ಆಗುಂಬೆ ಪೊಲೀಸರ ಖಡಕ್ ಕಾರ್ಯಾಚರಣೆ

ಸುದ್ದಿಲೈವ್/ಶಿವಮೊಗ್ಗ

ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಗಳಕೊಪ್ಪ ಗ್ರಾಮದ ವಾಸಿ ಶಿವಪ್ಪ ಹೆಗಡೆ ರವರ ವಾಸದ ಮನೆಯ ಕಿಟಕಿಯನ್ನು ಮುರಿದು ಮನೆಯ ಒಳಗೆ ಪೆಟ್ಟಿಯಲ್ಲಿ ಇಟ್ಟಿದಂತಹ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಪ್ರಕರಣವನ್ನ‌ ಬೇದಿಸಲಾಗಿದೆ.

ಪ್ರಕರಣದಲ್ಲಿ ಆರೋಪಿತರು ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ ಜಿ ಕಾರ್ಯಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ, ಪಿಎಸ್ ಐ ರಂಗನಾಥ ಅಂತರಗಟ್ಟಿ ನೇತೃತ್ವದಲ್ಲಿ  ಬಸವರಾಜ್ ಎಲ್ ಆರ್ ಪಿಎಸ್ ಐ 2, ಆಗುಂಬೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಪ್ರಕರಣ ದಾಖಲಾದ ಕೇವಲ 24 ಗಂಟೆಗಳ ಒಳಗಾಗಿ ಪ್ರಕರಣವನ್ನು ಪೊಲೀಸರು ಹಚ್ಚಿದ್ದಾರೆ, ಆರೋಪಿತರಾದ 1) ತೀರ್ಥಹಳ್ಳಿಯ ಕೈಮರದ ನಿವಾಸಿ, ಮಂಜುನಾಥ @ ಕೊಪ್ಪ ಮಂಜ, (42) ವರ್ಷ ಮತ್ತು 2) ಚೇತನ್ @ ಚೇತು (27)  ಇಬ್ಬರನ್ನ ದಸ್ತಗಿರಿ ಮಾಡಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 1,50,500 /- ರೂಗಳ ಒಟ್ಟು 23.5 ಗ್ರಾಂ ತೂಕದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/16079

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close