ಸುದ್ದಿಲೈವ್/ಶಿವಮೊಗ್ಗ
ಚುನಾವಣೆಯ ವೇಳೆ ಆತಂಕದಲ್ಲಿದ್ದಾಗ ಸಂತೈಸಿದ್ದು ಬಿಜೆಪಿಯ ಹಿರಿಯ ಮುಖಂಡ ಭಾನು ಪ್ರಕಾಶ್ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ನಗರ ಘಟಕ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಎನ್ ಹೆಚ್ ಗೆ 8 ವಿಭಾಗವಿದೆ ರಾಜ್ಯಕ್ಕೆ 5 ಸಾವಿರಕೋಟಿ ರೂ. ಇದ್ದರೆ. ಶಿವಮೊಗ್ಗಕ್ಕೆ ಎರಡು ಸಾವಿರ ಕೋಟಿ ಹಣ ಬಿಡುಗಡೆ ಆಗಿದೆ. ಶಿವಮೊಗ್ಗಕ್ಕೆ ಏನೇನು ಜಡಿಮೆ ಇದೆ ಅದನ್ನ ನಾಡೋಣ, ಉದ್ಯೋಗದ ಹಬ್ ಆಗಬೇಕಿದೆ.
ಇವತ್ತು ಹೋಳಿಗೆ ಊಟ ಮಾಡುವ ಸ್ಥಿತಿಯಲ್ಲಿ ನಮ್ಮ ಮನೆ ಇಲ್ಲ. ಇಂತಹ ಸಂದರ್ಭದಲ್ಲಿಯೂ ಇವತ್ತು ಇಲ್ಲಿಗೆ ಬಂದಿದ್ದೇನೆ ಎಂದರೆ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿರುವೆ. ಯಡಿಯೂರಪ್ಪನವರನ್ನ ರಾಜಕೀಯವಾಗಿ ಮುಗಿಸಲು ಹೊರಟ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿರುವುದು ನಿಮ್ಮ ಋಣ ತೀರಿಸಲು ಎಂದರು.
ಮೆಗ್ಗಾನ್ ನ ಮಕ್ಕಳ ವಿಭಾಗದಲ್ಲಿ ಒಮ್ಮೆ ಬೆಂಕಿ ಹೊತ್ತುಕೊಂಡಿತ್ತು. ಪ್ರಾಣಾಪಾಯದಿಂದ ಪಾರು ಮಾಡಿದ್ದು ಡಾ.ಸರ್ಜಿ ಅವರು. ಅರೊಂದಿಗೆ ನಮ್ಮಕ್ಷೇತ್ರವನ್ನ ಅಭಿವೃದ್ಧಿ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಎಂ ಎಲ್ ಸಿ, ಡಿ.ಎಸ್.ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಘಟಕದ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ನರಸಿಂಹ ಗಂಧದ ಮನೆ, ರಘು ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/16872