ಪರಿಷತ್ ಮತ್ತು 'ಲೋಕ' ಗೆದ್ದ ಬಿಜೆಪಿಗೆ ಕೈಕೊಟ್ಟ ಸಹಕಾರಿ ಕ್ಷೇತ್ರ -ಅವಲೋಕನ ಸಭೆ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳ ಸೋಲಿನ ಬೆನ್ನಲ್ಲೇ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಅವಲೋಕನ ಸಭೆ ನಡೆದಿದೆ.

ಸಭೆಯಲ್ಲಿ ಎದುರಾಳಿಗಳು ಅಧಿಕಾರ ದುರ್ಬಳಕೆಯಾಗಿದೆ. ಲಿಮಿಟ್ ಹೊಡುದ್ರು, ಸಾಲ ನೀಡುವಲ್ಲಿ, ಒಡಿ ಕೊಡುವಲ್ಲಿ ಹಾಗೂ ಅಧಿಕಾರಿಗಳ ಅಧಿಕಾರಿವನ್ನೂ ದುರ್ಬಳಕೆ ಆಗಿದೆ. ಹೇರಳವಾದ ಹಣ ಚೆಲ್ಲಿ ಗೆದ್ದಿರಯವ ಬಗ್ಗೆ ಚರ್ಚೆ ಆಗಿದೆ.

ಮತದಾರರಿಗೆ ಆಮಿಷವೊಡ್ಡಿ ಚುನಾವಣೆ ನಡೆದಿದೆ ಎಂಬುದು ಅವಲೋಕನ ಸಭೆಯಲ್ಲಿ ತೀರ್ಮಾನಿಸಲಾಯಿತು.  ಆದರೆ ಮತದಾರರ ಮೇಲೆ ಆಮಿಷವೊಡ್ಡಿದ ಅನುಮಾನವಿರುವುದರಿಂದ ಕಾನೂನಾತ್ಮಕ ಹೋರಾಟಕ್ಕೆ ಪಕ್ಷ ಮುಂದಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ಮತ್ತೊಂದು ಕಡೆ ಸಭೆಯಲ್ಲಿ ಹಿಂದೆಂದೂ ನೀಡದ ಪೈಪೋಟಿ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನಾ ಶಕ್ತಿ ಹೆಚ್ಚಿಸಿಕೊಳ್ಳುವ ಸಲಹೆಗಳು ಕೇಳಿ ಬಂದಿದೆ.

ಲೋಕಸಭಾ ಚುನಾವಣೆ, ಎಂಎಲ್ ಸಿ ಚುನಾವಣೆ ಗೆದ್ದ ಬಿಜೆಪಿಗೆ ಸಹಕಾರ ಕ್ಷೇತ್ರದ ಚುನಾವಣೆ ಕೈ ಹಿಡಿದಿಲ್ಲ. ಹಿಂದಿನ ಬಾರಿ 4 ಜನರನ್ನ ಹೊಂದಿದ್ದ ಬಿಜೆಪಿ ಈ ಬಾರಿ ಒಂದು ಸ್ಥಾನವನ್ನ ಮಾತ್ರ ಗೆದ್ದಿದೆ.

ಚನ್ನವೀರಪ್ಪನವರು ಈ ಬಾರಿ ಸ್ಪರ್ಧಿಸಲಿಲ್ಲ, ಡಿ ಭೂಕಾಂತ್, ಅಗಡಿ ಅಶೋಕ್, ಕೀರ್ತಿರಾಜ್ ಸಹಕಾರಿ ಭಾರತದಿಂದ ಗೆಲ್ಲುತ್ತಿದ್ದರು. ಈ ಬಾರಿ ಶಿಕಾರಿಪುರದ ಬಸವರಾಜ್ ಒಬ್ಬರೆ ಗೆದಿದ್ದಾರೆ. ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದರು, ಶಿವರಾಜ್ ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/18107

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close