ಒಂದು ಟ್ವೀಟ್, ಮೂವರು ವಿಚಲಿತರು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತರಿಗೆ, ಸಚಿವರಿಗೆ ಹಾಗೂ ನಟ ಶಿವರಾಜ್ ಕುಮಾರ್ ಅವರಿಗೆ ಸೋಲಿಗಿಂತ ಕುಮಾರ್ ಬಂಗಾರಪ್ಪನವರ ಟ್ವೀಟ್ ಹೆಚ್ಚು ವಿಚಲಿತರನ್ನಾಗಿ ಮಾಡಿರುವುದು ಕಂಡು ಬರುತ್ತಿದೆ.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಸಚಿವ ಮಧು ಬಂಗಾರಪ್ಪನವರ ನಡುವಿನ ಆರೋಪ ಪ್ರತ್ಯಾರೋಪ,  ತಿಕ್ಕಾಟ ಬಹಳ ಹಳೆಯ ವಿಷಯವಾದರೂ. ಮೊನ್ನೆ ಕುಮಾರ್ ಬಂಗಾರಪ್ಪ ಮಾಡಿದಂತ ಟ್ವೀಟ್ ಸಹೋದರ, ಸಹೋದರಿ ಮತ್ತು ಭಾವರನ್ನ ತಲ್ಲಣಗೊಳಿಸಿದೆ.

ಕುಮಾರ್ ಬಂಗಾರಪ್ಪ ತಮ್ಮ ಟ್ವೀಟ್ ನಲ್ಲಿ ಚುನಾವಣೆ ಮುಗಿದಿದೆ ಭಾವ  ಶಿವರಾಜ್ ಕುಮಾರ್ ಗೆ ಕೆಲಸವಿಲ್ಲವೆಂದು ಮನನೊಂದುಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮೂರ ಜಾತ್ರೆಯಲ್ಲಿ ಡ್ಯಾನ್ಸ್ ಮಾಡುವ ಕೆಲಸ ಖಾಲಿ ಇದೆ ಅರ್ಜಿ ಹಾಕಿಕೊಳ್ಳಬಹುದು ಎಂದು.

ಸಹೋದರಿ ಗೀತಾರಿಗೆ ಸಿನಿಮಾ ಮಾಡುವುದರಲ್ಲಿ ಡಾನ್ ಆಗಿದ್ದೀರಿ. ದೊಡ್ಮನೆ ವ್ಯವಹಾರ ತುಂಬ ಇವೆ. ಕೆಲಸವಿಲ್ಲವೆಂದು ಬೇಸರಿಸಿಕೊಳ್ಳಬೇಡಿ ಟಾಟಾ ಬೈ ಬೈ. ನಿಮ್ಮ ಕ್ಷೇತ್ರ ಸಿನಿಮಾ ಅದನ್ನ ನಿಬಾಯಿಸಿಕೊಂಡು ಹೋಗಿ ಎಂದು ಟ್ವೀಟ್ ಮಾಡಿದ್ದರು.

ಸಚಿವ ಮಧು ಬಂಗಾರಪ್ಪನವರಿಗೆ ಕನ್ನಡವನ್ನ ಅಪಮಾನಿಸಿದಾತ, ಟ್ರೋಲ್ ಮಾಡಿದವರು, ಮತ್ತು ಮಾಧ್ಯಮಗಳನ್ನೇ ಶಾಪಹಾಕಿತಾನೇ ಶಾಪಗ್ರಸ್ತನಾದ. ಸಹೋದರನ ಭವಿಷ್ಯಕ್ಕೆ ಅಡ್ಡಗಾಲು ಹಾಕಲು ಹೋಗಿ ಬೆಂಗಳೂರಿನಿಂದ ಇಲ್ಲಿಗೆ ತಂಗಿ ಭಾವರನ್ನ ಕರೆದುಕೊಂಡು ಬಂದವನು ಎಂದು ಮಾಡಿರುವ ಟ್ವೀಟ್ ಮೂವರನ್ನ ಅಕ್ಷರಶಃ ಅಲುಗಾಡಿಸಿದಂತೆ ಕಂಡು ಬರುತ್ತಿದೆ.

ಇಂದು ನಡೆದ ಕೃತಜ್ಞತಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತ, ನಟ ಡಾ.ಶಿವರಾಜ್ ಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪನವರ ಬಾಯಿಯಲ್ಲಿ ಧನ್ಯವಾದಗಳಿಗಿಂತ ಕುಮಾರ್ ಅವರ ಟ್ವೀಟ್ ನ ಬಗ್ಗೆನೇ ಮಾತನಾಡಿದ್ದು ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ.

ಸಚಿವ ಮಧು ಬಂಗಾರಪ್ಪ ಇಲ್ಲೊಬ್ಬ ಸ್ಯಾಡಿಸ್ಟ್ ಇದ್ದಾನೆ ಎಂದು ಹೇಳುವ ಮೂಲಕ ಆದಷ್ಟು ತಮ್ಮ ಆಕ್ರೋಶಗಳನ್ನ ತಡೆದುಕೊಂಡಂತೆ ಕಂಡು ಬಂದವು. ಪರಾಜಿತ ಅಭ್ಯರ್ಥಿ ಗೀತರವರು ನಾನು ಟಾಟಾ ಬೈ ಬೈ ಮಾಡಲ್ಲ. ನಿಮ್ಮ ಜೊತೆನೆ ಇರ್ತೀವಿ ಎಂದು ಹೇಳಿದರು.

ಡಾ.ಶಿವರಾಜ್ ಕುಮಾರ್ ಸಹ ಅವರ ಮಾತುಗಳೆಲ್ಲಾ ಕುಮಾರ್ ಬಂಗಾರಪ್ಪನವರ ಟ್ವೀಟ್ ಗಳಲ್ಲಿ ಆರೋಪಿಸಿರುವ ಬಹುತೇಕ ಟ್ವೂಟ್ ಗಳಿಗೆ ಉತ್ತರವಿದ್ದಂತೆ ಕಂಡು ಬಂದಿತ್ತು. ಕುಮಾರ್ ಅವರ ಒಂದು ಟ್ವೀಟ್ ಈ ಮೂವರಿಗೆ ಸೋಲಿಗಿಂತ ಮಾತಿನ ತಿವಿತ ವಿಚಲಿತರನ್ನಾಗಿ ಮಾಡಿದಂತೆ ಕಂಡು ಬಂದಿದೆ.

ಇದನ್ನೂ ಓದಿ-https://suddilive.in/archives/16643

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close