ಸುದ್ದಿಲೈವ್/ಶಿವಮೊಗ್ಗ
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ರವರ ನೇತೃತ್ವದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ರವರಿಗೆ ಗೋ ಹಂತಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ನಿನ್ನೆ ಸಂಜೆ ಸಮಯದಲ್ಲಿ ತಮಗೆ ಬಂದ ಮಾಹಿತಿಯ ಮೇರೆಗೆ ತಾವುಗಳು ಕೆ ಎ 51 ಎ ಎಚ್ 3217 ಲಾರಿಯಲ್ಲಿ ತುಂಬಿದ್ದ ಗೋವಿನ ಮೂಳೆಗಳನ್ನು ಲಾರಿಯ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಆದರೆ
ಭದ್ರಾವತಿ ಪೊಲೀಸ್ ಉಪಾದೀಕ್ಷಕರ ಕಾರ್ಯ ವ್ಯಾಪ್ತಿಯ ಇತರೆ ಠಾಣೆಗಳಲ್ಲಿ ಗೋ ಹತ್ಯೆ ಪ್ರಕರಣ ದಾಖಲಾದರೂ ಅದರ ವಿರುದ್ಧದ ಕಠಿಣ ಕ್ರಮ ಕೈಗೊಖ್ಳದೆ ಇರುವ ಬಗ್ಗೆ ಹಿಂದೂ ಸಂಘಟನೆ ಬೇಸರ ವ್ಯಕ್ತಪಡಿಸಿದೆ.
ನಿರಂತರ ಗೋ ಹತ್ಯೆ ಗೋ ಮಾಂಸದ ಹೋಟೆಲ್ಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನಿಲ್ಲಿಸಲು ಭದ್ರಾವತಿಯಲ್ಲಿ ಇಲಾಖೆ ಈ ದಿನದವರೆಗೂ ಸಹ ಸಂಪೂರ್ಣ ಯಶಸ್ವಿಯಾಗಲು ಆಗುತ್ತಿಲ್ಲ. ಈ ದಿನವೂ ಸಹ ಭದ್ರಾವತಿಯಲ್ಲಿ ಈ ಹಿಂದೆ ದಾಳಿಗೊಳಗಾದ ಗೋಮಾಂಸದ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ಕಂಡು ಕಾಣದಂತೆ ಅಲ್ಲಿನ ಸ್ಥಳಿಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ದಿನಾಂಕ 02/02/2024 ರಂದು ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಸಂಖ್ಯೆ 0014/2024 ರಲ್ಲಿ ಪ್ರಕರಣ ದಾಖಲಾಗಿದ್ದು. ಭದ್ರಾವತಿಯ ಭದ್ರಾ ಹೊಳೆಯ ದಡದಲ್ಲಿ ಸುಮಾರು ಮೂರರಿಂದ ನಾಲ್ಕು ಟನ್ ರಷ್ಟು ಗೋವಿನ ಮೂಳೆಗಳು ದೊರೆತಿದ್ದು. ಪ್ರಕರಣ ದಾಖಲಾಗಿದೆಯೇ ಹೊರತು ಇಲ್ಲಿಯವರೆಗೂ ಸಹ ಸಂಪೂರ್ಣವಾಗಿ ತನಿಖೆ ಮಾಡಿ ಗೋ ಹಂತಕರನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಯಶಸ್ವಿಯಾಗಿಲ್ಲ.
ಅಂದರೆ ಸಾವಿರಾರು ಗೋವುಗಳನ್ನು ಕೊಂದು ಮೂಳೆಗಳನ್ನ ತಂದು ಹಾಕಿದವರನ್ನು ಪತ್ತೆ ಹಚ್ಚುವಲ್ಲಿ ಭದ್ರಾವತಿಯ ಹಳೆನಗರ ಠಾಣೆಯ ತನಿಖೆ ಅಧಿಕಾರಗಳು ಸಂಪೂರ್ಣ ವಿಫಲವಾಗಿದ್ದಾರೆ. ತಾವುಗಳು ನೆನ್ನೆ ವಶಪಡಿಸಿಕೊಂಡಿರುವಂತ ಲಾರಿಯಲ್ಲಿರುವ ಗೋಮೂಳೆಗಳು ಯಾವ ಗೋವಿನ ಕಸಾಯಿ ಖಾನೆಯಿಂದ ಬಂದದ್ದು,
ಸಾವಿರಾರು ಗೋವುಗಳನ್ನು ಹತ್ಯೆ ಮಾಡಿದವರು ಯಾರು ಅಷ್ಟೊಂದು ಗೋವುಗಳನ್ನು ಹತ್ಯೆ ಮಾಡಿ ಹಣ ಗಳಿಕೆ ಮಾಡಿಕೊಂಡಿರುವವರು ಯಾರು ಎಂಬುದನ್ನು ಮತ್ತು ಯಾವ ಯಾವ ಸ್ಥಳದಲ್ಲಿ ಗೋವನ್ನು ಹತ್ಯೆ ಮಾಡಿದ್ದಾರೆ ಎಂದು ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮತ್ತು ನಿನ್ನೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಲಾಗಿದ್ದರೂ ಇನ್ನು ಉಳಿದಂತಹ ಐದಾರು ಜನ ಓಡಿ ಹೋಗಿದ್ದು ಅವರನ್ನು ಪತ್ತೆ ಹಚ್ಚಿ ಬಂದಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲಾ ಸಮಿತಿ ಆಗ್ರಹಿಸಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಿ ಧೈರ್ಯದಿಂದ ಮೂಳೆಗಳನ್ನು ಶೇಖರಿಸಿ ರಫ್ತು ಮಾಡುತ್ತಾರೆ ಎಂದಾದರೆ ಗೋ ಹತ್ಯೆ ವಿಚಾರದಲ್ಲಿ ಇಲಾಖೆ ಮತ್ತು ಪಶುಸಂಗೋಪನ ಇಲಾಖೆಯ ನಿಷ್ಕ್ರಿಯತೆ ಎದ್ದು ತೋರುತ್ತಿದೆ.
ಮನವಿ ನೀಡುವ ಸಮಯದಲ್ಲಿ ಸಂಘಟನೆ ಹಿರಿಯರಾದ ಭೀಮರಾವ್ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸ್ವಾಸಂಚಲಕರಾದ ಉಮೇಶ್ ಗೌಡ ಕಾರ್ಯಕರ್ತರುಗಳಾದ ಕಿರಣ್ ಪಾಟೀಲ್, ಅಜಯ್, ಆನಂದ, ಪಾಟೀಲ್, ಪವನ, ಗುರು ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/16938