ಸುದ್ದಿಲೈವ್/ಶಿವಮೊಗ್ಗ
2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನುಗ್ಗುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ಕಚೇರಿಯ ರಸ್ತೆಯಲ್ಲಿ ತಡರದ ವಾಹನದಲ್ಲಿ ಮಾತನಾಡಿದ ಬಿವೈ ಆರ್ ಶಿವಮೊಗ್ಗದಲ್ಲಿ 48 ಸಾವಿರ, ಭದ್ರಾವತಿ 6 ಸಾವಿರ ಸಾಗರ 20 ಸಾವಿರ, ಸೊರಬದಲ್ಲಿ 20 ಸಾವಿರ ಮತಗಳು, ಗ್ರಾನಾಙತರ 30 ಸಾವಿರ, ತೀರ್ಥಹಳ್ಳಿ 34 ಸಾವಿರ, ಬೈಂದೂರು 51 ಸಾವಿರ ಶಿಕಾರಿಪುರದಲ್ಲಿ 12 ಸಾವಿರ ಮತಗಳ ಅಂತರದ ಮುನ್ನಡೆ ದೊರೆತಿದೆ. ಇನ್ನೂ ಒಂದು ಲಕ್ಷದ ಮತಗಳ ಬಾಕಿ ಉಳಿದಿದೆ ಎಂದರು.
ಇಲ್ಲುಂದ ಜೆಡಿಎಸ್ ಕಚೇರಿಗೆ ತೆರಳುವುದಾಗಿ ಹೇಳಿದ ರಾಘವೇಂದ್ರರಿಗೆ ಬಿಜೆಪಿಯ ಕಚೇರಿ ಬಳಿ ಡೊಳ್ಳು ಡಕ್ಕೆ ಭಾಜಭಜಂತ್ರಿ ಹಾಗೂ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಈ ವೇಳೆ ಪ್ರಧಾನಿ ಮೋದಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲಾಯಿತು.
ಇದನ್ನೂ ಓದಿ-https://suddilive.in/archives/16226
Tags:
ರಾಜಕೀಯ ಸುದ್ದಿಗಳು