ಸೋಮವಾರ, ಜೂನ್ 10, 2024

ಕೃತಜ್ಞತಾ ಸಭೆಯಲ್ಲಿ ಡಾ.ಶಿವರಾಜ್ ಕುಮಾರ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ನಾನು ಕಳೆದ 52 ದಿನಗಳಿಂದ ನಿಮ್ಮ ಜೊತೆ ಕಾರ್ಯಕರ್ತನಾಗಿ ಕೆಲಸ ಮಾಡಿರುವೆ. ಆದರೆ ಕೆಲವರು ಇದನ್ನೂ ಬೇರೆ ರೀತಿ ಬಿಂಬಿಸಲಾಗುತ್ತಿದೆ ಎಂದು ಶಿವರಾಜ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ನಾನು ಸಿನಿಮಾ ಮೊದಲಾದ ಎಲ್ಲವನ್ನೂ ಬಿಟ್ಟು ಹೋಟೆಲ್ ನಲ್ಲೋ ಬೇರೆಡೆಯಲ್ಲೋ ಕೂಲಿ ಕೆಲಸ ಮಾಡಿಕೊಂಡು ಇರುತ್ತೇನೆ. ಹೆಂಡತಿ ಮಕ್ಕಳೊಂಡನೆ ಚೆನ್ಬಾಗಿರುತ್ತೇನೆ. ಆದರೆ ಬೇರೆಯವರು ಈ ರೀತಿ ಯಾಕೆ ಮಾತನಾಡುತ್ತಾರೆ ಎಂದು ಯೋಚಿಸಿದೆ. ಎಲ್ಲರೂ ನಮ್ಮವರೇ ಆದುದರಿಂದ ಯಾರ ಮಾತಿಗೂ ಉತ್ತರಿಸುವ ಅಗತ್ಯವಿಲ್ಲ ಎಂದು  ಶಿವಣ್ಣ ಸ್ವಲ್ಪ ನೊಂದರೀತಿ ಮಾತನಾಡಿದರು.

ನಾನು ಡ್ಯಾನ್ಸ್ ಮಾಡಿರುವುದನ್ನ ಟೀಕಿಸಲಾಗಿದೆ. ಟೀಕೆಗಳಿಗೆ ಉತ್ತರಿಸದೆ  ನಿಭಾಯಿಸಿಕೊಂಡು ಹೋಗಬೇಕು ಎಂಬ ನಿರ್ಧಾರಕ್ಕೆ ಬಂದಿರುವೆ. ಗೀತ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ತಪ್ಪಾ? ಅದು ತಪ್ಪಾಗಿದ್ದರೆ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುತ್ತಿರಲಿಲ್ಲ. ಗೀತ ಸೋತಿರಬಹುದು ಸೋಲೇ ಗೆಲುವಿನ ಮೊದಲ ಮೆಟ್ಟಿಲು ಎಂದು ಬಣ್ಣಿಸಿದರು.

ಶಿಜಾರಿಪುರದ ವಿಧಾನ ಸಭೆ ಚುನಾವಯಲ್ಲಿ ಪರಾಜಿತಗೊಂಡ ನಾಗರಾಜ್ ಅವರ ಹೆಸರು ಬಾಯಿಯಲ್ಲಿ ಹೇಳಲು ಆಗದ ಕಾರಣ ನನಗೆ ಸಿನಿಮಾ‌ ಡೈಲಾಗ್ ನೆನಪಿರುತ್ತದೆ. ಆದರೆ ಕೆಲವರ ಹೆಸರು ನೆನಪಿರಲ್ಲ. ನನಗೂ ವಯಸ್ಸು 62 ಆಯಿತು ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