ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ ರಾಜ್ಯದಲ್ಲಿ ಸೋತಿದೆ-ನಾಗರಾಜ್ ಗೌಡ

ಸುದ್ದಿಲೈವ್/ಶಿವಮೊಗ್ಗ

ರಾಹುಲ್ ಭಾರತ್ ಜೋಡೋ ಯಾತ್ರೆ ಮಾಡಿ, ಜನರಿಗೆ ಧರ್ಮ, ನಿರುದ್ಯೋಗದ ಬಗ್ಗೆ ತಿಳಿಸಿ ಪ್ರೀತಿಗಳಿಸಿದ್ದಾರೆ. ಪ್ರಧಾನಿ ಮೋದಿಯವರು 10 ವರ್ಷ ನಿರಂತರ ಆಡಳಿತ ನಡೆಸಿ ಚುನಾವಣೆಯ ವೇಳೆ ನಿರಾಶೆಯಂತೆ ಮಾತನಾಡಿದ್ದು ಸೋಲಿಗೆ ಕಾರಣವಾಗಿದೆ ಎಂದು ಕೆಪಿಸಿಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರಮೇಶ್ ತಿಳಿಇದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯನ್ನ ದೇಶದ ಜನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಗೆ ಕಳೆದ ಬಾರಿಗಿಂತ ಈ ಬಾರಿಯ ಸೀಟು ಹೆಚ್ಚಾಗಿದೆ. 14% ಮತಗಳು ಕರ್ನಾಟಕದಲ್ಲಿ ಬಂದಿದೆ. ರಾಮಮಂದಿರ ಉದ್ಘಾಟಿಸುವ ಮೂಲಕ ಅಯೋಧ್ಯದಲ್ಲಿ ರಾಮಮಂದಿರ ಕಟ್ಟಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆ ಹುಸಿಯಾಗಿದೆ.

ಆದರೂ ಶಿವಮೊಗ್ಗದಲ್ಲಿ ಜನರ ತೀರ್ಫುಗೆ ತಲೆಬಾಗಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ರಿಗೆ ಅಭಿನಂದಿಸುವೆ. ಮುಂದೆ ಬರುವ ಸ್ಥಳೀಯ ಚುನಾವಣೆಯಲ್ಲಿ ಪಕ್ಷ ಗೆಲ್ಲಲಿದೆ ಎಂದರು.

ನಾಗರಾಜ್ ಗೌಡ ಮಾತನಾಡಿ, ಶಿಕಾರಿಪುರದಲ್ಲಿ ಕಾಂಗ್ರಸ್ ಗೆ ಹೆಚ್ಚಿನ ಮತಬಿದ್ದಿದೆ. ಆದರೆ ರಾಘವೇಂದ್ರ ಗೆದ್ದಿದ್ದಾರೆ. ಅವರಿಗೂ ಅಭಿನಂದಿಸುವೆ ಎಂದರು.

ದೇಶದಲ್ಲಿ 400 ಸ್ಥಾನ ಪಡೆಯುವ ಮಾತನಾಡುತ್ತಿದ್ದ ಬಿಜೆಪಿ 240 ಕ್ಕೆ ಸೀಮಿತವಾಗಿದೆ. ಶಿವಮೊಗ್ಗದಲ್ಲಿ ಗೀತರಿಗೆ ಅನುಕಂಪ ಮತ್ತು ಬಂಗಾರಪ್ಪನವರ ಕುಟುಂಬದ ಮಗಳು ಎಂಬ ಕಾರಣಕ್ಕೆ ಜನರು ಅವರನ್ನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೂ 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದಾರೆ.

ಅನೇಕ ವರ್ಷಗಳಿಂದ ಒಂದೇ ಕುಟುಂಬ ಆಡಳಿತ ನಡೆಸುತ್ತಿದ್ದಾರೆ. ಅವರಿಂದ ಮುಕ್ತಿಗೊಳಿಸಬೇಕೆಂದು ತೀರ್ಮಾನಿಸಿ ಶಿಕಾರಿಪುರದಲ್ಲಿ ಒಟ್ಟಾಗಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳಿಸಲು ಸಾಧ್ಯವಾಯಿತು. ಹಿಂದುತ್ವದ ರಾಜಕಾರಣದಿಂದ ಶಿಕಾರಿಪುರದಲ್ಲಿ ನಮಗೆ ಹಿನ್ನಡೆಯಾಗಿದೆ ಎಂದರು.

ಗೋಣಿ ಮಾಲ್ತೇಶ್ ಕಳೆದ ಬಾರಿ ಕಡಿಮೆ ಅಂತರದಿಂದ ಸೋತ ಪರಿಣಾಮ ಅವರಿಗೆ ಪಕ್ಷ‌ ಟಿಕೇಟ್ ನೀಡಿತ್ತು. ಹಾಗಾಗಿ ಪಕ್ಷದಿಂದ ಸ್ಪರ್ಧಿಸಿದ್ದರು. ಪಕ್ಷದ ತೀರ್ಮಾನಕ್ಕೆ ತಲೆಬಾಗುವೆ ಎಂದರು.‌

ಇದನ್ನೂ ಓದಿ-https://suddilive.in/archives/16264

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close