ಗೀತ ಸೋಲಿನ ಜವಬ್ದಾರಿಯನ್ನ ನಾನೆ ಹೋರುವೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಸೋಲಿನ ಬಗ್ಗೆ ಸಚಿವ ನಧು ಬಂಗಾರಪ್ಪ ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷದ ಅಪಪ್ರಚಾರದಿಂದ ಆಗಿದೆ. ಸೋಲಿನ ಜವಬ್ದಾರಿಯನ್ನ ನಾನು ಹೋರುವುದಾಗಿ ಹೇಳಿದರು.

5 ಲಕ್ಷದ35 ಸಾವಿರ ಮತಗಳನ್ನ ಕಾಂಗ್ರೆಸ್ ಅಭ್ಯರ್ಥಿಗೆ ದೊರೆತಿದೆ. ಮನಸಿಗೆ ನೋವಾಗಿದೆ. ಆದರೂ ಮುಂದೆ ಸಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ನಾನೇ ಎರಡು ಬಾರಿ ಸ್ಪರ್ಧಿಸಿದ್ದೆ. ಸೋಲಾಗಿದೆ. ಸ್ಪರ್ಧಿಸುವುದು ಚಟವಲ್ಲ. ಪಕ್ಷ ಆದೇಶ ಮಾಡಿದ ಮೇಲೆ ನಡೆದುಕೊಳ್ಳುವ ಅನಿವಾರ್ಯವಾಗಿದೆ. ನಾನು ಗೆದ್ದಾಗ ಬೇರೆ ವಾತಾವರಣವಿತ್ತು. ಸೋತಾಗ ಬೇರೆ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಗೀತ ಅಭ್ಯರ್ಥಿಯಾಗಿ ಮೊದಲೆ ಕರೆಸಬೇಕಿತ್ತು ಎಂಬ ಮಾತಿತ್ತು. ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಗೀತ ನಿಮ್ಮ ಜೊತೆನೆ ಇರ್ತಾರೆ ಎಂದರು.

ದೇಶದಲ್ಲಿ ಒಬ್ಬ ಇದ್ದಾನೆ ಅವನನ್ನ ತಿದ್ದಲಿಕ್ಕೆ ಆಗೊಲ್ಲ ಎಂದು ಸಹೋದರ ಕುಮಾರ್ ಬಂಗಾರಪ್ಪನವರ ಹೆಸರು ಪ್ರಸ್ತಾಪಿಸದೆ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರೂ ಅದಕ್ಕೂ ಮಾಧ್ಯಮದವರ ಮೇಲೆ ಬೆರಳು ಮಾಡಿ ಮಾತನಾಡಿದರು.

ನಾಳೆಯೊಂದಲೇ ಪಕ್ಷದ ಕಚೇರಿಯಲ್ಲಿ ಕೂರಲಿದ್ದಾಳೆ. ಏನು ಮಾಡಬೇಕು ಹೇಳಿ ಅದನ್ನ‌ ಮಾಡ್ತಾರೆ. ಬೂತ್ ಮಟ್ಟದಲ್ಲಿ ಮತಕೇಳಲಾಗಿತ್ತು. ಮತಕೇಳಿದಾಗ ಅಭ್ಯರ್ಥಿ ಬಗ್ಗೆ ಜನ ಬೈದು ಕಳುಹಿಸಿದ್ರಾ? ಇಲ್ವಲಾ, ಸೋತರೂ ಗೀತ ನಮ್ಮ ಜೊತೆ ಇರ್ತಾರೆ. ಬಿಜೆಪಿ ಮನೆ ಒಡೆಯುವ ಕೆಲಸ ಮಾಡ್ತಾರೆ. ಈ ಚುನಾವಣೆಯಲ್ಲಿ ಎರಡು ರೀತಿಯ ನಿರ್ಲಕ್ಷ ಮಾಡಿದ್ದೇವೆ.

ಬಿಜೆಪಿ ಪ್ರಪೋಗಂಡಾ ಮಾಡುವಲ್ಲಿ ನಿಸ್ಸೀಮರು, ಉತ್ತರ ಭಾರತದಲ್ಲಿ ಬಿಜೆಪಿಗೆ ಸೋಲಿನ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ದಕ್ಷಿಣವನ್ನ ಪ್ರಬಲ ಪಡಿಸಿಕೊಂಡರು. ಕೇರಳದಲ್ಲಿ ಒಂದು ಸ್ಥಾನ. ತಮಿಳು ನಾಡಿನಲ್ಲಿ ಶೇಕಡವಾರು ಮತ ಪಡೆದರು. ಬಿಜೆಪಿ ಮಾಧ್ಯಮಗಳಲ್ಲಿ ಚಾರ್ ಸೌ ಪಾರ್ ಎಂಬುದನ್ನ ಪ್ರಚಾರ ಪಡಿಸಿದರು. ಗ್ತಾರೆಂಟಿ ಪಡೆದವರು ಕಾಂಗ್ರೆಸ್ ಗೆ ಕೈ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋತಿದ್ದೇವೆ. ಆದರೆ‌ ಚುನಾವಣೆ ಸೋಲಿನ ಜವಬ್ದಾರಿಯನ್ನ ನಾನು ಹೋರುವೆ. ಮಾಧ್ಯಮದವರು ಎಕ್ಸಿಟ್ ಪೋಲ್ ನಲ್ಲಿ ಸೋತಿದ್ದೀರಿ. ತಪ್ಪು ಮಾಡಿದ್ದೀರಿ. ನಿಮಗೆ ಜವಬ್ದಾರಿ ಇದೆ ಎಂದರು.

