ಸುದ್ದಿಲೈವ್/ಆನವಟ್ಟಿ
ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್ ನ ಬಳಿ ಇಬ್ಬರು ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ವರನ್ನ ಬಂಧಿಸಿದ್ದಾರೆ.
ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ, ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್ಪಿ ಕೇಶವ್ ಹಾಗೂ ಸೊರಬ ಸಿಪಿಐ ಬಾಲಚಂದ್ರ ನಾಯಕ್, ಮೇಲ್ವಿಚಾರಣೆಯಲ್ಲಿ, ಆನವಟ್ಟಿ ಪಿಎಸ್ಐ ರಾಜು ರೆಡ್ಡಿ ಬೆನ್ನೂರು ಪಿಎಸ್ಐ, ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ,
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ಸುಹೇಲ್ ಮೆಹಬೂಬ್ ಅಲಿ ಮುಲ್ಲನ್ನವರ್, 27 ವರ್ಷ, ಗುಡ್ಡದ ಮಲ್ಲಾಪುರ, ಬ್ಯಾಡಗಿ ತಾಲ್ಲೂಕು ಹಾವೇರಿ ಮತ್ತು 2) ಗೌಸ್ ಮೊಹಿದ್ದೀನ್ ಶಾ, 26 ವರ್ಷ, ತಿಳುವಳ್ಳಿ ಗ್ರಾಮ ಹಾವೇರಿ ಇವರನ್ನು ಬಂಧಿಸಲಾಗಿದೆ, ಆರೋಪಿತರಿಂದ ಅಂದಾಜು ಮೌಲ್ಯ 40,000/- ರೂಗಳ 980 ಗ್ರಾಂ ತೂಕದ ಒಣ ಗಾಂಜಾವನ್ನು, ಗಾಂಜಾ ಮಾರಾಟ ಮಾಡಿ ಗಳಿಸಿದ ರೂ 600/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು, ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇನ್ನೂ ಓದಿ-https://suddilive.in/archives/17875