ಸರ್ಕಾರಿ ಶಾಲೆಯಲ್ಲಿ ಹಾಲು ಸಕ್ಕರೆ ರಾಗಿ ಮಾಲ್ಟ್ ನೀರುಪಾಲು

ಸುದ್ದಿಲೈವ್/ಶಿವಮೊಗ್ಗ

ಕಾಮಾಕ್ಷಿ ಬೀದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಹಾಲಿನ‌ಪ್ಯಾಕೆಟ್, ರಾಗಿ ಮಾಲ್ಟ್ ಮತ್ತು ಸಕ್ಕರೆ ಪದಾರ್ಥಗಳು ಹಾಳಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮಾಕ್ಷಿ ಬೀದಿ ಸರಕಾರಿ ಹಿರಿಯ ಪ್ರಾಥಮಿಕಶಾಲೆಯ  ಜೂನ್ 24 ರಂದು ಬೆಳಿಗ್ಗೆ 09.30 ಗಂಟೆಗೆ ಮುಖ್ಯಶಿಕ್ಷಕರು ಶಾಲೆಗೆ ಬಂದಾಗ ಶಾಲೆಯಆಡುಗೆ ಮನೆಯಬೀಗ ಮುರಿದು ಹಾಳು ಮಾಡಿರುವ ಬಗ್ಗೆ ಗಮನಕ್ಕೆ ಬಂದಿರುತ್ತದೆ.

ಒಳ ಹೋಗಿ ನೋಡಿದಾಗ ಗ್ಯಾಸ್‌ ಆನ್‌ ಆಗಿದ್ದು, ಹಾಲಿನ ಪುಡಿ 1 ಪ್ಯಾಕ್, ಸಕ್ಕರೆ 1/2 ಕೆಜಿರಾಗಿ ಮಾಲ್ಟ್ 1/2 ಕೆ.ಜಿ ಇವುಗಳನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಾಳು ಮಾಡಿ ಹೋಗಿರುತ್ತಾರೆ, ಈ ಹಿಂದೆಯುಕೂಡಾ ಬೀಗ ಮಾತ್ರ ಹಾಳಾಗಿದ್ದು, ಯಾವುದೇ ವಸ್ತುಗಳು ಹಾಳಾಗಿರಲಿಲ್ಲ.

ಇದರಿಂದ ಶಾಲೆಗೆ ಸುಮಾರು 500/-ರೂ ಹಣ ಲುಕ್ಸಾನ್‌ ಆಗಿದ್ದು, ಆದ್ದರಿಂದ ಶಾಲೆಯ ಬೀಗ ಒಡೆದು ಒಳಗಿನ ದಿನಸಿ ಹಾಳು ಮಾಡಿದ ಆರೋಪಿಯ ಮುಖ್ಯ ಶಿಕ್ಷಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/17856

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close