ಭಗತ್ ಸಿಂಗ್ ಯುವಕರ ತಂಡ ಹಾಗೂ ಇತರರ ಸಂಯುಕ್ತಾಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆ

ಸುದ್ದಿಲೈವ್/ಶಿವಮೊಗ್ಗ

ವಿಶ್ವ ಪರಿಸರ ದಿನಾಚರಣೆ 2024
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ90.8 ಹಾಗೂ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜ್, ಭಗತ್ ಸಿಂಗ್ ಯುವಕರ ತಂಡ, ಮಲಕೊಪ್ಪ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಜಲ ಮೂಲ ಸಂರಕ್ಷಣೆ ಮತ್ತು ಸ್ವಚ್ಛತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಲಗೊಪ್ಪ ಶ್ರೀ ಚನ್ನಬಸವ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಜೊತೆಗೆ ಗಿಡ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಪ್ರೊಫೆಸರ್ ಹೂವಯ್ಯ ಗೌಡ ವಿಶ್ರಾಂತ ಪ್ರಾಂಶುಪಾಲರು ಸಹ್ಯಾದ್ರಿ ಕಾಲೇಜ್ ಇವರು ದೇವಸ್ಥಾನದ ಆವರಣದಲ್ಲಿ ಹೂವಿನ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ವರ್ಷದ ಘೋಷಣೆಯಾದ ಭೂಮಿ ಪುನರ್ ಸ್ಥಾಪನೆ ಮರುಭೂಮಿಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಅಂದರೆ ನಾವೀಗಾಗಲೇ ಸಾಕಷ್ಟು ಭೂಮಿಯನ್ನ ಹಾಳು ಮಾಡಿದ್ದು ಅದರ ಪರಿಣಾಮವಾಗಿ ಹಸಿರಾದ ನಾಡು ಮರುಭೂಮಿ ಆಗುತ್ತಿದೆ.

ಜೊತೆಯಲ್ಲಿ ಅನಾವೃಷ್ಟಿ ಅತಿವೃಷ್ಟಿ ಹೆಚ್ಚಾಗುತ್ತಿದ್ದು ಭೂಮಿಯ ಸಮತೋಲನ ತಪ್ಪು ತಿರುವ ಸಂಕೇತವಾಗಿದೆ ಹಾಗಾಗಿ ನಾವೆಲ್ಲ ನಮ್ಮ ಸರಳವಾದ ಜೀವನ ಶೈಲಿಯಿಂದ ಭೂಮಿಯನ್ನು ಮರು ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.

ಹಾಗೆಯೇ ಕಿಡ್ಸ್ ಸಂಸ್ಥೆಯ ಅಧ್ಯಕ್ಷರಾದ ಎಸ್ ಚಂದ್ರಶೇಖರ್ ಹಾಗೂ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಮಧು ಜಿ ರವರು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಮಧುರವರು ನೀರು ಅತ್ಯಮೂಲ್ಯವಾಗಿದೆ. ಇದರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ ನೀರಿನ ಮಟ್ಟ ಯಥೇಚ್ಛವಾಗಿ ಕುಸಿತ ಇದ್ದು ಅಂತರ್ಜಲದ ಮಟ್ಟವು ಸಹ ಕಮ್ಮಿಯಾಗುತ್ತಿದೆ.

ನಾವು ನೀರಿನ ಬಗ್ಗೆ ಹೆಚ್ಚು ಕಾಳಜಿ ತೋರಿಸಬೇಕಾಗಿದೆ ಜೊತೆಯಲ್ಲಿ ಇಂತಹ ಜಲಮೂಲಗಳ ಬಗ್ಗೆ ಅದರ ಇತಿಹಾಸವನ್ನು ತಿಳಿದು ಅದರ ಸಂರಕ್ಷಣೆಯ ಕಾರ್ಯದಲ್ಲಿ ಆಯಾ ಗ್ರಾಮದವರು ಮುಂದಾಗಬೇಕಾಗಿದೆ ಎಂದು ತಿಳಿಸಿದರು.

ನಂತರದಲ್ಲಿ ಎನ್ಎಸ್ಎಸ್ 80 ವಿದ್ಯಾರ್ಥಿಗಳು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲ್ಯಾಣಿ ತುಂಬಾ ಹಬ್ಬಿನಿಂದ ಬಳ್ಳಿಗಳು ಮತ್ತು ಕಸಗಳನ್ನಲ್ಲ ಸ್ವಚ್ಛಗೊಳಿಸಿ ಶುದ್ಧವಾದ ನೀರಿನ ಕಲ್ಯಾಣಿ ಎಲ್ಲರಿಗೂ ಕಾಣುವಂತೆ ಸ್ವಚ್ಛ ಮಾಡಿದರು. ನಂತರ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ ಪ್ರೊಫೆಸರ್ ಎಎಸ್ ಚಂದ್ರಶೇಖರ್ ಸರ್ ಅವರು ಮಾತನಾಡುತ್ತಾ ವಿಶ್ವ ಪರಿಸರ ದಿನಾಚರಣೆಯ ವಿಶೇಷತೆ ಅದರ ಮಹತ್ವ ಮತ್ತು ಇಂದು ನಾವು ಬರಿ ಗಿಡಗಳನ್ನಷ್ಟೇ ನಡೆದೆ ಇಂತಹ ಜಲಮೂಲವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಹಾಗೆ ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗದ ನಿರ್ದೇಶಕರಾದ ಜಿಎಲ್ ಜನಾರ್ಧನ್ ರವರು ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಿದರು.  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಯಾದ ಸುಮತಿ ಶಿಲ್ಪಾ  ಕಾರ್ಯಕ್ರಮದ ಸಂಯೋಜಕರಾದ ದಿನೇಶ್ ಹೊಸನಗರ ವಂದಿಸಿದರು.

ಈ ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ಉಪನ್ಯಾಸಕರು ಮತ್ತು ಗ್ರಾಮಸ್ಥರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣದಲ್ಲಿ ಶಿವಮೊಗ್ಗ ಇದರ ಅಧಿಕಾರಿ ವರ್ಗದವರು ಮತ್ತಿತರು ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/16296

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close