ಆನಂದಪುರಂ ಬಳಿ ರಸ್ತೆ ಅಪಘಾತ-ಓರ್ವ ಸಾವು

ಸುದ್ದಿಲೈವ್/ಆನಂದಪುರ

ಬೆಳ್ಳಂಬೆಳಿಗ್ಗೆ ಆನಂದಪುರ ಬಳಿ ರಸ್ತೆ ಓಮ್ನಿ ಹಾಗೂ ಟಾಟಾ ಕಾರಿನ ನಡುವೆ ಡಿಕ್ಕಿ ಉಂಟಾಗಿದ್ದು ಅಪಘಾತದಲ್ಲಿ ಯುವಕನೋರ್ವ ಅಸುನೀಗಿದ್ದಾನೆ.

ಜೋಗ ದಿಂದ ಶಿವಮೊಗ್ಗಕಡೆ ಓಮ್ನಿ ಕಾರು ಬರುತ್ತಿದ್ದ ವೇಳೆ ಸಾಗರ ಕಡೆ ಹೊರಟಿದ್ದ ಕೆಂಪು ಕಲರ್ ನ ಟಾಟಾ ಕಂಪನಿಕಾರಿಗೆ ಡಿಕ್ಕಿ ಹೊಡೆದಿದೆ. ಈಅಪಘಾತದಲ್ಲಿ ಅಜಯ್ ಎಂಬ 21 ವರ್ಷದ ಯುವಕ ಅಸುನೀಗಿದ್ದಾನೆ.

ಓಮ್ನಿ ಕಾರಿನಲ್ಲಿ ಇಬ್ವರು ಟಾಟಾ ಕಂಪನಿಯ ಕಾರಿನಲ್ಲಿ ಓರ್ವರು ಇದ್ದು ಮೂವರಲ್ಲಿ ಓರ್ವ ಅಸುನೀಗಿದ್ದಾನೆ. ಓಮ್ನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಗಾಯಾಳು ಇಬ್ವರನ್ಬೂ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಮೂವರು ಯಾವ ಊರಿನವರು ಎಂಬುದು ತಿಳಿದು ಬರಬೇಕಿದೆ. ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/16459

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close