30 ದಿವಸದಲ್ಲಿ 5 ಲಕ್ಷ 35 ಸಾವಿರ ಮತ ಗಳಿಸಲು ಸಾಧ್ಯವಾಗಿದೆ. 400 ಪಾರ್ ಆಗಿಲ್ಲಲ್ಲ ಮಾಧ್ಯಮದವರು ಏನು ಮಾಡ್ತೀರಿ. ಕಾಂಗ್ರೆಸ್ ಶಿವಮೊಗ್ಗದಲ್ಲಿ ಸೋತಿದೆ. ಆದರೆ ಉತ್ತರ ಭಾರತದಲ್ಲಿ ಗೆದ್ದಿಲ್ವಾ? ರಾಮ ಹೋದಕಡೆಯಲ್ಲೆಲ್ಲಾ ಬಿಜೆಪಿ ಸೋತಿದೆ. ಮಧು ಬಂಗಾರಪ್ಪನವರಿಗೆ ಕನ್ನಡ ಬರೊಲ್ಲ. 20% ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಬಿಂಬಿಸಲಾಯಿತು ಎಂದರು.

ಗ್ಯಾರೆಂಟಿಯಿಂದಲೇ ಸರ್ಕಾರ ಬಂದಿದೆ ಎಂದು ವೇದಿಕೆ ಮೇಲೆ ಭಾಷಣ ಮಾಡಿದ್ದೆ. ಗ್ಯಾರೆಂಟಿಯಿಂದ ಸರ್ಕಾರ ಬಂದಿದೆ. ಆದರೆ ಭ್ರಷ್ಠಾಚಾರದಲ್ಲಿ ಕಳೆದ ಬಾರಿ ಬಿಜೆಪಿ ಸರ್ಕಾರ ಕಳೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಬೇಕಿತ್ತು ಎಂದರು.

ಕಿಮ್ಮನೆ ಮಾತು

ಮಾಜಿ ಸಚಿವ ಕಿಮನೆ ರತ್ನಾಕರ್ ಮಾತನಾಡಿ, ಅಸಮಾಧಾನವಿದ್ದರೆ ನಮ್ಮೊಳಗೆ ಚರ್ಚೆ ಮಾಡಿಕೊಳ್ಳುವುದು ಒಳ್ಳೆಯದು. ಸೋಲಿನಲ್ಲೂ ಒಂದು ಗೆಲುವು ಇದೆ. ಸಾಮಾಜಿಕ ಸ್ಥಿತ್ಯಾಂತರ ನೀಡಲಾಗಿದೆ. ಮೋದಿಯ ಕುರ್ಚಿ ಇದೆ ಕಾಲು ಬೇರೆಯವರ ಕೈಯಲ್ಲಿದೆ.

ಬಿಜೆಪಿ ಸಿದ್ದಾಂತ ಎಲ್ಲಿಯ ವರೆಗೆ ಇರುತ್ತೆ ದೇಶಕ್ಕೆ ಒಳ್ಳೆಯ ಕಾಲವಿಲ್ಲ. ಮೋದಿ ಸಂವಿಧಾನಕ್ಕೆ ನಮಸ್ಕರಿಸಿದ್ದು ಖುಷಿಯಾಗಿದೆ. ಆದರೂ ಅವರ ಚಿಂತನ ರಂಗದಲ್ಲಿ ಬದಲಾವಣೆಯೇ ಇದೆ. ಬಿಜೆಪಿ ಸಂಸ್ಕೃತವನ್ನ ದೇಶ ಭಾಷೆಯನ್ನಾಗಿಸಬೇಕು. ಹಿಂದಿ ಸಂಪರ್ಕದ ಬಾಷೆಯಾಗ ಬೇಕು ಎಂಬುದು ಹಿಡನ್ ಅಜೆಂಡ ಇದೆ. ಅದನ್ನ‌ ಬಹಿರಂಗವಾಗಿ ಹೇಳಿ ಎಂದರು.

ಪತ್ರದ ಮೂಲಕ ಅಸಮಾಧಾನವಿದ್ದರೆ ಕೊಡಿ ಚರ್ಚಿಸೋಣ, 2028 ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ. ಈ ಮಿಲಿಜುಲಿ ಸರ್ಕಾರ್ ಹೆಚ್ಚಿನ ದಿನ‌ಬಾಳಲ್ಲ. ಜಿ ಪಂ ಮತ್ತು ತಾ ಪಂ ಚುನಾವಣೆಗೆ ಸಿದ್ದರಾಗಿ. ಇಲ್ಲವಾದಲ್ಲಿ ಕಾರ್ಯಕರ್ತರಿಗೆ ಸಮಸ್ಯೆಯಾಗಲಿದೆ.

