ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಗರುಡ ಲೇಔಟ್ ನಲ್ಲಿ ಮಹಾನಗರ ಪಾಲಿಕೆಯ ಕ್ಲಾಸ ಒನ್ ಗುತ್ತಿಗೆದಾರ ಸಾವನ್ನಪ್ಪಿರುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದೆ.
ವಾಸು ಎಂಬ 49 ವರ್ಷದ ವ್ಯಕ್ತಿ ಹಣದ ವಿಚಾರದಲ್ಲಿ ರೌಂಡ್ ಅಪ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬಹಳ ಬಡಗಡಿ ಕಟ್ಟಿ ಸುಸ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಅವರ ಪತ್ನಿ ಪುಷ್ಪ ದೂರಿದ್ದಾರೆ.
ಲಾಕ್ ಡೌನ್ ನಿಂದ ವಾಸು ಸಮಸ್ಯೆ ಎದುರಿಸುತ್ತ ಬಂದಿದ್ದಾರೆ. ಪಾಲಿಕೆಯಲ್ಲಿ ನಿಗದಿತ ಗುತ್ತಿಗೆಗಿಂತ ಕಡಿಮೆ ದರಕ್ಕೆ ಗುತ್ತಿಗೆ ಹಿಡಿದು ಅವೈಜ್ಞಾನಿಕ ಸ್ಪರ್ಧೆ ಉಂಟಾದ ಪರಿಣಾಮ ವಾಸು ಆರ್ಥಿಕವಾಗಿ ಕುಗ್ಗಿ ಹೋಗಿರುವುದಾಗಿ ಕುಟುಂಬ ಆರೋಪಿಸಿದೆ.
16 ವರ್ಷ ವೈವಾಹಿಕ ಜೀವನ ನಡೆಸಿದ್ದ ಪತ್ನಿ ಪುಷ್ಪ ಅಕ್ಷರಶಃ ಕಣ್ಣೀರು ಹಾಕಿದ್ದಾರೆ. ಸಾಲಗಾರರ ಕಾಟದಿಂದ ವಿದ್ಯಾನಗರದ ಜ್ಯೋತಿ ನಗರದಲ್ಲಿದ್ದ ಮನೆಯನ್ನ ವಾಸು ಮಾರಿದ್ದರು. ನಂತರ ಹರಿಗೆಗೆ ಬಂದು ವಾಸವಾಗಿದ್ದರು. ಮನೆ ಮಾರಿ ಸಾಲ ತೀರಿಸಿಕೊಳ್ಳುವ ಸ್ಥಿತಿಗೆ ವಾಸು ಬಂದಿದ್ದರು.
16 ವರ್ಷದ ವೈವಾಹಿಕ ಜೀವನ ನಡೆಸಿದ್ದ ವಾಸುಗೆ ಮಕ್ಕಳಿರಲಿಲ್ಲ. ವಾಸು ಮನೆ ಮಾರಾಟ ಮಾಡಿಕೊಂಡು ಸಾಲ ತೀರಿಸಿದರೂ ಕೈಗಡ ಸಾಲದ ಬಡ್ಡಿಯಿಂದ ಕಟ್ಟಲು ಸಾಧ್ಯವಾಗದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ವಾಸು ಅಗಲಿಕೆಯಿಂದ ಪಾಲಿಕೆಯಲ್ಲಿ ಬಿಲ್ ಗಳು ಪೆಙಡಿಂಗ್ ಇವೆ ಎಂದು ಆಪ್ತವಲಯ ಹೇಳುತ್ತಿದೆ.
ಇದನ್ನೂ ಓದಿ-https://suddilive.in/archives/16807