ಸುದ್ದಿಲೈವ್/ಶಿವಮೊಗ್ಗ
ನಗರದ ವಿನಾಯಕ ನಗರದಲ್ಲಿರುವ ನವ್ಯಶ್ರೀ ಸಭಾಂಗಣದಲ್ಲಿ ಶೆಟ್ಟರ ಸಂತೆಸಂತೆ ಆರಂಭವಾಗಿದೆ. ಇಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ನ ಡೆಯುವ ಸಂತೆಯನ್ನ ಶಾಸಕ ಚೆನ್ನಬಸಪ್ಪ ಉದ್ಘಾಟಿಸಿದರು.
ಉದ್ಘಾಟಿಸಿ ಮಾಯನಾಡಿದ ಶಾಸಕ ಚೆನ್ನಬಸಪ್ಪ, ವ್ಯಾಪಾರಿ ವ್ಯಾಪಾರಿ ಧರ್ಮ ನಿರ್ವಹಣೆ ಮಾಡುತ್ತಾ ಇಡೀ ಸಮಾಜದ ಹಿತವನ್ನ ಆರ್ಯವೈಶ್ಯ ಸಮಾಜ ಕಾಪಾಡಿಕೊಂಡು ಬಂದಿದೆ.
ಹೊಸತನವನ್ನು ಯೋಚಿಸುತ್ತಾ, ಸಮಾಜಮುಖಿ, ಸರ್ವ ಸ್ಪರ್ಶವಾಗಿ ಕೆಲಸ ಮಾಡುವ ಸಮಾಜ ಇದಾಗಿದೆ. ನಮ್ಮತನವನ್ನು ಉಳಿಸಿಕೊಂಡುಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಕಾಲಿಕವಾಗಿದೆ ಎಂದರು.
ಡಿ ಎಸ್ ಅರುಣ್, ಮಾತನಾಡಿ ನೂರು ವರ್ಷ ಹಿಂದಿನ ಕಲ್ಪನೆ ಇದಾಗಿದೆ. ದೇವಸ್ಥಾನ ಕಟ್ಟಬೇಕು. ಸಂಘ ಮಾಡಬೇಕೆಂಬುದು. ನಾವೀಗ ನೂರು ವರ್ಷದ ಕಾರ್ಯಕ್ರಮ ಮಾಡುತ್ತಿರುವ ನಾವೇ ಭಾಗ್ಯಶಾಲಿಗಳು, ಈ ವರ್ಷ ಶೆಟ್ಟರ ಸಂತೆ ಯಶ್ವಿಯಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಮಾಡಲಾಗುತ್ತದೆ.
ಹೆಣ್ಣು ಮಕ್ಕಳು ಉತ್ಪಾದಿಸುವ ಉತ್ಪನ್ನಗಳಿಗೆ ಈ ಮೂಲಕಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಅಶ್ವತ್ಥ ನಾರಾಯಣ, ವಾಗೇಶ್, ್ತಪ್ರತಿಭಾ, ವಿದ್ಯಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂತೆಯಲ್ಲಿ, ಬಟ್ಟೆ, ಬ್ಯಾಗು, ಚಕ್ಕಲಿ ಕೋಡಬಳೆ ನಿಪ್ಪಟ್ಟು, ನಿಪ್ಪಟ್ಟು ಮಸಾಲೆ, ಬೋಟಿ ಮಸಾಲೆ, ಪಾನಿಪುರಿ, ಕುಟುಙಡಿ ಲಾಲಿಪಾಪ್, ರವೆ ಉಂಡೆ ಸೇವದ ಗೃಹಬಳಕೆ ವಸ್ತುಗಳನ್ನ ನವ್ಯಶ್ರೀಯ ಮೂರು ಅಂತಸ್ತಿನಲ್ಲಿ ಮಾರಾಟಕ್ಕಿಡಲಾಗಿದೆ. ಸಂಜೆಯ ನಂತರ ಕುರುಕಲು ತಿಂಡಿಗಳ ಕಾರಬಾರ್ ಜೀರಾಗಲಿದೆ, ಲ್ಯಾಪ್ ಟ್ಯಾಪ್ ಸಹ ಮಾರಾಟ ಮಾಡಲಾಗುತ್ತಿದೆ.
ಹೋಮ್ಲಿ ಫುಡ್ಸ್, ಪೂಜಾ ಸಾಮಾಗ್ರಿಗಳ ಮಾರಟಕ್ಕೆ ಅವಕಾಶಕಲ್ಪಿಸಲಾಗಿದಸ., ಈ ವೇಳೆ ಮಹಿಳೆಯರಿಂದ ರೇಷ್ಮ ಸೀರೆ ತೊಟ್ಟು ಫ್ಯಾಷನ್ ಶೋ ನಡೆದಿದೆ.
ಶೆಟ್ಟರ ಸಂತೆಯಲ್ಲಿ ಶಾಸಕ ಚೆನ್ನಬಸಪ್ಪ ತಮ್ಮ ಎರಡನೇ ಮಗನ ಮದುವೆಯ ಕರೆಯೋಲೆಯನ್ನೂ ಹೇಳಿರುವುದು ವಿಶೇಷವಾಗಿತ್ತು. ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಜೂ. 15 ರಂದು ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಎರಡನೇ ಪುತ್ರ ವರಣ್ ಮದುವೆ ನಡೆಯಲಿದ್ದು ಮದುವೆಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ-https://suddilive.in/archives/16047