ಈ ಬಾರಿ ಹಣ ಬಹಳ ಕೆಲಸ ಮಾಡಿದೆ. ಬೂತ್ನಲ್ಲಿ ಕುಳಿತು ಹಣ ಹಂಚಲಾಗುತ್ತದೆ. ಶಿಕ್ಷಾವಂತರೇ ಹಣಕ್ಕೆ ಮಾರಿಕೊಂಡಿರುವ ಉದಾಹರಣವಿದೆ. ಎಂದರು.

ಆಯನೂರು ಮಾತು

ಕೆಪಿಸಿಸಿ ವಕ್ತಾರರಾದ ಆಯನೂರು ಮಂಜುನಾಥ್ ಮಾತನಾಡಿ, ಈ ಬಾರಿ ಲೋಕಸಭೆಯಲ್ಲಿ ಜಯಸಿಗಲಿಲ್ಲ. ಆದರೆ ಗೌರವಾನ್ವಿತ ಸೋಲಾಗಿದೆ. 5 ಲಕ್ಷ ಮತದಾರರು ನಮ್ಮೊಂದಿಗೆ ಇದ್ದಾರೆ. ಸೋಲು ರಾಜ್ಯಕೀಯ ಅಂತ್ಯವಲ್ಲ. ಆದರೆ ಪುಟಿದೇಳುವ ಅವಕಾಶ ದೊರೆತಿದೆ. ಬಿಜೆಪಿ 400 ಸ್ಥಾನ ಎಂದು ಹೇಳಿಕೊಂಡು ಹೊರಟಿದ್ದರು. ರಾಮನೇ ಬಿಜೆಪಿಗೆ ಪಾಠ ಕಲಿಸಿದ್ದಾನೆ. ಬಿಜೆಪಿ ಯಾವ ರಾಮನನ್ನ ಹಿಡಿದುಕೊಂಡು ಹೊರಟಿದ್ವೋ ಆತ ಹುಟ್ಟಿದ ಕ್ಷೇತ್ರದಲ್ಲಿ ಅಂದರೆ ಅಯೋಧ್ಯಯನ್ನ ಗೆಲ್ಲಲಿಲ್ಲ.

ಪಾರ್ಲಿಮೆಂಟ್ ಚುನಾವಣೆ ಮತ್ತೆ ಬೇಗ ಬರಲಿದೆ. ಹಾಗಾಗಿ ವಿಶ್ರಾಂತಿ ಬೇಡ. ನಿತೀಶ್ ಮತ್ತು ನಾಯ್ಡು ಹೆಗಲಿನ‌ ಮೇಲೆ ಸರ್ಕಾರ ರಚನೆಯಾಗಿದೆ. ಯಾವುದಾದರೂ ಹಂತದಲ್ಲಿ ಸೈದ್ಯಂತಿಕ ಭಿನ್ನಾಭಿಪ್ರಾಯಕ್ಕೆ ಸರ್ಕಾರ ಬೀಳಲಿದೆ ಎಂದರು.

ಸಚಿವ ಸಂಪುಟದಲ್ಲಿ ಶೋಷಿತ ಜನಾಂಗ, ಹಿಂದುಳಿದ ಜನಾಂಗದ ಲೀಡರ್ ಗಳಿಲ್ಲ. ಚುನಾವಣೆ ಮುಗಿದಿದೆ. ಡ್ರಿಪ್ ಇರಿಗೇಷನ್ ಮಾಡುವ ಅವಕಾಶವಿದೆ. ಪ್ರತಿಯೊಂದು‌ ಗಿಡದ ಬುಡಕ್ಕೆ ನೀರು ಹಾಕುವ ಕೆಲಸ ಆಗಬೇಕು. ಹಾಗೆ ಕಾರ್ಯಕರ್ತನನ್ನ ಸಂಪರ್ಕಿಸುವ ಕೆಲಸ ಆಗಬೇಕು ಎಂದರು.

ಪರಿಷತ್ ಚುನಾವಣೆಯಲ್ಲಿ ನನ್ನ ಸೋಲಾಗಿದೆ. ಕಾರ್ಯಕರ್ತರ ನೋಂದಣಿಯಾಗದ ಕಾರಣ ಸೋಲಾಗಿದೆ. 5½ ಜಿಲ್ಕೆಯಲ್ಲಿ 30 ವಿಧಾನ ಸಭಾ ಕ್ಷೇತ್ರ ಬರುತ್ತೆ ಒಂದು ವಿಧಾನ ಸಭೆಯಲ್ಲಿ ಸಾವಿರ ಜನ ಕಾರ್ಯಕರ್ತನ ನೋಂದಣಿ ಆಗಿದ್ದರೆ 30 ಸಾವಿರ ಮತ ಸಿಗುತ್ತಿತ್ತು. ಕಾರ್ಯಕರ್ತರ ಮತ್ತು ನಾಯಕರ ಸೋಲು ಅಲ್ಲ. ಪ್ರತಿಯೊಂದನ್ನೂ ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದರು.

ಇದನ್ನೂ ಓದಿ-https://suddilive.in/archives/16602

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು