ಸುದ್ದಿಲೈವ್/ಶಿವಮೊಗ್ಗ
ಡಿಸಿಸಿ ಬ್ಯಾಂಕ್ ನಲ್ಲಿ ನೇಮಕಗೊಂಡಿರುವ ಹುದ್ದೆಗಳಲ್ಲಿ ಸಹಕಾರಿ ಪಾವಿತ್ರತೆ ಹಾಳಾಗಿದೆ. ಸಹಕಾರಿ ನಿಯಮಗಳನ್ನ ಗಾಳಿಗೆ ತೂರಿದವರನ್ನ ಮತ್ತೆ ಚುನಾವಣೆಯಲ್ಲಿ ಆರಿಸದಂತೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮತದಾಋಲ್ಲಿ ಮನವಿ ಮಾಡಿಕೊಂಡರು.
ನ್ಯಾಯಾಲಯದ ತಡೆಯಿದ್ದರೂ ಡಿಸಿಸಿ ಬ್ಯಾಂಕ್ ಪರೀಕ್ಷಾರ್ಥಿಗಳಿಗೆ ಸಾಲಕೊಡಿಸಿ ಆ ಸಾಲವನ್ನೇ ಲಂಚ ಪಡೆದು ನೇಮಕಾತಿಯಾಗಿದೆ. ಈಗ ಆ ಬ್ಯಾಂಕ್ ಗೆ ಚುನಾವಣೆ ನಡೆಯಲಿದೆ. ಸಂಸದರು ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಗೆಲ್ಲಲು ಓಡಾಡುತ್ತಿದ್ದಾರೆ.
ಮತ್ತೆ ತಮ್ಮವರನ್ನ ಕರೆತಂದರೆ ಪ್ರಕರಣ ಮುಚ್ಚುಹಾಕಿ ಆರೋಪಿಗಳ ಬೆನ್ನಿಗೆ ನಿಂತಂತೆ ಕಂಡು ಬರುತ್ತಿದೆ. ಮತದಾರರು ಎಚ್ಚರಿಕೆಯಿಂದ ಮತಚಲಾಯಿಸಬೇಕು. 63 ಕೋಟಿ ಪ್ರಕರಣವೂ ಸಿಒಡಿ ತನಿಖೆಯಾಗಿದೆ. ಈ ಹಿಂದಿನದ ನೇಮಕಾತಿ ಹಗರಣವೂ ತನಿಖೆಯಾಗಲಿ ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು.
ಈ ಹಿಂದೆ ಕೆ.ಎಲ್ ಅಶೋಕ್ ಅವರು ನೇಮಕಾತಿ ವಿರುದ್ಧ ದೂರು ಬಂದಾಗ ತಾವು ಮಾತನಾಡದೆ ಈಗ ಮಾತನಾಡುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಆಯನೂರು, ಅದು ನನ್ನ ಗಮನಕ್ಕೆ ಇಲ್ಲವೆಂಬ ಮಾತು ಅಚ್ಚರಿ ಮೂಡಿಸಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ತಮಗೆ ಮತಹಾಕುವಂತೆ ಲಕ್ಷರೂಗಳನ್ನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಮಿಷವೊಡ್ಡಿರುವ ಅನುಮಾನವಿದೆ. ನಾನು ಪರಿಷತ್ ಚುನಾವಣೆಯಲ್ಲಿ ಬಾಟಲಿ ಎದುರು ಸೋತಿದ್ದೇನೆ. ಯಾವ ಪಕ್ಷದ ಅಥವಾ ಅಭ್ಯರ್ಥಿಗಳ ವಿರುದ್ಧ ಸೋತಿಲ್ಲ. ಬಾಟಲಿ ವಿರುದ್ಧ ಸೋತಿದ್ದೇನೆ. ಹಾಗಾಗಿ ನನಗೆ ಬೇಸರವಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ನ ನೇಮಕಾತಿಗೆ ಸಂಬಂಧಿಸಿದಂತೆ ಹಗರಣ ನಡೆದಿದೆ ಎಂದು ಮೊಟ್ಟಮೊದಲ ಬಾರಿಗೆ ಮಂಜುನಾಥ್ ಮಾತನಾಡಿ, 98 ಅಭ್ಯರ್ಥಿಗಳ ನೇಮಕಾತಿಯಾಗಿದೆ. ಅಧಿಸೂಚನೆಯಲ್ಲಿ ಇದ್ದ ನಿಯಮಗಳನ್ನ ಗಾಳಿಗೆ ತೂರಿ, ಭ್ರಷ್ಠಾಚಾರದಿಂದ ನೇಮಕವಾಗಿದೆ. ಡಿಸಿ ಮತ್ತು ಡಿಆರ್ ಗೆ ಮನವಿ ಕೊಟ್ಟರು ಕ್ರಮವಾಗಿರಲಿಲ್ಲ ಎಂದು ದೂರಿದರು.
ನ್ಯಾಯಾಲಯಕ್ಕೆ ಹೋಗಿದ್ದು ನ್ಯಾಯಾಲಯವು ನೋಟೀಸ್ ನೀಡಲಾಗಿದೆ. ನಮಗೆ ಹಣದ ಬಗ್ಗೆ ಬೇಡಿಕೆ ನೀಡಿಲ್ಲ. ಪ್ರಶ್ನೆ ಪತ್ರಿಕೆ ವಾಪಾಸ್ ನೀಡುವಂತೆ ಸೂಚನೆ ನೀಡಿ ಪ್ರಶ್ನೆ ಪತ್ರಿಕೆ ವಾಪಾಸ್ ಪಡೆದಿದ್ದಾರೆ. ಇದು ನಿಯಮಬಾಹಿರವಾಗಿದೆ ಎಂದರು.
ಇದಾದ ನಂತರ ವೆಬ್ ಸೈಟ್ ನಲ್ಲಿ ಪ್ರಶ್ನೆ ಪತ್ರಿಕೆಯನ್ನ ಪ್ರಕಟಿಸಕಾಗಿದೆ. ಹೀಗಾಗಿ ನ್ಯಾಯಾಲಯಕ್ಕೆ ಹೋಗಿದ್ದೆವು. ಪ್ರಶ್ನೆ ಪತ್ರಿಕೆಗಳು ನಾಲ್ಕು ಶ್ರೇಣಿಯಲ್ಲಿತ್ತು. ಕೆಎಎಸ್ ಪ್ರಶ್ನೆಪತ್ರಿಕೆಗಳನ್ನೇ ವಾಪಾದ್ ಪಡೆಯಲ್ಲ. ಇಲ್ಲಿ ಪಡೆಯಲಾಗಿದೆ ಎಂದು ದೂರಿದರು.
ಇದನ್ನೂ ಓದಿ-https://suddilive.in/archives/17884