ಸುದ್ದಿಲೈವ್/ಶಿವಮೊಗ್ಗ
ಚೆಫ್ ಚಿದಂಬರ ಚಿತ್ರ ತಂಡದಿಂದ ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ನಟ ಅನಿರುದ್ಧ್ ಇದೊಂದು ಹೊಸ ಪ್ರಯೋಗದ ಚಿತ್ರವೆಂದು ಬಣ್ಣಿಸಿದ್ದಾರೆ.
ಚಿತ್ರದಲ್ಲಿ ಸಾಹಿತ್ಯ, ಸಂಗೀತ ಉತ್ತಮ ವಾಗಿದೆ. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.ಸಿನಿಮಾ ನೋಡಿ ಚಿತ್ರ ತಂಡವನ್ನು ಜನ ಪ್ರೋತ್ಸಾಹಿಸಬೇಕು. ವಿನೂತನ ಪ್ರಯತ್ನದ ಮೂಲಕ ಸಿನಿಮಾ ಮಾಡಿದ್ದೇವೆ. ಮನೋರಂಜನೆಗೆ ಬೇಕಾದ ಎಲ್ಲಾ ಅಂಶ ಈ ಚಿತ್ರದಲ್ಲಿದೆ ಎಂದರು.
ಇದು ನನ್ನ 24 ನೇ ಚಿತ್ರವಾಗಿದೆ. ಚಿತ್ರವನ್ನ ಚಲನಚಿತ್ರ ಮಂದಿರಕ್ಕೆ ಬಂದು ಜನ ನೋಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ದರ್ಶನ್ ಪ್ರಕರಣ ವಿಚಾರ
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರು ಆರೋಪಿಯಾಗಿದ್ದಾರೆ. ಇದೊಂದು ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅನ್ನೋದು ಸಮಂಜಸ ಅಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ದರ್ಶನ್ ಒಳ್ಳೆಯ ನಟರು ಅವರ ಜೀವನದಲ್ಲಿ ಈ ಘಟನೆ ಆಗಬಾರದಿತ್ತು. ಇದೊಂದು ದುಸ್ಥಿತಿ ಅಂತ ಹೇಳಬಹುದು. ಎಲ್ಲರಿಗೂ ಇದೊಂದು ಎಚ್ಚರಿಕೆ ನಿಜ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳ ಚರ್ಚೆ ಜೋರಾಗಿದೆ. ಆದರೆ ಅದನ್ನ ಹೇಗೆ ಬಳಸುತ್ತೇವೆ ಅನ್ನೊದನ್ನೂ ಚಿಂತಿಸಬೇಕು ಎಂದರು.
ಎಲ್ಲದಕ್ಕೂ ಕಾನೂನು ಇದೆ ಕಾನೂನಿಗೆ ನಾವು ಬದ್ಧವಾಗಿರಬೇಕು. ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಸಾಕಾಗಿತ್ತು. ಈ ಘಟನೆ ಆಗಬಾರದಿತ್ತು ತುಂಬಾ ಬೇಜಾರಾಗುತ್ತಿದೆ. ಇದರಿಂದ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಎನ್ನುವುದು ಸರಿಯಲ್ಲ ಎಂದರು.
ಇದನ್ನೂ ಓದಿ-https://suddilive.in/archives/17245