ಸುದ್ದಿಲೈವ್/ಶಿವಮೊಗ್ಗ
ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬೆನ್ಬಲ್ಲೇ ಶಿವಮೊಗ್ಗದಲ್ಲಿ ಚಂದ್ರಶೇಖರನ್ ಪತ್ನಿ ಕವಿತಾ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಅವರು, ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಸ್ ನಲ್ಲಿ ನೋಡಿದ್ದೇನೆ. ಏನೇ ಆಗಲಿ ನಮಗೆ ನ್ಯಾಯ ಸಿಗಬೇಕು. ತನಿಖೆ ಒಳ್ಳೆ ರೀತಿಯಲ್ಲಿ ಆಗಬೇಕು. ಎಂದು ಆಗ್ರಹಿಸಿದ್ದಾರೆ
ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು. ನಮಗೆ ನ್ಯಾಯ ಬೇಕು.ಈ ಬೆಳವಣಿಗಳನ್ನ ನೋಡಿದರೆ ತನಿಖೆ ಒಳ್ಳೆ ರೀತಿಯ ರೀತಿಯಲ್ಲಿ ಹೋಗುತ್ತದೆ ಅನಿಸುತ್ತಿದೆ. ಇನ್ನೂ ಹೆಚ್ಚಿನ ತನಿಕಾಗಿ ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಕವಿತ ಆಗ್ರಹಿಸಿದರು.
ನಮ್ಮನೆಯವರ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದ ಅವರು, ಈ ಬೆಳವಣಿಗೆಯಿಂದ ಒಂದು ರೀತಿಯಲ್ಲಿ ಖುಷಿಯಾದರೂ ನಮಗೆ ನಮ್ಮ ಮನೆಯ ಸಾವಿನ ನೋವು ಇನ್ನೂ ಇದೆ ಎಂದು ತಿಳಿಸಿದ್ದಾರೆ.
ಅವರು ತುಂಬಾ ದಿನಗಳಿಂದ ನೋವನ್ನು ತಿಂದಿದ್ದಾರೆ. ಅವರು ಹೊರಗಡೆ ಹೇಳಿಕೊಂಡಿರಲಿಲ್ಲ.ನಮಗೆ ಜೀವನಕ್ಕೆ ಯಾವುದೇ ರೀತಿ ಆಧಾರವಿಲ್ಲದೆ ಕುಳಿತುಕೊಂಡಿದ್ದೇವೆ. ಸರ್ಕಾರಾನೂ ಕೂಡ ಯಾವುದೇ ರೀತಿಯ ಪರಿಹಾರದ ಬಗ್ಗೆ ನನ್ನ ಬಳಿ ಮಾತನಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದರು.
ನನಗೆ ಮುಂದಿನ ಜೀವನದ ಬಗ್ಗೆ ಪ್ರಶ್ನೆಯಾಗಿ ಉಳಿದಿದೆ. ಇನ್ನು ಕೂಡ ಸತ್ಯ ಪೂರ್ತಿಯಾಗಿ ಹೊರಗೆ ಬಂದಿಲ್ಲ. ಇನ್ನಷ್ಟು ತನಿಖೆ ನಡೆದು ಸತ್ಯ ಹೊರಗಡೆ ಬರಬೇಕು ಅನ್ನೋದನ್ನ ನಾವು ಕಾಯುತ್ತಿದ್ದೇವೆ. ಅವರು ಅಧಿಕಾರಿಯಾಗಿ ಇತರ ಆತ್ಮಹತ್ಯೆ ಮಾಡಿಕೊಂಡಿರುವುದು ನನಗೆ ತುಂಬಾ ನೋವಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/16361