ಸುದ್ದಿಲೈವ್/ಶಿವಮೊಗ್ಗ
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್ ಎದುರು ರಕ್ಷ ನಿಲಯದಲ್ಲಿರುವ ಸ್ನೇಹಾಶ್ರಯ ಅರ್ಬನ್ ಆಂಡ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿಗೆ 3 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅನುಸೂಯ 38 ವರ್ಷ ಅನಾಥ ಮಹಿಳೆ ದಾಖಲಾಗಿದ್ದು, ಈಕೆ ಜೂ. 11 ರಂದು ಕಾಣೆಯಾಗಿರುತ್ತಾರೆ.
ಈಕೆ ಸುಮಾರು 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಮುಖದಲ್ಲಿ ಬಲಗಡೆ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದಂದು ಪಿಂಕ್ ಕಲತ್ ಟಾಪ್ ಹಾಗೂ ಕಪ್ಪು ಕಲರ್ ಲೆಗ್ಗಿನ್ಸ್ ಧರಿಸಿರುತ್ತಾರೆ.
ಈಕೆಯು ಎಲ್ಲಿಯಾದರೂ ಕಂಡುಬಂದಲ್ಲಿ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182-261400/ 261413/ 261416 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ-https://suddilive.in/archives/17004
Tags:
ಕ್ರೈಂ ನ್ಯೂಸ್