ನನ್ನ ಸೋಲಿಗೆ ನಾನೆ ಜವಬ್ದಾರಿ ಹೋರುವೆ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ಪರಿಷತ್ ಚುನಾವಣೆಯಲ್ಲಿ ನನಗೆ ಮತಹಾಕಿದ ಎಲ್ಲರಿಗೂ ಹಾಗೂ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಡಾ.ಸರ್ಜಿಗೂ ಅಭಿನಂದನೆಯನ್ನ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲಾ ಪದ್ದತಿಗಳನ್ನು ಮುರಿದಿರುವ ದಾಖಲೆಯಾಗಿದೆ, ಮದ್ಯ ಹಂಚಿಕೆ, ಜಾತಿ, ಉಪಜಾತಿ ಲೆಕ್ಕಾಚಾರ, ಮತದಾನಗಳು ಸಹ, ಎಲ್ಲವೂ ದಾಖಲೆ ಪ್ರಮಾಣದಲ್ಒಇ ನಡೆದು ಕಲೂಷಿತಗೊಂಡಿದೆ ಎಂದು ದೂರಿದರು.

30 ವರ್ಷದ ರಾಜಕೀಯದಲ್ಲಿ ಈ ರೀತಿಯ ಚುನಾವಣೆ ನಡೆದಿಲ್ಲ.ನಾನು ಯಾವ ವಾಮಮಾರ್ಗಕ್ಜೆ ಕೈಹಾಕಿಲ್ಲ. ವಿದ್ಯಾವಂತ ಮತದಾರರ ಬಗ್ಗೆ ನೈತಿಕ ಪ್ರಶ್ನೆ ಉದ್ಭವಿಸಿದೆ. ಒಂದು ದಿನದ ಚಪಲಕ್ಕಾಗಿ ಮತದಾರ ಮಾರುಹೋಗಿದ್ದಾನೆ. ಇದೊಂದು ದುರಂತವೆಂದರು.

ಸರ್ಕಾರ ನಮ್ಮದೆ ಇದ್ದರೂ, ನೌಕರರ ಪೆನ್ಸಷನ್, ಪೆನ್ಷನ್ ತಾರತಮ್ಯ ಮೊದಲಾದ ವಿಷಯದಲ್ಲಿ ವಿರೋಧಿ ನಿಲುವು ಬಂದಾಗ ಸದನದಲ್ಲಿ ನಿಂತು ಬಡಿದಾಡಿರುವೆ. ಯಾವುದೇ ನೌಕರನ ನಿವೃತ್ತಿ ಗೌರವದಿಂದ ಇರಬೇಕು ಎಂದಿರುವೆ.

ನೌಕರ ವಿಷಯದಲ್ಲಿ ಸ್ಪರ್ಷಿಸದ ವಿಷಯಗಳೇ ಇರಲಿಲ್ಲ. ಅತಿಥಿ ಉಪನ್ಯಾಸಕರು ನನ್ನನ್ನ ಅನ್ನದಾತರು ಎನ್ನುತ್ತಿದ್ದರು. ಇಂತವರು ಮತದಾನದ ಮೂರು ನಾಲ್ಕು ದಿನಗಳಲ್ಲಿ ಬದಲಾವಣೆ ಆಗಿದ್ದಾರೆ. ಹಣಕ್ಕೆ ಮಾರಿಹೋಗಿದ್ದಾರೆ. ತಮ್ಮ ನಿಲುವನ್ನ ಬದಲಾಯಿಸಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.‌

ಮತದಾರರ ಆಯ್ಕೆಯನ್ನ ಗೌರವಿಸುವೆ. ಆದರೆ ಗೆದ್ದ ಅಭ್ಯರ್ಥಿ ಕೈಲಾಗದವರ ಕೊನೆಯ ಅಸ್ತ್ರ‌ ಅಪಪ್ರಚಾರ ಎಂದಿದ್ದರು. ಆದರೆ ದುರ್ಬಲ ಅಭ್ಯರ್ಥಿಯ ಕೊಬೆಯ ಅಸ್ತ್ರ ಮದ್ಯ ಹಂಚುವಿಕೆಯಾಗಿದೆ. ಹೊನ್ನಾಳಿಯಲ್ಲಿ ನಿಮ್ಮ ಬಗ್ಗೆ ಹಣ ಹಂಚಲು ಹೋಗಿ ಮಹಿಖೆಯೊಬ್ಬಳು ಕೆಲಸ ಕಂಡಿಕೊಂಡಿದ್ದಾಳೆ. ಆ ಕುಟುಂಬಕ್ಕೆ ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು.

ನಾನು ವಾಮನಾರ್ಗ ಹಿಡಿದಿಲ್ಲ. ನನಗೆ ಅವಕಾಶವಿಲ್ಲ.‌ ಸೋಲಿನಿಂದ ವಿಚಲಿತನಾಗಿಲ್ಲ. ಆದರೆ ವಿದ್ಯಾವಂತ ಸಮಾಜದ ಆಯ್ಕೆ ಬಗ್ಗೆ ಆಕ್ಷೇಪವಿದೆ. ಚುನಾವಣೆ ನಡೆಯುವವರೆಗೆ ಮದ್ಯ ಹಂಚುತ್ತಿರುವವರು ಮೊನ್ನೆಯಿಂದ ಕಾಫಿನೂ‌ಕೊಡಿಸುತ್ತಿಲ್ಲ ಎಂಬ ಆರೋಪ ಬರುತ್ತಿದೆ. ನನ್ನಲ್ಲಿ ಕೊರತೆ ಇದೆ. ನನ್ನ ಸೋಲಿಗೆ ನಾನೇ ಕಾರಣ ಅದರ ಬಗ್ಗೆ ಚಿಂತಿಸುವೆ ಎಂದರು.

ಚುನಾವಣೆಯಲ್ಲಿ ಮೂರು ತರಹದ ಸೋಲಾಗಿರುತ್ತದೆ. ಒಂದು ಪಕ್ಷದ ಸೋಲು, ಇನ್ನೋಂದು ಅಭ್ಯರ್ಥಿಯ ಸೋಲು ಮತ್ತೊಂದು ಮತದಾರರ ಸೋಲಾಗುತ್ತದೆ. ಪಕ್ಷದ ಸೋಲಾಗಿಲ್ಲ. ಇನ್ನು ಉಳಿದ ಎರಡು ಸೋಲಿನ ಬಗ್ಗೆ ಚಿಂತಿಸಬೇಕಿದೆ ಎಂದರು.

ಚುನಾವಣ ರಾಜಕಾರಣದಿಂದ ಹಿಂದೆ ಸರಿಯುವ ಬಗ್ಗೆ ಕಾಲಪಕ್ವವಾಗಿಲ್ಲ.‌ ನನ್ನ‌ ಆಂತರಿಕ ಹೋರಾಟಕ್ಕೆ ಹಿನ್ನಡೆಯಾಗಿಲ್ಲ. ಹೋರಾಟಕ್ಕೆ ಚುನಾವಣೆ ಒಂದು ವೇದಿಕೆ ಅಷ್ಟೆ.‌ ಸೋಲು ಗೆಲುವಿಗೆ ಕುಗ್ಗುವ, ಹಿಗ್ಗುವ ಜಾಯಮಾನ ನನ್ನದಲ್ಲ. ಯಾವುದೇ ಹೋರಾಟಕ್ಕೂ ನಾನು ಸಿದ್ದ ಎಂದರು.

ಇದನ್ನೂ ಓದಿ-https://suddilive.in/archives/16483

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close