ಕಾಣೆಯಾಗಿದ್ದಾರೆ: ಮಾಹಿತಿ ನೀಡಲು ಮನವಿ

ಸುದ್ದಿಲೈವ್/ಶಿವಮೊಗ್ಗ

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆ.

ಮಂಜುನಾಥ ಜಿ.ಬಿ ಬಿನ್ ಫಕೀರಪ್ಪ 30 ವರ್ಷ ಎಂಬುವವರು ನವೆಂಬರ್ 2023ರಲ್ಲಿ ಮನೆಯಿಂದ ಕೆಲಸಕ್ಕೆ ಎಂದು ಹೋದವರು ಈವರೆಗೂ ಮನೆಗೆ ಬಂದಿರುವುದಿಲ್ಲ. ಈ ವ್ಯಕ್ತಿಯೂ ಸುಮಾರು 5.8 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ.

ಮನೆಯಿಂದ ಹೊಗುವಾಗ ಪಿಂಕ್ ಬಣ್ಣದ ಟೀ ಶರ್ಟ್ ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ ರಂಗಪ್ಪ ಬಿನ್ ಜವರೇಗೌಡ 79 ವರ್ಷದ ವ್ಯಕ್ತಿ ಜೂನ್ 2023ರಲ್ಲಿ ಮನೆಯಿಂದ ಹೊರಗೆ ಹೋದವರು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.

ಈ ವ್ಯಕ್ತಿಯೂ ಸುಮಾರು 5.7 ಅಡಿ ಎತ್ತರ ದುಂಡುಮುಖ ಬಿಳಿಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ ಮನೆಯಿಂದ ಹೊಗುವಾಗ ಸಿಮೇಂಟ್ ಬಣ್ಣದ ಟೀ ಶರ್ಟ್ ನೀಲಿ ಬಣ್ಣದ ಪಂಚೆ ಹಸಿರು ಬಣ್ಣದ ಟವಲ್ ಧರಿಸಿರುತ್ತಾರೆ.

ಈ ಚಹರೆಯ ವ್ಯಕ್ತಿಗಳು ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿರಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/17930

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close