ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಮತ್ತು ಹಣ ಕಿತ್ತುಕೊಂಡು ಹೋದ ಅಪರಿಚಿತರು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯರ ಮಾಂಗಲ್ಯ ಅಥವಾ ಬಂಗಾರದ ಸರವನ್ನ ಎಗುರಿಸುತ್ತಿದ್ದ ಉದಾಹರಣೆಗಳು ಹೆಚ್ಚಿವೆ. ಆದರೆ ಇಲ್ಲೋಂದು ಪ್ರಕರಣದಲ್ಲಿ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿರುವ ಪ್ರಕರಣ ದಾಖಲಾಗಿದೆ.

ವಿಳಾಸ ಕೇಳುವ ನೆಪದಲ್ಲಿ ಸಹಕಾರ ಮಾಡಲು ಮುಂದಾದ ವ್ಯಕ್ತಿಗೆ ಶಾಕ್ ಕಾದಿದೆ. ಹಲ್ಲೆ ನಡೆಸಿ ಇಬ್ಬರು ಯುವಕರ ಬಳಿ ಮೂವರು ಅಪರಿಚಿತರು ಮೊಬೈಲ್ ಮತ್ತು ಹಣ ಕಿತ್ತುಕೊಂಡು ಹೋಗಿದ್ದಾರೆ.

ಮಾರ್ಕ್ ಎಂಬ ಯುವಕ ಎಳುಮಲೈರವರ ಬಳಿ ಕೇಬಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು, ಜೂ.21ರಂದು ಬೆಳಗಿನ ಜಾವ 1-30 ಗಂಟೆಯ ಸಮಯದಲ್ಲಿ ಟೆಂಪೋ ಸ್ಟಾಂಡ್ ಹತ್ತಿರ ಗಾಯತ್ರಿ ಕ್ಯಾಂಟೀನ್ ಬಳಿ ಕೇಬಲ್ ಹಿಡಿದುಕೊಂಡು ನಿಂತಿದ್ದಾಗ, ಸುಮಾರು 20 ರಿಂದ 25 ವರ್ಷ ವಯಸ್ಸಿನ ಮೂರು ಜನ ಹುಡುಗರು ಬೈಪಾಸ್ ರಸ್ತೆಯ ಕಡೆಯಿಂದ ಒಂದು ಬೈಕ್ ನಲ್ಲಿ ಬಂದು ಪಿರ್ಯಾದಿ ಬಳಿ ಬೈಕ್ ನಿಲ್ಲಿಸಿ ಯಾವುದೋ ವಿಳಾಸವನ್ನ ಕೇಳುವ ಡ್ರಾಮ ಆಡಿದ್ದಾರೆ,

ಅಡ್ರೆಸ್ ನನಗೆ ಗೊತ್ತಿಲಾ ಎಂದು ಹೇಳಿದಾಗ ಬೈಕ್ ನ ಮದ್ಯ ಕುಳಿತವನು ಸ್ವಲ್ಪ ಮೊಬೈಲ್ ಕೊಡಿ ಅಡ್ರೆಸ್ ಕೇಳುತ್ತೇನೆ, ಎಂದು ಹೇಳಿದ್ದಾನೆ. ಜೇಬಿನಿಂದ ಮೊಬೈಲ್ ತೆಗೆದ ಮಾರ್ಕ್, ನಂಬರ್ ಹೇಳಿ ಎಂದು ಹೇಳುತ್ತಿದ್ದಂತೆ ಕೈಯಲ್ಲಿದ್ದ ಮೊಬೈಲ್ ನ್ನು ಕಿತ್ತುಕೊಂಡು ಬೈಕ್ ಸ್ಮಾರ್ಟ್ ಮಾಡಿಕೊಂಡು ಮುಂದು ಸಾಗಲು ಮುಂದಾಗಿದ್ದಾರೆ.

ತತ್ ಕ್ಷಣ ಮಾರ್ಕ್ ಬೈಕ್ ಹ್ಯಾಂಡಲ್ ಹಿಡಿದುಕೊಂಡಿದ್ದಾರೆ. ಅವರು ಬೈಕ ಸಮೇತ ಮೂವರು ಕೆಳಗೆ ಬಿದ್ದಿದ್ದಾರೆ, ಹಿಂದೆ ಕುಳಿತವನು ಎದ್ದವನೆ ಕೈಯಲ್ಲಿ ಏನೋ ಹಿಡಿದುಕೊಂಡಿದ್ದು, ಮಾರ್ಕ್ ನ ತಲೆಯ ಹಿಂಬಾಗಕ್ಕೆ ಹೊಡೆದಿದ್ದಾರೆ. ನಂತರ ಅವರ ದವಡೆಗೆ ಹೊಡೆದಿದ್ದಾನೆ.‌ ಇದರಿಂದ ಹಲ್ಲು ಮುರಿದಿದೆ,

ಅಷ್ಟರಲ್ಲಿ ಮೂರ್ತಿ ಮಾರ್ಕ್ ಹತ್ತಿರ ಓಡಿ ಬಂದಿದ್ದಾರೆ, ಅವನನ್ನು ನೋಡಿ ಚಲ್ರೆ ಚಲ್ರೇ… ಎಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾರೆ, ಮಾರ್ಕ್ ಬಳಿ ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಕಿತ್ತುಕೊಂಡಿದ್ದರೆ. ವಿಜಯ್ ಟಿಕಾರೆ ಎಂಬುವರ ಬಳಿ 1500 ರೂ. ಕಿತ್ತುಕೊಂಡು ಹೋಗಿರುವ ಬಗ್ಗೆ ಟಿಕಾರೆ ಮತ್ತು ಮಾರ್ಕ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/17611

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close