ಸುದ್ದಿಲೈವ್/ಶಿವಮೊಗ್ಗ
ಮಧ್ಯಾಹ್ನದ ಹೊತ್ತಿಗೆ ಬಿದ್ದ ಮಳೆ ಶಿವಮೊಗ್ಗ ನಗರದಲ್ಲಿ ತಂಪೆರೆದಿದೆ. ಎಂದಿನಂತೆ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಯಿಂದ ಅಲ್ಲಲ್ಲಿ ನೀರು ತುಂಬಿಕೊಂಡಿದ್ದು ಪ್ರವಾಹ ರೀತಿಯ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮದ್ಯಾಹ್ನದ ಹೊತ್ತಿಗೆ ಒಂದು ಗಂಟೆಗೆ ಅಧಿಕ ಸಮಯದ ಮಳೆ ಸುರಿದಿದೆ. ಶಿವಮೊಗ್ಗಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಈ ಮಳೆ ಉತ್ತಮವೆನಿಸಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗರಿಗೆದರಲಿದೆ.
ಮಳೆಯ ಬಿದ್ದ ಕಾರಣ ಅಲ್ಲ್ಲಿ ಡ್ರೈನೇ್, ಚರಂಡಿ ನೀರುಗಳು ಮೇಲೆದ್ದು ಬರುವ ದೃಶ್ಯ ಸಾಮಾನ್ಯವೆನಿಸಿದೆ. ಇವೆಲ್ಲದಕ್ಕೂ ಕಾರಣ ಸ್ಮಾರ್ಟ್ ಸಿಟಿ ಎಂದು ದೂರಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/16373
Tags:
ನಗರ ಸುದ್ದಿಗಳು