ಡಾ.ಎಂಕೆ ಶ್ರೀದರ್ ಗೆ ಅಭಿನಂದನ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಪೀಪಲ್ಸ್ ಫಾರಂನ ವತಿಯಿಂದ ವರ್ಷದಲ್ಲಿ ಅನೇಕ ಕಾರ್ಯಕ್ರಮವನ್ನ‌ಹಮ್ಮಿಕೊಳ್ಳಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ 50 ವರ್ಷಗಳಿಂದ ಶಿಕ್ಷಣದಲ್ಲಿ ಬದಲಾವಣೆ ತಂದ‌ ಡಾ.ಎಂ.ಕೆ.ಶ್ರೀಧರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಇವರಿಗೆ ಸನ್ಮಾನ ಮತ್ತು ಅಭಿನಂದನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಭೂಪಾಳಂ ಶಶಿಧರ್ ಅವರ ಅಕ್ಕನ ಮಗ ಈ ಡಾ.ಎಂ.ಕೆ ಶ್ರೀಧರ್ ಆಗಿದ್ದಾರೆ.‌ಜೂ.22 ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದಾರೆ.

ಕರ್ನಾಟಕ ನಾಲೆಡ್ಜ್ ಸಂಸ್ಥೆ, ಚಾಣುಕ್ಯ ವಿವಿಯಲ್ಲಿ ಸಙಸ್ಥಾಪಕ ಚಾನ್ಸಲರ್ ಆಗಿದ್ದಾರೆ. ಮ್ಯಾನೇಜ್ ಮೆಂಟ್ ನ ಡೀನ್ ಆಗಿದ್ದರು. ಕೇರಳ ವಿವಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಕರಡು ರಚನ ಸಮಿತಿ ಸದಸ್ಯರಾಗಿದ್ದರು. ಸಂವಾದ ಕಾರ್ಯಕ್ರಮವನ್ನ ನಡೆಸಯವ ಬಗ್ಗೆ ಯೋಚಿಸಲಾಗುತ್ತದೆ ಎಂದು ವಿಧಾನ‌ಪರಿಷತ್ ಸದಸ್ಯ ಡಿ.ಎಸ್ ಅರುಣ್ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬದಲಾಗುತ್ತಿರುವ ಭಾರತದ ಭರವಸೆಯ ಶಿಕ್ಷಣ ಕುರಿತು ಸಂವಾದ ಕಾರ್ಯಕ್ತಮ ನಡೆಯಲಿದೆ. ಸುದ್ದಿಗೋಷ್ಠೊಯಲ್ಲಿ ಡಾ.ರವಿ, ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/17329

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close