ಸುದ್ದಿಲೈವ್/ಭದ್ರಾವತಿ
ತಂದೆಯನ್ನೇ ಅಪ್ರಾಪ್ತ ಮಗನೋರ್ವ ಕೊಲೆ ಮಾಡಿರುವ ಘಟನೆ ಅರೆಬೆಳಚಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಶುಕ್ರರಾಜ್ ಯಾನೆ ಶುಕ್ರ(50) ಎಂದು ಗುರುತಿಸಲಾಗಿದೆ.
ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಶುಕ್ರನ ಪತ್ನಿ ಶಿಲ್ಪರಿಗೆ ಕೆಲಸಕ್ಕೆ ಹೋಗದಂತೆ ಆಗಾಗ್ಗೆ ಬುದ್ದಿಹೇಳುತ್ತಿದ್ದರು. ಪತಿಯ ಮಾತನ್ನ ನಿರ್ಲಕ್ಷಿಸಿ ಶಿಲ್ಪ ಕೆಲಸಕ್ಕೆ ಹೋಗುವುದಾಗಿ ಪ್ರತಿಪಾದಿಸುತ್ತಿದ್ದರು. ಮಾತು ಕೇಳದ ಇದ್ದಾಗ ಇಬ್ಬರ ನಡುವೆ ಆಗಾಗ್ಗೆ ಜಗಳ ಉಂಟಾಗುತ್ತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಗಲಾಟೆ ನಿನ್ನೆ ಇಬ್ವರ ನಡುವೆ ಮತ್ತೆ ಕಾಣಿಸಿಕೊಂಡಿದೆ.
ಗಲಾಟೆಯಾಗುತ್ತಿದ್ದಾಗ ಶುಕ್ರರ ಪತ್ನಿ ಶಿಲ್ಪ ಅಪ್ರಾಪ್ತ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕರೆ ಮಾಡಿದ ತಕ್ಷಣವೇ ಸ್ಥಳಕ್ಕೆ ಬಂದ ಮಗ ತಂದೆ ಶುಕ್ರನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಪ್ರಾಪ್ತನನ್ನ ಹೊಳೆಹೊನ್ನೂರು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅಪ್ರಾಪ್ತ ಮಗನ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಕ್ರರ ಪತ್ನಿ ಶಿಲ್ಪ ಮತ್ತು ಅತ್ತೆ ಪುಷ್ಪಮ್ಮ ರನ್ನ ಠಾಣೆಯಲ್ಲಿ ಕರೆತಂದು ಕೂರಿಸಲಾಗಿದೆ.
ಶುಕ್ರ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ಮಿಕನಾಗಿದ್ದಾನೆ.ಅಪ್ರಾಪ್ತ ಮಗ ಯಾವುದೇ ವಿದ್ಯಾಭ್ಯಾಸವೂ ಮಾಡುತ್ತಿರಲಿಲ್ಲ ಹಾಗೂ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ. 25 ವರ್ಷದ ಹಿಂದ ಶಿಲ್ಪ ಮತ್ತು ಶುಕ್ರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಮದುಯಾದ ದಂಪತಿಗಳಿಗೆ ಇಬ್ವರು ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ವಿರುದ್ಧ ಶುಕ್ರನಿಗೆ ಬೇಸರವಿದ್ದು ಆಕ್ಷೇಪಿಸಿದ್ದ ಈ ಕಾರಣದಿಂದಲೇ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಮೃತನ ಸಹೋದರ ಕುಬೇರಪ್ಪ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/17486