ಡೇಂಗ್ಯು ನಿಯಂತ್ರಣಕ್ಕೆ ಆಯುಕ್ತರ ನೇತೃತ್ವದಲ್ಲಿ ವಿಶೇಷ ಸಭೆ

ಸುದ್ದಿಲೈವ್/ಶಿವಮೊಗ್ಗ

ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣಕ್ಕ ಕ್ರಮ ಜರುಗಿಸಲು ಇಂದು ಮಹಾನಗರ ಅಲಿಕೆಯ ನೂತನ ಆಯುಕ್ತೆ ಕವಿತಾ ಯೋಗಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ

ಡೇಂಗ್ಯೂ ಕಾಯಿಲೆ ರಾಜ್ಯಾದ್ಯಂತ ಉಲ್ಬಣವಾಗುತ್ತಿದ್ದು ಜಿಲ್ಲೆ ಮತ್ತು ನಗರದಲ್ಲೂ ಜನರನ್ನ ಬಾಧಿಸ ತೊಡಗಿದೆ. ಈ ಖಾಯಿಲೆಯ ಕುರಿತಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲು ಕಾರ್ಯಗಾರವನ್ನೂ ನಡೆಸಲಾಗಿದೆ.

ಪ್ರತಿ 15 ದಿನಕ್ಕೊಮ್ಮೆ 35 ವಾರ್ಡ್ ಗಳಲ್ಲಿ ಫಾಗ್ ಹೊಡೆಸುವುದು. ಫಾಗ್ ಹೊಡೆಸುವ ಮುನ್ನ ಆರೋಗ್ಯ ಇಲಾಖೆಯ ಜೊತೆ ನಗರದ ಸರ್ವೆ ಮಾಡಿಸಲು ಸಭೆ ನಿರ್ಣಯ ತೆಗೆದುಕೊಂಡಿದೆ. ಸರ್ವೆಯಲ್ಲಿ ಲಾರ್ವಗಳನ್ನ ಪತ್ತೆಹಚ್ಚಲು ತೀರ್ಮಾನಿಸಲಾಗಿದೆ.

ಸಭೆ ಇಂದು ಮಧ್ಯಾಹ್ನ 3 ಗಂಟೆಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪಾಲಿಕೆಯ ಆಯುಕ್ತರಾದಂತಹ ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಮೋಘ್ ಎಸ್ ಕವಲಗಿ ಹಾಗೂ ಪರಿಸರ ಅಭಿಯಂತರರಾದ ಕೃಷ್ಣಮೂರ್ತಿ ಪಶು ವೈದ್ಯಧಿಕಾರಿಗಳಾದಂತಹ ಡಾಕ್ಟರ್ ರೇಖಾ ಮತ್ತು ತಾಲೂಕು ವೈದ್ಯಾಧಿಕಾರಿಗಳದ ಚಂದ್ರಶೇಖರ್ ರವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/17765

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close