ಸುದ್ದಿಲೈವ್/ಶಿವಮೊಗ್ಗ
ಪೆಟ್ರೋಲ್, ಡಿಸೇಲ್ ಹಾಗೂ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಜಿಲ್ಲಾ ಬಿಜೆಪಿ ನಗರದ ಐದು ಕಡೆಯಿಂದ ವಿನೂತನ ಪ್ರತಿಭಟನೆಗೆ ಮುಂದಾಗಿದೆ.
ಮಹಿಳಾ ಮೋರ್ಚಾ ಗೋಪಿ ವೃತ್ತದಲ್ಲಿ ತರಕಾರಿ ಚೀಲಗಳನ್ನ ತಂದು ಪ್ರತಿಭಟನೆ ನಡೆಸಿತು, ಟೆಮೋಟೋ ಕೆಜಿಗೆ 80ರೂ. ಕಡಲೆಕಾಳು ಕೆಜಿಗೆ 80 ರೂ, ಮೂಲಂಗಿ ಕೆಜಿಗೆ 100 ಎಂದು ತರಕಾರಿ ಮೂಟೆ ಮೇಲೆ ಮೊದಲದ ದರಗಳ ಪಟ್ಟಿ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದರು.
ಜೈಲ್ ರಸ್ತೆಯಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಕಾರನ್ನ ತಳ್ಳಿಕೊಂಡು ಬಂದರು. ಮಾರುತಿ 800 ಕಾರಿನ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಯ ಅಣಕು ವೇಷ ಹಾಕಿಕೊಂಡು ಕಾರ್ಯಕರ್ತರು ಪ್ರತಿಭಟಸಿದರು. ಈ ವೇಳೆ ಸಿಎಂ ಸುಳ್ಳ ಡಿಸಿಎಂ ಕಳ್ಳ, ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ ಎಂಬ ಘೋಷಣೆ ಕೂಗಲಾಯಿತು.
ಬರಪರಿಹಾರ ನೀಡಿಲ್ಲ ಎಂದು ರೈತ ಮೋರ್ಚದ ಕಾರ್ಯಕರ್ತರು ಮಥುರಾ ಪ್ಯಾರಡೈಸ್ ನಿಂದ ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಮೂಲಕ ಬಂದರೆ, ಒಬಿಸಿ ಮೋರ್ಚಾದ ಕಾರ್ಯಕರ್ತರು ಕಸ್ತೂರ ಬಾ ಕಾಲೇಜಿನ ರಸ್ತೆಯಿಂದ ಬೈಕ್ ಗೆ ಹಗ್ಗ ಕಟ್ಟಿಕೊಂಡು ಎಳೆದುಕೊಂಡು ಬರಲಾಯಿತು. ಶಾಸಕ ಡಿ.ಎಸ್ ಅರುಣ್ ಕುದುರೆ ಏರಿ ಬಂದರೆ, ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ಶವಸಂಸ್ಕಾರಕ್ಕೆ ಬಳಸುವ ಮಡಿಕೆಯಲ್ಲಿ ಅಗ್ನಿ ಕುಂಡವನ್ನ ಹಿಡಿದು ಗೋಪಿವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾದರು.
ನೆಹರೂ ರಸ್ತೆಯಲ್ಲಿ ಟಿ.ಡಿ ಮೇಘರಾಜ್ ಮತ್ತು ಶಾಸಕ ಚೆನ್ನಬಸಪ್ಪ ಬೈಕ್ ನ್ನ ಚಟ್ಟದಲ್ಲಿ ಕಟ್ಟಿಕೊಂಡು ಬಂದರು. ಈ ಎಲ್ಲಾ ಘಟಕದ ಕಾರ್ಯಕರ್ತರು ಗೋಪಿವೃತ್ತದಲ್ಲಿ ಸೇರಿ ಪ್ರತಿಭಟನೆಗೆ ಮುಂದಾದರು.
ಈ ವೇಳೆ ಶಾಸಕ ಚೆನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಧೂಳಿಪಟವಾಗುತ್ತಿದೆ. ಗ್ಯಾರೆಙಟಿಯಲ್ಲಿ ಹಣ ಸುರಿದುಹೋಗುತ್ತಿದೆ. ಹಾಗಾಗಿ ಜನರ ಜೇಬಿಗೆ ಮತ್ತೆ ಕತ್ತರಿ ಹಾಕಿದೆ. ಡಿಸೇಲ್, ಪೆಟ್ರೋಲ್ ದರವನ್ನ 3 ರಿಂದ 3-50 ರೂ ದರ ಏರಿಸಲಾಗಿದೆ ಎಂದು ಆರೋಪಿಸಿದರು.
ಟ್ರಾಫಿಕ್ ಪೊಲೀಸ ಗೆ ಎಜೆನ್ಸಿ ನೀಡಲಾಗಿದೆ. ಹಣ ಸಂಗ್ರಹಿಸಿಕೊಡಬೇಕು ಎಂದು ಅಲಿಖಿತ ಆದೇಶ ನೀಡಿದ್ದರಿಂದ ವಾಹನ ಸವಾರಿಗೆ ದಂಡ ವಿಧಿಸಿ ಹಣ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ಬಡವರಿಗೆ ಸಂಕಟವಾಗುತ್ತಿದ್ದರೂ ಹೇಳಲು ಕಷ್ಟವಾಗುತ್ತಿದೆ. ಎಲ್ಲದಕ್ಕೂ ಕಾಂಗ್ರೆಸ್ ಸರ್ಕಾರ, ಹಾಲಿನ ದರ, ದಿನನಿತ್ಯ ಬಳಕೆ ವಸ್ತುಗಳ ದರ ಏರಿಸಿ ಜನರ ಬದುಕನ್ನ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್, ಎಂಎಲ್ ಸಿ ಭಾರತಿ ಶೆಟ್ಟಿ, ಮಂಗಳಾ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗಾಯಿತ್ರಿ ಮಲ್ಲಪ್ಪ, ಅಣ್ಣಪ್ಪ, ಹೃಷಿಕೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17060