ಸುದ್ದಿಲೈವ್/ಶಿವಮೊಗ್ಗ
ಡೆಂಘಿ ಜ್ವರದ ಬಗ್ಗೆ ಆರೋಗ್ಯ ಅಧಿಕಾರಿ ಡಾ.ನಟರಾಜ್ ಇಂದು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ನೂತನ ಎಂಎಲ್ ಸಿ ಆಗಿ ಗೆದ್ದು ಬಂದಿರುವ ಡಾ.ಧಜಯ ಸರ್ಜಿ ಪ್ರಶ್ನೆ ಮತ್ತು ಡಿಹೆಚ್ ಒರವರ ಉತ್ತರ ಸಭೆಯ ಗಮನ ಸೆಳೆದಿದೆ.
ಮೊದಲಿಗೆ ಮಾತನಾಡಿದ ಡಿಹೆಚ್ ಒ ಜಿಲ್ಲೆಯಲ್ಲಿ 287 ಡೆಂಘಿ ಪ್ರಜರಣ ದಾಖಲಾಗಿದೆ, ಶಿಕಾರಿಪುರ 66, ಶಿವಮೊಗ್ಗದಲ್ಲಿ 75, ಸೊರಬದಲ್ಲಿ 36 ಹಾಗೂ ತೀರ್ಥಹಳ್ಳಿಯಲ್ಲಿ 15 ಡೆಂಗ್ಯೂ ಪ್ತಕರಣ ಸೇರಿ 287 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದರು. ಸರ್ವೆಮಾಡಲು ತೀರ್ಮಾನಿಸಲಾಗಿದೆ. ಮನೆ ಮನೆಗೆ ಸರ್ವೆ ಮಾಡಲಿದ್ದೇವೆ. ಸರ್ವೆಯಲ್ಲಿ ಲಾರ್ವ ಕಂಡರೆ ಔಷಧಿ ಸಿಂಪಡಣೆ ಮಾಡಲಾಗುವುದು ಎಂದರು.
ಪ್ರತಿ ಶುಕ್ರವಾರ ಡ್ರೈಡೇ ಆಚರಿಸಲು ನಿರ್ಧರಿಸಲಾಗಿದೆ, ನೀರಿನ ಸಂಗ್ರಹದ ಪಾತ್ರೆಯನ್ನ ಸ್ವಚ್ಛ ಮಾಡುವ ನಿಲ್ಲಿನಲ್ಲಿ ನೀರನ್ನ ಚೆಲ್ಲಿ ಒಣಗಿಸಿ ನಂತರ ತುಂಬಿಸುವ ಕಾರ್ಯ ನಡೆಸಲಾಗುವುದು. ಡ್ರಗ್ಸ್ ನ ಕೊರತೆ ಇಲ್ಲ. 2500ಜಿಲ್ಲೆಯಲ್ಲಿ ನಾಯಿ ಕಡಿತ ಇದೆ. ಔಷಧಿ ಪೂರೈಕೆ ಸಮಗ್ರವಾಗಿದೆ.
ಅಂಟಿ ರೇಬಿಸ್ ಔಷಧವಿದೆ. ಕೆಎಫ್ ಡಿ ಜಿಲ್ಲೆಯಲ್ಲಿ63 ಪ್ರಕರಣಗಳಿವೆ. ಮಳೆಯಾದ ಮೇಲೆ ಕೆಎಫ್ ಡಿ ಕಡಿಮೆ ಇದೆ ಎಂದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ತೀರ್ಥಹಳ್ಳಿ ಸಾರ್ವಜಿನಿಕ ಆಸ್ಪತ್ರೆಯಲ್ಲಿ ಜನೌಷಧ ಮಳಿಗೆಗಳು ಕ್ಲೋಸ್ ಆಗಿದೆ. ಎಂಎಸ್ಐಎಲ್ ನಿಂದಈ ಜನೌಷಧ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಔಷಧ ಇಲ್ಲದ ಕಡೆ ಜನೌಷಧ ಮಳಿಗೆಯಿಂದ ಖರೀದಿಯಾಗುತ್ತಿತ್ತು ಎಂದರು.
