ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಹಿಟ್ ಅಂಡ್ ರನ್ ಬೈಕ್ ಸವಾರ ಸಾವು

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಭದ್ರಾವತಿ ತಾಲೂಕು ರಾಮನಕೊಪ್ಪ ರಸ್ತೆಯಲ್ಲಿ ಹಿಂಟ್ ಅಂಡ್ ರನ್ ಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಹೆಚ್ ಕೆ ಜಂಕ್ಷನ್ ನಿಂದ ರಾಮನಕೊಪ್ಪದಲ್ಲಿರುವ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ.

ಟೂರಿಸ್ಟ್ ವಾಹನಗಳಿಗೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸನಾಯ್ಡು (39) ರಾಮನಕೊಪ್ಪದಿಂದ ಶಿವಮೊಗ್ಗಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದನು.

ಜೂ. 8 ರಂದು ಸಂಜೆ ಹೆಚ್ ಕೆಜಂಕ್ಷನ್ ಮೂಲಕ ರಾಮನಕೊಪ್ಪ ರಸ್ತೆಯಮೂಲಕ ಮನೆಗೆ ಬರುವಾಗ ವಾಹನವೊಂದು ಅಪಘಾತ ಪಡಿಸಿ ನಿಲ್ಲಿಸದೆ ಮಂದೆ ಸಾಗಿದೆ.

ತಕ್ಷಣವೇ ಬೈಕ್ ನಿಂದಬಿದ್ದಿದ್ದ ಶ್ರೀನಿವಾಸ್ ನಾಯ್ಡ್ ಅವರನ್ನ ಮೆಗ್ಗಾನ್ ಗೆ ಸಾಗಿಸಲಾಗಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ತಪಾಸಣೆನಡೆಸಿದ ವೈದ್ಯರು ಶ್ರೀನಿವಾಸ್ ನಾಯ್ಡ್ ಮೃತಪಟ್ಟಿರುವುದು ದೃಢಪಡಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ –https://suddilive.in/archives/16719

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close