಣವಾಗಿ ಉಪಯೋಗಿಸುವೆ. ವಿಮಾನನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಹೆಚ್ಚಾಗಿದೆ.
ಇದನ್ನ ಖಾಯಂ ಆಗಿ ಏನು ನಾಡಲು ಸಾಧ್ಯ ಕಾದು ನೋಡಬೇಕು ಎಂದ ಅವರ, ತವರು ಕ್ಷೇತ್ರ ಶಿಕಾರಿಪುರದಲ್ಲಿ ಮತಗಳು ಹೆಚ್ಚು ಪಡೆಯಲಾಗುತ್ತಿಲ್ಲ. ತವರು ಮನೆಯಲ್ಲಿ ಗೀಟು ಎಳೆದುಕೊಂಡಿದ್ದೇವೆ. 87 ಸಾವಿರ ಮತದಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರೊಂದಿಗೆ ಕುಳಿತು ವಿಚಾರಣೆ ಮಾಡುವೆ ಎಂದರು.
ಈ ಬಾರಿ ನಿರೀಕ್ಷೆಯ ಮಟ್ಟದ ಫಲಿತಾಙಶ ದೇಶಮಟ್ಟದಲ್ಲಿ ಬಂದಿಲ್ಲ. ಸ್ವಂತ ಬಲದ ಮೇಲೆ ಬಂದು ಭಾರತವನ್ನ ವಿಶ್ವಗುರಿಯಾಗಿಸುವ ಕನಸು ನನಸಾಗಿಸಲಿದ್ದೇವೆ. ಕುಳಿತು ಚರ್ಚೆ ಮಾಡಲಿದ್ದೇವೆ. ಜನ ಸಂಸದರನ್ನಾಗಿ ನಾಲ್ಕು ಬಾರಿ ಆಯ್ಜೆ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವ ವಿಷಯ ಸಂಘಟಬೆಗೆ ಬಿಟ್ಟ ವಿಷಯ ಎಂದರು.
ಇದನ್ನೂ ಓದಿ-https://suddilive.in/archives/16271