ಸಂಗಮ್ ಟೈಲರ್ ನ ಮಾಲೀಕರು ಪ್ರಮಾಣಿಕತನ ಮೆರೆದಿದ್ದು ಹೇಗೆ?

ಸುದ್ದಿಲೈವ್/ಶಿವಮೊಗ್ಗ

ಬಿ.ಹೆಚ್ ನಗರದಲ್ಲಿರುವ ಸಂಗಮ್ ಟೈಲರ್ ಅಂಗಡಿ ಎದರು ಹೋಗುತ್ತಿದ್ದ ಮಹಿಳೆಯ ಕೊರಳಿನಿಂದ ಕಳಚಿಬಿದ್ದ ಬಂಗಾರದ ಸರ ಬೇರೆಯವರ ಕೈ ಸೇರಿದ್ದು ಬಂಗಾರವನ್ನೇ ಕದಿಯುವ ಈ ದಿನಗಳಲ್ಲಿ ಸಿಕ್ಕ ಬಂಗಾರದ ಆಭರಣವನ್ನ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದ ಘಟನೆಯೊಂದು ನಡೆದಿದೆ.

ದಿನಾಂಕಃ 29-06-2024 ರಂದು ಸಂಜೆ ಶಿವಮೊಗ್ಗ ಟೌನ್ ಬುದ್ಧ ನಗರದ ವಾಸಿ ರಂಜಿತ ಮತ್ತು ಅವರ ತಾಯಿ ರಾಜೇಶ್ವರಿ ರವರು ನಗರದ  ಬಿ. ಹೆಚ್ ರಸ್ತೆಯ ಸಂಗಮ್ ಟೈಲರ್ ಎದುರು ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ರಾಜೇಶ್ವರಿ ಅವರು ಧರಿಸಿದ್ದ 32 ಗ್ರಾಂ ತೂಕದ ಬಂಗಾರದ ಸರವನ್ನು ಕಳೆದುಕೊಂಡಿದ್ದರು.

ಆ ಸರವು ಸಂಗಮ್ ಟೈಲರ್ ನ ಮಾಲೀಕರಾದ  ಕುಮಾರ್ ರವರಿಗೆ ಸಿಕ್ಕಿತ್ತು. ಅದನ್ನ ಮಾಲೀಕರು ಇಂದು ಕೋಟೆ ಪೊಲೀಸ್ ಠಾಣೆಗೆ ತಂದು ಹಾಜರ್ ಪಡಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಬಂಗಾರಕ್ಕಾಗಿ ಮಹಿಳೆಯರನ್ನ ಹಿಂಸಿಸುವ ಇಂದಿನ ದಿನಗಳಲ್ಲಿ ಇಂತಹ ಪುಣ್ಯವಂತರೂ ಇರುವುದು ಹೆಮ್ಮೆ ಎನಿಸುತ್ತದೆ.

ನಂತರ ಇದನ್ನ ಗುರು ಬಸವರಾಜ್ ಪಿಐ ಕೋಟೆ ಪೊಲೀಸ್ ಠಾಣೆ ರವರ ಸಮ್ಮುಖದಲ್ಲಿ ಬಂಗಾರದ ಸರವನ್ನು ಮಾಲೀಕರಾದ ರಾಜೇಶ್ವರಿ ರವರಿಗೆ ಹಸ್ತಾಂತರಿಸಲಾಗಿರುತ್ತದೆ.  ಕುಮಾರ್ ರವರ ಈ ನಡೆಯು ಪ್ರಶಂಸನೀಯವಾಗಿದೆ.

ಇದನ್ನೂ ಓದಿ-https://suddilive.in/archives/18184

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close