ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನಲ್ಲಿ ಮುಂಗಾರು ಮಳೆ ಪ್ರವೇಶಿಸಿದರೂ ಹೇಳಿಕೊಳ್ಳುವ ರೀತಿಯಲ್ಲಿ ಮಳೆಯಾಗಿರಲಿಲ್ಲ. ತೀರ್ಥಹಳ್ಳಿ ಹೊಸನಗರ, ಸಾಗರ ಭಾಗದ 10 ಗ್ರಾಮಗಳಲ್ಲಿ ಸಾಧರಣ ಮಳೆಯಾದರೂ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ.
ಆದರೆ ಇಂದು ವ್ಯಾಪಕವಾಗಿ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ನಿನ್ನೆ ರಾತ್ರಿಯಿಂದ ಸಾಧಾರಣ ಮಳೆಯಾಗುತ್ತಿದೆ. ಆದರೆ ಜೂ.9 ರಂದು ವ್ಯಾಪಕ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ಎಂಟು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ. 9 ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗಲಿದೆ. ಐದು ಜಿಲ್ಲೆಗಳಲ್ಲಿ ಚದುರಿದ ಮತ್ತು 9 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಅದರಂತೆ ವ್ಯಾಪಕ ಮಳೆಯಾಗುವ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆ ಇದೆ ಎಂದು ಇಲಾಖೆ ತಿಳಿಸಿದೆ.
ಡ್ಯಾಂಗಳು ತುಂಬ ಬೇಕಿದೆ
ಮಳೆಗಾಲ ಆರಂಭವಾಗಿದೆ. ಈ ಮಳೆ ಮುಂದಿನ 48 ಗಂಟೆಗಳ ಕಾಲ ಮುಂದುವರೆದರೆ ಡ್ಯಾಂಗಳ ಚಿತ್ರಣ ದೊರೆಯಲಿದೆ. ಸಧ್ಯಕ್ಕೆ ಭದ್ರ ಜಲಾಶಯ 117.24 ಅಡಿ ನೀರಿದೆ. ತುಂಗ ಜಲಾಶಯ ಸಣ್ಣದಾಗಿದ್ದು 588.24 ಅಡಿ ಜಲಾಶಯದಲ್ಲಿ 587.24 ಅಡಿ ಇದೆ. ಇನ್ನೇನು ಜಲಾಶಯ ತುಂಬಲಿದೆ ಎನ್ನುವುದಾದರೂ ಒಳಹರಿವಿನ ಮೇಲೆ ಅವಲಂಭಿತವಾಗಲಿದೆ.
ತುಂಗ ಜಲಾಶಯಕ್ಕೆ ಸಧ್ಯಕ್ಕೆ 600 ಕ್ಯೂ ಸೆಕ್ ನೀರು ಹರಿದು ಬರುತ್ತಿದೆ. ಈ ಕ್ಯೂಸೆಕ್ 8000-10,000 ಕ್ಯೂಸೆಕ್ ಗೆ ಏರಿಕೆಯಾದಲ್ಲಿ ಜಲಾಶಯದ ಗೇಟ್ ತೆಗೆಯುವ ನಿರೀಕ್ಷೆ ಇದೆ. ಇನ್ನೂ ಭದ್ರಜಲಾಶಯದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ. 110 ಅಡಿ ಡೆಡ್ ಸ್ಟೋರೇಜ್ ಗಿಂತ 7 ಅಡಿಗೂ ಹೆಚ್ಚು ಇದೆ ಎಂಬುದೆ ಖುಷಿಯ ಸಂಗತಿ.
ಸಧ್ಯಕ್ಕೆ 500ಕ್ಯೂಸೆಕ್ ನೀರು ಹರಿದು ಬರುತ್ತಿದೆ. 186 ಅಡಿ ಜಲಾಶಯಕ್ಕೆ ಗುಲಗಂಜಿಯಷ್ಟು ನೀರಿನ ಪ್ರಮಾಣವಾಗಿದೆ. ಇನ್ನೂ ಲಿಂಗನಮಕ್ಕಿ ಜಲಾಶಯದ ಕಥೆಯೂ ಹೀಗೆ ಇದೆ. ಆದರೆ ಮಳೆಯ ಪ್ರಮಾಣ ಹೆಚ್ಚಿಗೆ ಆದಲ್ಲಿ ಮಲೆನಾಡಿನ ಪ್ರಮುಖು ಈ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ-https://suddilive.in/archives/16542