ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನಲ್ಲಿರಯವ ಚಿನ್ನದ ಅಂಗಡಿಯಲ್ಲಿ ಖರೀದಿಯ ನೆಪದಲ್ಲಿ ಬಂದ ನಾಲ್ವರಿಂದ ಕಳ್ಳತನ ನಡೆದಿದೆ, ಸುಮಾರು 3.51 ಲಕ್ಷ ರೂ ಮೌಲ್ಯದ 67 ಗ್ರಾಂ ಚಿನ್ನಾಭರಣವನ್ನ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಗಾಂಧಿ ಬಜಾರ್ ನ ಮುಖ್ಯರಸ್ತೆಯಲ್ಲಿರುವ ಜ್ಯುವಲರಿಗೆ ಮೇ.31 ರಂದು ಬೆಳಿಗ್ಗೆ ಬಂದ ಓರ್ವ ಪುರುಷ ಮೂವರು ಮಹಿಳೆಯರಲ್ಲಿ ಮದುವೆ ಗಂಡಿಗೆ ಗಿಫ್ಟ್ ಕೊಡಬೇಕು ಉಂಗುರ, ಬೆಳ್ಳಿ ಕಾಮಾಕ್ಷಿ ಕಾಲುದೀಪ ತೋರಿಸುವಂತೆ ಕೇಳಿದ್ದಾರೆ.
ಉಂಗುರ ಕಾಲುದೀಪ ತೋರಿಸಲು ಅಂಗಡಿ ಮಾಲೀಕರು ಮತ್ತು ಸಿಬ್ವಂದಿಗಳು ನಿರತರಾಗಿದ್ದಾಗ ಡಿಸ್ ಪ್ಲೇ ಗ್ಲಾಸ್ ನಲ್ಲಿದ್ದ ಬಂಗಾರದ ಪ್ಲಾಸ್ಟಿಕ್ ಡಬ್ಬಿಯನ್ನ ಮಹಿಳೆಯೊಬ್ಬಳು ಕದ್ದಿರುವುದು ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ.
ಮೂಗುಬೊಟ್ಟು, ಲಕ್ಷ್ಮೀಸರ, ಮಾಟಿಕಾ ಮೊದಲಾದ 67 ಗ್ರಾಂ ಚಿಬ್ನಾಭರಣವನ್ನ ಕಳುವು ಮಾಡಿಕೊಂಡಿರುವುದು ಸಿಸಿ ಟಿವಿಯಿಂದ ಪತ್ತೆಯಾಗಿದೆ. ಗ್ರಾಹಕರ ರೀತಿಯಲ್ಲಿ ಬಂದು ಬಂಗಾರದ ಒಡವೆಯನ್ನ ಖರೀದಿಸಲು ಮುಂದಾಗಿ 3,51,500 ರೂ. ಮೌಲ್ಯದ ಚನ್ನಾಭರಣಗಳನ್ನ ಕಳುವು ಮಾಡಿರುವ ಬಗ್ಗೆ ಅಂಗಡಿ ಮಾಲೀಕ ಹರೀಶ್ ಬಿ ಎಸ್ ಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/16042