ಈಶ್ವರಪ್ಪನವರ ಮುಂದಿನ ರಾಜಕೀಯ ನಡೆ ಏನು? ರಾಘವೇಂದ್ರರ ಸ್ವಕ್ಷೇತ್ರದಲ್ಲಿ ಏನಾಗ್ತಿದೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಲೋಕಸಭ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರರಿಗೆ ಹೆಚ್ಚಿನ ಅಂತರ, ಭರ್ಜರಿ ಗೆಲವು ತಂದುಕೊಟ್ಟಿದೆ. 2,43,715 ಮತಗಳ ಅಂತದರಿಂದ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಿ ಗೆಲುವಿನ ಪತಾಕಿ ಹಾರಿಸಿದ್ದಾರೆ.

ಆದರೆ ಅವರ ಅಂತರ ವಿಧಾನಸಭೆ ಕ್ಷೇತ್ರವಾರು ಕಾಣುವುದಾದರೆ, ಎಲ್ಲಾ ಮತಕ್ಷೇತ್ರಗಳಲ್ಲಿ ಉತ್ತಮ ಲೀಡ್ ಬಂದರೂ, ಅವರ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಮತಗಳ ಅಂತರ ಕಡಿಮೆಯಾಗಿದೆ. 11,481 ಮತಗಳ ಅಂತರ ಪಡೆದುಕೊಂಡಿದ್ದಾರೆ. ಇದೊಂದು ಎಚ್ಚರಿಕೆಯ ಗಂಟೆನಾ ಎಂಬ ಚರ್ಚೆ ಆರಂಭವಾಗಿದೆ.

ಬಿ.ವೈ.ರಾಘವೇಂದ್ರ ತಾವೆ ಇಷ್ಟೊಂದು ಅಂತರದಲ್ಲಿ ಗೆಲ್ತಿವಿ ಎಂಬ ಅಂತರದ ಬಗ್ಗೆ ತಮಗೆ ಅನಿಸಿತ್ತೋ ಇಲ್ಲವೋ ಗೊತ್ತಲ್ಲ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿ.ವೈ.ವಿಜೇಂದ್ರ 10,800ಕ್ಕೂ ಹೆಚ್ಚು ಮತಗಳ ಅಂತರ ದಲ್ಲಿ ಗೆದ್ದು ಟೀಕೆಗೆ ಒಳಗಾಗಿದ್ದರು. 2018 ರ ವಿಧಾನ ಸಭ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ 36 ಸಾವಿರ ಮತಗಳ ಅಂತರದಲ್ಲಿ ಗೆದ್ದು ಸಿಎಂ ಆಗಿದ್ದರು.

ಆದರೆ ಬರ್ತಾ ಬರ್ತಾ ಅದರ‌ ಅಂತರ ಕಾದುಕೊಳ್ಳುವಲ್ಲಿ ಅವರ ಪುತ್ರರ ಶ್ರಮ ಕಡಿಮೆಯಾಗಿದೆ. ಕಾರಣ ಹಲವಾರು ಇರಬಹುದು. ಅದನ್ನ ಗುರುತಿಸಿ ಹೆಜ್ಜೆ ಇಟ್ಟರೆ ಚೇತರಿಸಿಕೊಳ್ಳಬಹುದು ಅಂತ ರಾಜಕೀಯ ತಜ್ಞರ ಸಲಹೆ. ಅರಿಯದೆ ಈ ಗೆಲುವು ಹೀಗೆ ಇರುತ್ತೆ ಎಂದುಕೊಂಡರೆ ಮುಂದಿನ ದಿನಗಳು ಕಷ್ಟವಾಗಬಹುದು.

ಸೂಯಿಸೈಡ್ ಅಟೆಂಪ್ಟ್ ಮನನ ಅಡಿಕೊಂಡ್ರಾ ಈಶ್ವರಪ್ಪ?

ಮಾಜಿ ಡಿಸಿಎಂ ಈಶ್ವರಪ್ಪ ಬಿಜೆಪಿಯಿಂದ ಬಂಡಾಯ ಎದ್ದು ಬಿಎಸ್ ವೈ ಕುಟುಂಬ ರಾಜಕಾರಣದಿಂದ ಪಕ್ಷದ ಶುದ್ಧೀಕರಣ ಮಾಡುವೆ ಎಂದು ಲೋಕಸಭೆ ಚುನಾವಣೆಯ ಅಖಾಡಕ್ಕಿಳಿದಿದ್ದರು. ಆದರೆ ಠೇವಣಿ ಸಿಕ್ಕಿಲ್ಲ. ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಕ್ಷದ ಬಲಗೊತ್ತಿದ್ದರೂ ಈ ನಿರ್ಧಾರಕ್ಕೆ ಬಂದಿದ್ದು ಸೂಯಿಸೈಡ್ ಅಟೆಂಪ್ಟ್‌ ಮಾಡುದ್ರಾ? ಎನಿಸಿದೆ ಮುಂದಿನ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ  ಕುತೂಹಲವೂ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/16254

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close