ಡಾ.ಸರ್ಜಿ ಮತಚಲಾವಣೆ, ಅಪಪ್ರಚಾರದ ಬಗ್ಗೆ ಸರ್ಜಿ ಪ್ರತಿಕ್ರಿಯೆ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಮತ್ತು ಶಿಕ್ಚಕರ ಕ್ಷೇತ್ರಕ್ಕೆ ಇಂದಿನಿಂದ ಮತದಾನ ಆರಂಭವಾಗಿದೆ. ನೋಂದಣಿಗೊಂಡ ಪದವೀಧರರು ಮತ್ತು ಶಿಕ್ಷಕರು ಮತದಾನಕ್ಕೆ ಧಾವಿಸುತ್ತಿದ್ದಾರೆ.

ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಯಲ್ಲಿ ಇದರ ಮತದಾನ ಆರಂಭವಾಗಿದೆ. ಇಂದಿನಿಂದ 9 ಗಂಟೆಯಿಂದ ಸಂಜೆ 4 ಯವರೆಗೆ ನಡೆಯಲಿದೆ.

ಪದವೀಧರ ಕ್ಷೇತ್ರದಲ್ಲಿ 84 ಸಾವಿರ ಮತಾರರುಮತಚಲಾಯಿಸಿದರೆ ಶಿಕ್ಷಕರ ಕ್ಷೇತ್ರದಲ್ಲಿ 25 ಸಾವಿರ ಮತಗಳು ಚಲಾವಣೆಗೊಳ್ಳಲಿದೆ. ಜಿಲ್ಲೆಯಲ್ಲಿ 70 ಪದವೀಧರ ಮತ್ತು ಶಿಕ್ಷಕರ ಮತಗಟ್ಟೆಗಳಿವೆ.

ಸೊರಬದಲ್ಲಿ ತಾಲೂಕು ಕಚೇರಿ, ಆನವಟ್ಟಿಯಲ್ಲಿ ಬಾಲಕೀಯರ  ಪ್ರೌಢಶಾಲೆ, ಶಿಕಾರಿಪುರದಲ್ಲಿ ತಾಲೂಕು ಕಚೇರಿ ಕೊಠಡಿ-1 ಮತ್ತು 3, ಶಿಕಾರಿಪುರದಲ್ಲಿ  ಪಟ್ಟಣಪಂಚಾಯಿತಿ ಕಟ್ಟಡ, ಸಾಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ-1 ಮತ್ತು ಕೊಠಡಿ ಸಂಖ್ಯೆ-2

ಕಾರ್ಗಲ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ,ಜೋಗ ಫಾಲ್ಸ್ ನಲ್ಲಿ ಕೆಪಿಸಿ ಆಸ್ಪತ್ರೆ, ಆನಂದ ಪುರಂ ನಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜು, ಹೊಸನಗರ ತಾಲೂಕು ಕಚೇರಿ, ನಗರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

ಶಿವಮೊಗ್ಗದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜು, ನವುಲೆ ಹಿರಿಯ ಪ್ರಾಥಮಿಕ ಶಾಲೆ, ಗುರುಪುರ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆ, ಊರುಗಡೂರು ಉರ್ದು ಹಿರಿಯ ಪ್ರಾಥಮಿಕ ಶಾಲೆ,

ಜಿಲ್ಲಾ ತರಬೇತಿ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಕ್ಲಾರ್ಕ್ ಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮಿಳಘಟ್ಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಹೆಚ್ ಬಿ ಕಾಲೋನಿಯ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಗೋಪಾಳದ 100 ಅಡಿ ರಸ್ತೆಯ ವಾಣಿಜ್ಯ ತೆರಿಗೆ ಕಚೇರಿ,

ವಿನೋಬ ನಗರದ ಡಿವಿಎಸ್ ಶಾಲೆ, ಬಾಲರಾಜ ಅರಸ್ ರಸ್ತೆಯ ಪಿಡಬ್ಲೂಡಿ ಕಚೇರಿ, ಶರಾವತಿ ನಗರದ ವೀಣಾ ಶಾರದ ಪ್ರೌಢಶಾಲೆ, ತೀರ್ಥಹಳ್ಳಿಯ ತಾಲೂಕು ಕಚೇರಿ ಕೊಠಡಿ -1 ಮತ್ತು 2, ಭದ್ರಾವತಿಯಲ್ಲಿ ತಾಲೂಕು ಕಚೇರಿ, ಹೊಳೆಹೊನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜು,

ನ್ಯೂಟೌನ್ ನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ-1 ಮತ್ತು 3,  ಬಿಆರ್ ಪಿಯಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೊಳಲೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಳ್ಳಂಗೇರಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಆಯನೂರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

438 ಜಿಲ್ಲೆಯಾದ್ಯಂತ ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ. ಬ್ಯಾಲೆಟ್ ಪೇಪರ್ ನಲ್ಲಿ ಪ್ರಾಶಸ್ತ್ಯದ ಮತದಾನ ನಡೆಯಲಿದೆ. ಬೆಳಗ್ಗೆಯಂದ ಮತದಾನ ಆರಂಭವಾಗಿದೆ. ಡಾ.ಸರ್ಜಿ ವಿನೋಬ ನಗರ ಡಿವಿಎಸ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ. ಮೆಗ್ಗಾನ್ ನ ವೈದ್ಯ ಡಾ.ಶ್ರೀಧರ್ ಪತ್ನಿಯೊಂದಿಗೆ ಬಂದು ಬಾಲರಾಜ ಅರಸ್ ರಸ್ತೆಯಲ್ಲಿ ಮತಚಲಾಯಿಸಿದ್ದಾರೆ.

ಡಾ.ಸರ್ಜಿ ಮಾತು

ಕೈಲಾಗದ ಎದುರಾಳಿಗಳ ಕೊನೆಯ ಅಸ್ತ್ರ ಅಪಪ್ರಚಾರವೆಂದು ಮತಚಲಾಯಿಸಿದ ಡಾ.ಧಜಯ ಸರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಇತ್ತೀಚೆಗೆ ಸರ್ಜಿ ಅವರ ಗುಂಡು ಪಾರ್ಟಿಯ ವೀಡಿಯೋವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸರ್ಜಿ ಕೈಲಾಗದ ಎದುರಾಳಿಗಳ ಕೊನೆಯ ಅಸ್ತ್ರ ಅಪಪ್ರಚಾರವೇ. ತಾವು ಮತ್ತು ಭೋಜೇಗೌಡರು ಗೆಲ್ಲುವ ವಿಶ್ವಾಸವನ್ನ ಹೊರಹಾಕಿದರು.

ಇದನ್ನೂ ಓದಿ-https://suddilive.in/archives/16113

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close