ಸುದ್ದಿಲೈವ್/ಶಿವಮೊಗ್ಗ
ಜಮ್ಮು ಕಾಶ್ಮೀರದ ಭಯತ್ಪಾದನಾ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ರಾಷ್ಟ್ರಪತಿಗಳಿಗೆ ಡಿಸಿ ಮೂಲಕ ಮನವಿ ಸಲ್ಲಿಸಲಾಯಿತು.
ಜೂನ್ 9ರಂದು ಜಮ್ಮು ಕಾಶ್ಮೀರದಲ್ಲಿ ವೈಷ್ಟೋ ದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದೆ.
ದಾಳಿಯಲ್ಲಿ 10 ನಿರ್ದೋಷಿ ಹಿಂದೂ ಯಾತ್ರಿಕರು ಮರಣ ಹೊಂದಿದ್ದಾರೆ. ಸುಮಾರು ನಲವತ್ತು ಜನ ತೀವ್ರವಾಗಿ ಗಾಯಗೊಂಡಿರುತ್ತಾರೆ. ಈ ಕ್ರೂರಕೃತ್ಯದಿಂದ ಸಂಪೂರ್ಣ ದೇಶ ಆಘಾತಗೊಂಡಿದೆ ಮತ್ತು ತೀವ್ರ ಆಕ್ರೋಶದಲ್ಲಿದೆ.
ಜಮ್ಮು ಕಾಶ್ಮೀರವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370 ವಿಧಿಯನ್ನು ರದ್ದುಪಡಿಸಿದ ನಂತರ ಒಂದು ಆಶಾದೀಪ ಬೆಳಗಿತ್ತು. ಆದರೆ ಉಗ್ರರ ಅಟ್ಟಹಾಸವು ಇನ್ನೂ ಕಡಿಮೆಯಾಗಿಲ್ಲ. ಹಿಂದೂಗಳನ್ನು ಗುರುತಿಸಿ ಅವರ ಹತ್ಯೆಗೀಡು ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ದೇಶದ ಹೊಸ ಸರ್ಕಾರದ ಪ್ರಮಾಣವಚನದ ಸಮಯದಲ್ಲಿ ಇಂತಹ ಹೇಯ ಕೃತ್ಯವನ್ನು ಮಾಡಿ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲನ್ನು ನೀಡಿದಂತಾಗಿದೆ.
ವಿಶ್ವ ಹಿಂದೂ ಪರಿಷತ್ತು ಗತಿಸಿಹೋದ ಹಿಂದೂ ಯಾತ್ರಿಕರ ಕುಟುಂಬಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಈ ಕೃತ್ಯಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಈ ರೀತಿಯ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಲು ತಾವು ಕೇಂದ್ರ ಸರ್ಕಾರಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕಾಗಿ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘಟನೆಯ
ಜಿಲ್ಲಾ ಅಧ್ಯಕ್ಷರಾದ ವಾಸುದೇವ ಜಿ. ಜಿಲ್ಲಾ ಕಾರ್ಯದರ್ಶಿ ನಾರಾಯಣ ಜಿ, ವರ್ಣೇಕರ್
ಜಿಲ್ಲಾ ಸಂಯೋಜಕ ವಡವೇಲು ರಾಘವನ್
ಜಿಲ್ಲಾ ಉಪಾಧ್ಯಕ್ಷರಾದ ಎಸ್ ಆರ್ ನಟರಾಜ್
ಜಿಲ್ಲಾಬಾಲ ಸಂಸ್ಕಾರ ಪ್ರಮುಖರಾದ ಆನಂದ್ ರಾವ್ ಜಾದವ್, ಮಂಜು ಸುನಿ ತಮ್ಮ ಲಕ್ಷ್ಮಿ ರಾಮಚಂದ್ರಣ್ಣ, ಕಿರಣ್ ಕಾರ್ಯಕರ್ತರು ಉಪಸುತಿದ್ದರು
ಇದನ್ನೂ ಓದಿ-https://suddilive.in/archives/16758