ಸುದ್ದಿಲೈವ್/ಶಿವಮೊಗ್ಗ
ಭಾನುಪ್ರಕಾಶ್ ನಿಧನಕ್ಕೆ ಮತ್ತೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆದಿದೆ. ಶ್ರದ್ಧಾಂಜಲಿಯ ಸಮಯದಲ್ಲೇ ಮೃತರ ಕಣ್ಣನ್ನ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.
ಇದೇ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ ಭಾನುಪ್ರಕಾಶ್ ಅವರೊಂದಿಗಿನ ಒಡನಾಟವನ್ನ ನೆನಪಿಸಿಕೊಂಡರು.
ಭಾನುಪ್ರಕಾಶ್ ಆತ್ಮೀಯವಾಗಿದ್ದ. ಆತನ ಬಗ್ಗೆ ನೆನಪಿಸಿಕೊಳ್ಳುವುದಕ್ಕಿಂತ ಆತನ ಹಾಡುಗಳು ಚೆರ ನೆನಪು, ‘ಶೋಷಿತ ಪೀಡಿತ ಜನಾಂಗದ ಭಾಗ್ಯೋದ್ಯವ ನೆನಪಿಸುತ್ತಾ ಎಂಬ ಹಾಡನ್ನ ನೆನಪಿಸಿಕೊಂಡರು. ಈ ಹಾಡನ್ನ ಗುಲ್ಬುರ್ಗದ ಕಾರ್ಯಕರ್ತ ನೆನಪಿಸಿಕೊಂಡಿದ್ದನ್ನ ಹೇಳಿದರು.
ವಿಧಾನಪರಿಷತ್ ನ ಸಭೆಯೊಂದರಲ್ಲಿ ಚರ್ಚೆ ಆರಂಭವಾಗಿತ್ತು. ಸಂಸ್ಕತದ ಬಗ್ಗೆ ಮಾತನಾಡಿದರು. ಕೆಲವರು ಇದು ಬ್ರಾಹ್ಮಣರ ಭಾಷೆ ಎಂದು ಟೀಕಿಸಿದರು. ವಿಧಾನ ಪರಿಷತ್ ನಲ್ಲಿ ಭಾನುಪ್ರಕಾಶ್ ಅವರ ಭಾಷಣ ಸಂಸ್ಕೃತ ಬಗ್ಗೆ ಒಪ್ಪಿಗೆ ಸೂಚಿಸಿತು ಎಂದರು.
ಯಾಕೆ ಎರಡು ವಿಚಾರ ಹೇಳಿದೆ ಎಂದರೆ ಹಿಂದುಳಿದವರನ್ನ ತುಳಿತಿದ್ದಾರೆ ಎಂದು ಒಬ್ಬರು, ಬ್ರಾಹ್ಮಣರು ತುಳಿದಿದ್ದಾರೆ ಎಂದು ಹೇಳುತ್ತಿದ್ದರು. ಅವೆಲ್ಲ ಸುಳ್ಳು ನಾವೆಲ್ಲಾ ಒಂದು ಎಂದು ಹೇಳಿದವರಲ್ಲಿ ಭಾನುಪ್ರಕಾಶ್ ಎಂದರು.
ಇದನ್ನೂ ಓದಿ-https://suddilive.in/archives/17097