ಯಾರೋ ಖಾಸಗಿಯವರಿಂದ ಎಂಎಸ್ ಐಎಲ್ ನ ಜನೌಷಧ ಅಂಗಡಿ ನಡೆಯುತ್ತಿದ್ದು, ಇವರಿಗೆ ಔಷಧಕ್ಕಿಂತ ಎಣ್ಣೆ ಮಾರಲು ಆಸಕ್ತಿ ಹೆಚ್ಚಿದೆ. ಔಷಧ ಅಂಗಡಿ ಮಾಡಲು ಆಸಕ್ತಿ ಇಲ್ಲ ಎಂದು ಆಕ್ಷೇಪಿಸಿದರು.
ಡಾ.ಸರ್ಜಿ ಮಾತನಾಡಿ, ಡೆಂಘಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲೇ 52 ಪಾಸಿಟಿವ್ ಇದೆ. ಒಂದು ಡೆಂಘಿ ಅಡ್ಮಿಟ್ ಆದರೆ ಮೂರು ಪಟ್ಟು ನಗರದಲ್ಲಿ ಹೆಚ್ಚಾಗಿದೆ ಎಂಬುದು ಗಮನಾರ್ಹ. ಡಿಹೆಚ್ ಒ ಈ ಬಗ್ಗೆ ಆಕ್ಟಿವ್ ಮೆಸರ್ಸ್ ಏನು ತೆಗೆದುಕೊಂಡಿದ್ದೀರಿ ಎಂದು ವಿವರಣೆ ಕೇಳಿದರು.
ಡಿಹೆಚ್ ಒ ಜಾಗೃತಿ ಮೂಡಿಸಲಾಗಿತ್ತಿದೆ. ನೀರು ಸಂಗ್ರಹಣ ಬಗ್ಗೆ ಕ್ರಮ ಕೈಗೊಳ್ಳಕಾಗುತ್ತದೆ. ಸರ್ಜಿ ಮಾತನಾಡಿ, ಸೊಳ್ಳೆ 28 ದಿನ ಬದುಕಿರುತ್ತದೆ. ಪ್ರಾಯಕ್ಕೆ ಬರುವ ಸೊಳ್ಳೆ ಸಾಯಬೇಕು. ಫಾಗಿಂಗ್ ಮಾಡಿ, ಇನ್ ಡೋರ್ ಮಾಡಿದ್ರೆ ಒಳ್ಳೆಯದು. ಸೊಳ್ಳಪರದೆ ಬಳಸಬೇಕು. ಮೆಗ್ಗಾನ್ ನಲ್ಲಿ ಪರದೆ ಇಲ್ಲ ಎಂದರು.
ಡೆಂಘಿ ಕಾಣಿಸಿಕೊಂಡ ವ್ಯಕ್ತಿಗೆ ಏಳು ದಿನಗಳ ಕಾಲ ಒಡೋಮಸ್ ಹಚ್ಚಿಕೊಳ್ಳಬೇಕು. ಅಲ್ಬೆಮಿನ್ ಎಂಬ ಇಂಜೆಕ್ಷನ್ ಸಹ ಡೆಂಘಿ ನಿಯಂತ್ರಣಕ್ಕೆ ಸಹಕಾರವಾಗಲಿದೆ. ಒಂದು ಸೊಳ್ಳೆ 500 ಮೀಟರ್ ಹಾರುತ್ತದೆ. ರೋಗ ಬಂದವನನ್ನಕಡಿದು ಇತರರಿಗೆ ಹರಡಿಸುತ್ತದೆ ಎಂದ ಅವರು ಮಂಗನ ಬಾವು ಸಹ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಎಂಆರ್ ಇಂಜೆಕ್ಷನ್ ಬದಲು ಎಂಎಂ ಆರ್ ಇಂಜೆಕ್ಷನ್‌ನೀಡಲು ಸೂಚಿಸಿದರು.
ಡಿಹೆಚ್ ಒ ಸಹ ಇನ್ ಡೋರ್ ಫಾಗಿಂಗ್ ಗೆ ಆದೇಶ ಪಡೆದುಕೊಳ್ಳಲಾಗಿದೆ. ಮಂಗನ ಬಾವು ಮತ್ತು ಡೆಂಘಿ ನಿಯಂತ್ರಣಕ್ಕೆ ಹಲವು ಕ್ರಮವನ್ನೂ ಕೈಗೊಳ್ಳಲಾಗುವುದು ಎಂದರು. ಸಚಿವರು ಮಂಗನ ಬಾವಿಗೆ ಡಾ.ಸರ್ಜಿ ಸೂಚಿಸಿದ ಔಷಧದ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಇದನ್ನೂ ಓದಿ-https://suddilive.in/archives/18059