ಸುದ್ದಿಲೈವ್/ಶಿವಮೊಗ್ಗ
ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿಗೆ ಚಾಲನೆ ದೊರೆತಿದೆ. ಪ್ರಕೃತಿಯ ಉಳಿವು ನಿಮ್ಮ ನಿಲುವಾಗಲಿ ಎಂಬ ಘೋಷವಾಕ್ಯದ ಅಡಿಯಲ್ಲಿ ಚಿಗುರು ಎಂಬ ಕಾರ್ಯಕ್ರಮ ಜರುಗಿದೆ.
ಗಾಜನೂರಿನಲ್ಲಿ 1000 ಸಸಿಗಳನ್ನ ನೆಡುವ ಮೂಲಕ ಹನ್ನೊಂದು ಸಂಸ್ಥೆಗಳು ಪ್ರಕೃತಿಯ ಮರುಸ್ಥಾಪನೆಯ ಶಪಥ ಮಾಡಿದೆ. ಈ 11 ಸಂಸ್ಥೆಗಳಿಂದಲೇ ಹಾಗಾದರೆ ಪ್ರಕೃತಿ ಮರುಸ್ಥಾಪನೆ ಆಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲ ಅಂತನೇ ಹೇಳಬಹುದು. ಕಾರಣ ಪ್ರಕೃತಿಯ ಉಳಿವು ಪ್ರತಿಯೊಬ್ಬನ ಜವಬ್ದಾರಿಯಾಗಿದೆ.
ಜವಬ್ದಾರಿ ಬೇಜವಬ್ದಾರಿಯಾದ ಹಿನ್ನಲೆಯಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಈಗಾಗಲೇ ಅನೇಕ ಸಂಘಸಂಸ್ಥೆಗಳು ಸಸಿಗಳನ್ನ ನೆಡುವ ಕೆಲಸ ನಡೆದಿದೆ. ಇನ್ನೂ ಹೆಚ್ಚು ಹೆಚ್ಚು ಸಸಿ ನೆಡುವ ಕಾರ್ಯಕ್ರಮಗಳು ನಡೆಯಬೇಕಿದೆ. ನಮ್ಮ ಅಭಿವೃದ್ಧಿ ಮಂತ್ರಗಳು ಮರಗಳಿಗೆ ಕೊಡಲಿ ಪೆಟ್ಟು ನೀಡಿದ ನಂತರವೇ ಆರಂಭವಾಗುವುದರಿಂದ ಈ ಬಗ್ಗೆಯೂ ಚಿಂತಿಸಬೇಕಿದೆ.
ಎನಿವೇ! ಗಾಜನೂರಿನಲ್ಲಿ ಹರಿಹರದ ವಿಫಾಕ್ಸ್ ವೆಂಚರ್ ಪ್ರೈವೇಟ್ ಲಿ., ಆಚಾರ್ಯ ತುಳಿಸಿ ಕಾಲೇಜು, ಶಿವಮೊಗ್ಗದ ಸಿರಿಲಿಜನ್-ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಗಾಜನೂರಿನ ಬೃಙದಾವನ ಹೈಡ್ರೋ ಪವರ್ ಪ್ರೈವೇಟ್ ಲಿ., ಸಿರಿಗಂಧ ತಾಲೂಕು ಸ್ತ್ರೀ-ಶಕ್ತಿ ಒಕ್ಕೂಟ,
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್, ವೈಷ್ಟವ್ ಯೂನಿಫಾರಂ ಡಿಸ್ಟ್ರೀಬ್ಯೂಟರ್ಸ್, ಡಿಜಿ ಅಂಟ್ಸ್, ಶಂಕರ ವಲಯ ಅರಣ್ಯ ಇಲಾಖೆ, ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಗಾಜನೂರು ಗ್ರಾಮಪಂಚಾಯತ್ ವತಿಯಿಂದ 1 ಸಾವಿರ ಸಸಿ ನೆಡುವ ಕಾರ್ಯಕ್ರಮ ನಡೆದಿದೆ.
7 ಬಗೆಯ ಹಣ್ಣಿನ ಸಸಿಯನ್ನ ಈ ಅಭಿಯಾನದಲ್ಲಿ ನೆಡಲಾಗಿದೆ. ಕಾರಣ ಇಲ್ಲಿನ ವನ್ಯ ಜೀವಿಗಳಿಗೆ ಹಣ್ಣಿನ ಗಿಡಗಳು ಆಹಾರವಾಗಲಿ ಎಂಬ ಉದ್ದೇಶ ಹೊಂದಲಾಗಿದೆ. ಈ ಅಭಿಯಾನದಲ್ಲಿ ನಡೆಲಾದ ಸಸಿಗಳ ಜವಬ್ದಾರಿಯನ್ನೂ ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆಯೂ ಯೋಚಿಸಲಾಗಿದೆ.
ಇದನ್ನೂ ಓದಿ-https://suddilive.in/archives/17502