ಬಿಎಸ್ ವೈ ಮೇಲಿನ ಪೋಕ್ಸೋ ಪ್ರಕರಣ-ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ಸುದ್ದಿಲೈವ್/ಶಿವಮೊಗ್ಗ

ಯಡಿಯೂರಪ್ಪನವರ ಮೇಲೆ ಸಿಡಿಲಿನಂತೆ ಎರಗಿರುವ ಪೋಕ್ಸೋ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಸಿಐಡಿ ಪೊಲೀಸರು ಯಡಿಯೂರಪ್ಪನವರ ಬಂಧನಕ್ಕೆ ಮುಂದಾಗಿದೆ. ಇದೇ ಹೊತ್ತಿನಲ್ಲಿ ಬಿಜೆಪಿ ಬಿಎಸ್ ವೈ ಬಂಧನದಲ್ಲೂ ದ್ವೇಷದ ರಾಜಕೀಯ ಕಾಣುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಇದನ್ನ ಕಾಂಗ್ರೆಸ್ ಅಲ್ಲಗೆಳೆಯುತ್ತಿದೆ.

ಕಾಂಗ್ರೆಸ್ ನ  ಸ್ಪಷ್ಟನೆ ಸಾರ್ವಜನಿಕರನ್ನ ಎಷ್ಟರ ಮಟ್ಟಿಗೆ ಮನವೊಲಿಸುತ್ತದೆ ಮತ್ತು 3 ತಿಂಗಳ ನಂತರ ಪ್ರಕರಣ ಪುಟಿದೇಳಲು ಕಾರಣವೇನು ಎಂಬುದರ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದರ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸುದ್ದಿಗೋಷ್ಠಿ ನಡೆಸಿ ಇದು ದ್ವೇಷದ ರಾಜಕಾರಣ ಎಂದು ದೂರಿದೆ. ಸುದ್ದಿಗೋಷ್ಠಿಯ ಅಂಶಗಳು ಹೀಗಿವೆ.

ದ್ವೇಷದ ರಾಜಕಾರಣದ ವಿರುದ್ದ ಬಿಜೆಪಿ ರಸ್ತೆಗಿಳಿದು ಹೋರಾಟ ಮಾಡ್ತೇವೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿಕೆ ನೀಡಿದರು.  ಸಿದ್ದರಾಮಯ್ಯ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರಕಾರ ಹಗೆತನದ, ಹೇಡಿತನದ ರಾಜಕಾರಣ ಮಾಡ್ತಿದೆ. ಯಡಿಯೂರಪ್ಪ ಅವರ 82 ನೇ ವಯಸ್ಸಿನಲ್ಲಿ ಮಾನಸಿಕ ಅಸ್ವಸ್ಥೆ ನೀಡಿದ ದೂರಿಗೆ 3 ತಿಂಗಳ ನಂತರ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ ಎಂದು ದೂರಿದರು.

ಯಡಿಯೂರಪ್ಪ ವರದಿ ಮಾಡಿಕೊಳ್ಳಬೇಕು.‌ ಬಂಧನ ಮಾಡ್ತಿವೆ ಅಂತಾರೆ ಅಂದ್ರೆ ಹಗೆತನದ ರಾಜಕಾರಣ ಮಾಡ್ತಿದ್ದಾರೆ ಎಂದೇ ಅರ್ಥವಾಗುತ್ತದೆ. ಮಾ.4 ರಂದು ಪರಮೇಶ್ವರ್ ಅವರೇ ಹೇಳಿದ್ದಾರೆ. ದೂರುದಾರರು ಮಾನಸಿಕ ಅಸ್ವಸ್ಥೆ ಎಂದಿದ್ದಾರೆ. ಈಗಾಗಲೇ 50-60 ಜನರ ಮೇಲೆ ಈಕೆ ದೂರು ನೀಡಿದ್ದಾರೆ ಎಂದು ಹೇಳಿದ್ದರು.‌ಆ ಪ್ರಕರಣಕ್ಕೆ ಅಷ್ಟೊಂದು ಮನ್ನಣೆ ಕೊಡೋದು ಬೇಡ ಅಂದಿದ್ದರು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನವರು ಸೋಲಿನಿಂದ ಹತಾಶರಾಗಿದ್ದಾರೆ. ಭಾಗ್ಯಗಳು ಗೆಲ್ಲಿಸುತ್ತವೆ ಅಂದುಕೊಂಡಿದ್ದರು. ರಾಜ್ಯದಲ್ಲಿ ಹೀನಾಯ ಸೋಲು ಕಂಡರು. ವಾಲ್ಮೀಕಿ ‌ನಿಗಮದಲ್ಲಿ ಅವ್ಯವಹಾರ, ಈ ಎಲ್ಲಾ ಪ್ರಕರಣದಿಂದ ಹೊರ ಬರಲು ಯಡಿಯೂರಪ್ಪ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ ಎಂದರು.

ಬಿಜೆಪಿಯ ನಾಯಕರನ್ನು ಕಟ್ಟಿ ಹಾಕಬೇಕು. ಸೇಡಿನ ರಾಜಕಾರಣ ಮಾಡುವ ಸಲುವಾಗಿ ಯಡಿಯೂರಪ್ಪ ಚಾರಿತ್ರ್ಯವಧೆ ಮಾಡಲು ಹೊರಟ್ಟಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ರಾಜಕಾರಣ ಮಾಡೋಣ. ಕಾನೊನು ಬಗ್ಗೆ ಗೌರವ ಇದ್ದರೆ ಪ್ರಕರಣ ದಾಖಲಾದಾಗಲೇ ಮುಂದುವರಿಸಬಹುದಿತ್ತು. ಯಡಿಯೂರಪ್ಪ ಪ್ರಕರಣಕ್ಕೆ ಕೈಹಾಕಿದರೆ ಮತಗಳು ಹೋಗ್ತವೆ ಅಂತಾ ಸುಮ್ಮನಿದ್ದು.‌ ಇದೀಗ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ ಎಂದು ದೂರಿದರು.

ಇದನ್ನೂ ಓದಿ-https://suddilive.in/archives/16914

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close