ಸುದ್ದಿಲೈವ್/ಶಿವಮೊಗ್ಗ
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಚುನಾವಣೆ ಪ್ರಕ್ರಿಯೆಯಲ್ಲಿ ಇಂದು ನಾಮಪತ್ರ ವಾಪಾಸ್ ಪಡೆಯಲುಕೊನೆಯ ದಿನಾಂಕವಾಗಿದೆ. ಏಳು ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಜೂ.20 ರಂದು 35 ಜನ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರ ಪರಿಶೀಲನೆ ಮುಗಿದಾಗಲೂ ಯಾರ ನಾಮಪತ್ರವೂ ತಿರಸ್ಕೃತವಾಗಿರಲಿಲ್ಲ.
ಆದರೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಏಳು ಜನರು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ 28 ಜನ ಮಾತ್ರ ಅಖಾಡದಲ್ಲಿ ಉಳಿದಿದ್ದಾರೆ. 28 ಜನರಲ್ಲಿ 13 ಜನರು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜೂ.28 ಶುಕ್ರವಾರ ಚುನಾವಣೆ ನಡೆಯಲಿದೆ.
ಹೊಸನಗರದ ಪರಮೇಶ್ವರ್ ಒಬ್ಬರೇ ಅವಿರೋಧ ಆಯ್ಕೆಯಾಗಲಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದ್ದ ಎಂ.ಶ್ರೀಕಾಂತ್, ವಿಜಯ ಕುಮಾರ್(ಧನಿ), ಹೆಚ್ ಜಿ ಮಲ್ಲಯ್ಯ, ಆರ್ ಸಿ ನಾಯ್ಕ್, ದುದ್ದೇಶ್, ಹೆಚ್ ಎನ್ ವಿಜಯಕುಮಾರ್, ಹೆಚ್ ಮಲ್ಲಿಕಾರ್ಜುನ್ ನಾಮಪತ್ರ ಹಿಂಪಡೆದಿದ್ದಾರೆ.
ದುಗ್ಗಪ್ಪಗೌಡ, ಆರ್ ಎಂ.ಮಂಜುನಾಥ್ ಗೌಡ,ಗೋಪಾಲಕೃಷ್ಣ ಬೇಳೂರು, ಎಸ್ ಕೆ ಮರಿಯಪ್ಪ, ಎಸ್ಪಿ ದಿನೇಶ್, ಯೋಗೀಶ್, ಡಿ.ಆನಂದ್, ಪರಮೇಶ್ವರ್, ಸೇರಿದಂತೆ 28 ಜನ ಅಖಾಡದಲ್ಲಿ ಉಳಿದಿದ್ದಾರೆ.
ಇದನ್ನೂ ಓದಿ-https://suddilive.in/archives/17510