ಈಶ್ವರಪ್ಪ ಬಿಜೆಪಿಗೆ ಬರ್ತಾರಾ?ಮೇಘರಾಜ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಜಗದೀಶ್ ಶೆಟ್ಟರನ್ನ ಬಿಜೆಪಿ ಕರೆತಂದಂತೆ ಬಿಜೆಪಿಗೆ ಈಶ್ವರಪ್ಪನವರನ್ನೂ ಕರೆತರುವ ಎಲ್ಲಾ ಸಾಧ್ಯತೆಗಳಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಹೇಳಿದ್ದಾರೆ.

ಈ ಕುರಿತು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೇಘರಾಜ್, ಜಗದೀಶ್ ಶೆಟ್ಟರು ಬಿಜೆಪಿಗೆ ಕರೆದುತಂದಂತೆ ಈಶ್ವರಪ್ಪನವರನ್ನೂ ಪಕ್ಷಕ್ಕೆ ಕರೆತರುವುದರ ಬಗ್ಗೆ ಅಲ್ಲಗೆಳೆಯವ ಹಾಗೆ ಇಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಈಶ್ವರಪ್ಪ ಮತ್ತು ಅವರ ಹಿಂಬಾಲಕರು ಎರಡು ದಿಬಗಳ ಹಿಂದೆ ಸಭೆ ನಡೆಸಿ ಬಿಜೆಪಿ ಮರುಸೇರ್ಪಡೆ ಕುರಿತು ತೀರ್ಮಾನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಎಲ್ಲಾ ಬೆಖವಣಿಗೆಗಳು ನಡೆಯಲಿದೆ ಎಂಬುದು ಮಾತ್ರ ನಿಗೂಢವಾಗಿದೆ. ಈ ಮೊದಲೇ ಈಶ್ವರಪ್ಪನವರು ಲೋಕಸಭೆ ಚುನಾವಣೆ ಗೆದ್ದು ಬಿಜೆಪಿಗೆ ಹೋಗುವುದಾಗಿ ಘೋಷಿಸಿದ್ದರು.

ಆದರೆ ಗೆಲುವು ಆಗಿಲ್ಲ. ಈಗ ಚುನಾವಣೆ ಮುಗಿದಿದೆ. ಬಿಜೆಪಿ ರಾಜ್ಯಧ್ಯಕ್ಷರು ಅಡ್ಡಗಾಲು ಆಗಬಹುದ ಎಂಬ ಚರ್ಚೆಯೂ ಆರಂಭವಾಗಿತ್ತು. ಆದರೆ ಜಿಲ್ಲಾಧ್ಯಕ್ಷರ ಈ ಹೇಳಿಕೆ ಮತ್ತು ಎರಡು ದಿನಗಳ ಹಿಂದಿನ ಸಭೆ ಈ ಎಲ್ಲಾ ಪ್ರಶ್ನೆಗಳನ್ನ ಗಾಳಿಗೆ ತೂರುವಂತೆ ಮಾಡಿದೆ. ಅವರು ಬಿಜೆಪಿಗೆ ಬರುವುದು ಖಚಿತವಾಗಿದೆ.

ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ಜಯಂತಿಯಿಂದ ಪುಣ್ಯಸ್ಮರಣೆಯ ವರೆಗೆ

ಡಾ.ಶಾಮ್ ಪ್ರಕಾಶ್ ಮುಖರ್ಜಿಯವರ ಹುಟ್ಟುಹಬ್ಬ ಮತ್ತು ಪುಣ್ಯತಿಥಿಯ ನ್ನ ಜಿಲ್ಲಾ ಬಿಜೆಪಿ ನಡೆಸಲು ತೀರ್ಮಾನಿಸಿದೆ. ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ‌ಟಿ.ಡಿ ಮೇಘರಾಜ್ ಮುಖರ್ಜಿ ಅವರ ಹುಟ್ಟುಹಬ್ಬ ಜೂ.23 ಆದರೆ ಪುಣ್ಯತಿಥಿ ಜು.6 ರಂದು ನಡೆಯಲಿದೆ. ಈ 15 ದಿನಗಳವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯ ಸರ್ಕಾರ ಪೆಟ್ರೋಲ್ ಮನನ ತ್ತು ಡಿಸೇಲ್ ದರ ಏರಿಕೆ ಖಂಡಿಸಿ ಪ್ರತಿಭಟಿಸಲಾಗಿದೆ. ಸರ್ಕಾರ ಎಚ್ಚೆತ್ತುಕೊಂಡಿಲ್ಲ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ನಮ್ಮ ನಾಯಕ ಭಾನೂಜಿ ಅವರನ್ನ ಕಳೆದುಕೊಂಡೆವು. ಇದಕ್ಕೆ ಪೂರಕವಾಗಿ ಜೂ.21 ರಂದು ಮಂಡಲದ ಮಟ್ಟದಲ್ಲಿ ಪ್ರತಿಭಟಿಸಲಾಗುವುದು.

ಪೆಟ್ರೋಲ್ ಮತ್ತು ಡಿಸೇಲ್ ದರದ ಮೇಲಿನ ಸರ್ವಿಸ್ ರಿಟೇಲ್ ಟ್ಯಾಕ್ಸ್ ಹಿಂಪಡೆಯುವಂತೆ ನಾಳೆ ಬಸ್ ನಿಲ್ದಾಣದ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುವುದು. ಜೂ.25 ರಂದು ತುರ್ತು ಪರಿಸ್ಥಿತಿಯ ಹೋರಾಟದ ಅಂಗವಾಗಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು ಎಂಬ ಸಂವಾದ ಕಾರ್ಯಕ್ರಮ ರಂಗಮಂದಿರದಲ್ಲಿ ನ ಡೆಯಲಿದೆ. ಪ್ರಭಾಕರ್ ಕಲ್ಲಡ್ಕಭಟ್ಟರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಜೂ.29 ರಂದು ವಾಲ್ಮೀಖಿ ಅಭಿವೃದ್ಧಿ ನಿಗಮದಲ್ಲಿ ಆದ ಹಗರಣವನ್ನ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಸಿಎಂ ರಾಜೀನಾಮೆಗೆ ಆಹ್ರಹಿಸಲಾಗಿವುದು. ಜೂ.21ರಂದು ಯೋಗ ದಿಬಾಚರಣೆ ನಡೆಯಲಿದೆ. ಜೂ.22 ರಂದು ಎಲ್ಲಾ ಸಂಸದರಿಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ-https://suddilive.in/archives/17229

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close