ಸುದ್ದಿಲೈವ್/ಶಿವಮೊಗ್ಗ
ನಮ್ಮ ತಂದೆಯ ಸಾವಿಗೆ ನ್ಯಾಯ ಸಿಗಬೇಕು ಹಾಗಾಗಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಪುತ್ರ ಶಿಶಿರ ಆಗ್ರಹಿಸಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಅವರು ಇಬ್ಬರು ಅಧಿಕಾರಿಗಳ ಅರೆಸ್ಟ್ ಆಗಿದೆ. ಮಹಿಳಾ ಅಧಿಕಾರಿ ಇನ್ಬೂ ಅರೆಸ್ಟ್ ಆಗಿಲ್ಲ. ನಮ್ಮ ತಂದೆಯ ತಪ್ಪಿಲ್ಲ. ಸಚಿವರು, ಎಂಡಿ ಹಣ ತಿಂದಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ನಮ್ಮ ತಂದೆಯ ಮೇಲೆ ಆರೋಪ ಹೊರಿಸಿದ್ದಾರೆ. ಸತ್ಯ ಹೊರ ಬರಬೇಕಾದರೆ ಸಿಬಿಐ ತನಿಖೆ ಆಗಬೇಕು. ಇಲ್ಲದಿದ್ದರೆ ಪ್ರಕರಣ ಮುಚ್ಚಿ ಹಾಕ್ತಾರೆ. ಸಿಬಿಐ ತನಿಖೆ ನಡೆದರೆ ಪ್ರಕರಣ ಹೊರಗೆ ಬರುತ್ತದೆ. ಈಗಾಗಿ ಸಿಬಿಐ ತನಿಖೆಗೆ ಕೊಡಲೇ ಹೊರಬೀಳಲಿದೆ ಎಂದು ಆಗ್ರಹಿಸಿದರು.
ಇದನ್ಬೂ ಓದಿ-https://suddilive.in/archives/15959
Tags:
ರಾಜಕೀಯ ಸುದ್ದಿಗಳು