ಸುದ್ದಿಲೈವ್/ಶಿವಮೊಗ್ಗ
ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ಮತದಾನ ಆರಂಭವಾಗಿದೆ. 620 ಮತಗಳು ಚಲಾವಣೆಯಾಗಬೇಕಿದೆ.
ಶಾಸಕ ಗೋಪಾಲ ಕೃಷ್ಣ ಬೇಳೂರು vs ಹುನಗೋಡು ರತ್ನಾಕರ, ಎಸ್ ಕೆ ಮರಿಯಪ್ಪ vs ದಿನೇಶ್, ಷಡಾಕ್ಷರಿ ವಿರುದ್ಧ ಹನುಮಂತು, ಮಂಜುನಾಥ್ ಗೌಡ vs ವಿರೂಪಾಕ್ಷಪ್ಪ, ಜೆಚ್ ಎಲ್ ಷಡಾಕ್ಷರಿ vs ಸಿ ಹನುಮಂತ ಇವರ ನೆಡುವೆ ತೀವ್ರ ಪೈಪೋಟಿ ಇದೆ.
ಪರಿಚಯವಿದ್ದರೆ ಮಾತ್ರ ಪ್ರವೇಶ
ಪರಿಚಯಸ್ಥರಿದ್ದರೆ ಮಾತ್ರ ಪೊಲೀಸರು ಮತದಾನದವರೆಗೆ ಬಿಡುತ್ತಿದ್ದು ಪರಿಚಯವಿಲ್ಲದ ಪತ್ರಕರ್ತರಿಗೆ ಗುರುತಿನ ಚೀಟಿ ಕೇಳುತ್ತಿರುವುದು ದುರಂತವಾಗಿದೆ.
ಇಡೀ ಚುನಾವಣೆಗಾಗಿ ಬಾಲರಾಜ್ ಅರಸ್ ರಸ್ತೆಯಲ್ಲಿ ಖಾಕಿ ಸರ್ಪಗಾವಲು ನಿರ್ಮಿಸಲಾಗಿದೆ. ಚುನಾವಣಿ ಅಧಿಕಾರಿ ಎಸಿ ಸತ್ಯನಾರಾಯಣರಿಗೂ ಕರೆಮಾಡಿದರೆ ಕರೆ ಸ್ವೀಕರಿಸುವ ವ್ಯವಧಾನ ತೋರುತ್ತಿಲ್ಲ. ಒಟ್ಟಿನಲ್ಲಿ ಒಂದು ಫೊಟೊ ತೆಗೆಯಲು ಶಿಫಾರಸು, ಪರಿಚಯಸ್ಥರಿಗೆ ಅವಕಾಶ ನೀಡಲಾಗುತ್ತದೆ.
ಶಾಸಕರು ಮತ್ತು ಸಂಸದರ ಶೇಕ್ ಹ್ಯಾಂಡ್
ಹಾವು ಮುಂಗಸಿ ಇದ್ದಂತೆ ಕಚ್ಚಾಡುವ ಶಾಸಕ ಗೋಪಾಲ ಕೃಷ್ಣ ಬೇಳೂರು ಮತ್ತು ಸಂಸದರು ಇಂದು ಡಿಸಿಸಿ ಬ್ಯಾಂಕ್ ಆವರಣದಲ್ಲಿ ನುಖಾಮುಖಿ ಆಗಿದ್ದು ಎಬ್ವರೂ ಶೇಕ್ ಹ್ಯಾಂಡ್ ಮಾಡಿರುವುದು ವಿಶೇಷವಾಗಿತ್ತು.
ಇದನ್ನೂ ಓದಿ-https://suddilive.in/archives/17968