ಭಾನುಪ್ರಕಾಶ್ ಪಂಚಭೂತಗಳಲ್ಲಿ ಲೀನ

ಸುದ್ದಿಲೈವ್/ಶಿವಮೊಗ್ಗ

ಪ್ರತಿಭಟನೆಯ ವೇಳೆ ಹೃದಯಾಘಾತದಿಂದ ಹೋರಾಟದ ಬದುಕನ್ನ ಮುಗಿಸಿದ್ದ ಮಾಜಿ ಎಂಎಲ್ ಸಿ ಭಾನು ಪ್ರಕಾಶ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಇಂದು 10  ಗಂಟೆಯ ಹಿಂದೆ ಜೀವಂತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಭಾನುಪ್ರಕಾಶ್ ಪ್ರತಿಭಟನೆ ನಡೆಸುತ್ತಲೆ ಕುಸಿದು ಬಿದ್ದಿದ್ದರು. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮತ್ತೂರಿನ ತುಂಗ ನದಿಯ ತಟದಲ್ಲಿ ಅವರ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಬ್ರಾಹ್ಮಣ ಸಂಪ್ರದಾಯದಂತೆ ನಡೆದ ವಿಧಿ ವಿಧಾನಗಳಲ್ಲಿ ಗ್ರಾಮದ ತುಂಗನದಿಯ ದಡದಲ್ಲಿ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಾಜಿ ಶಾಸಕರನ್ನ ಪಂಚಭೂತಗಳಲ್ಲಿ ಲೀನವಾದವರು. ಹಿರಿಯ ಪುತ್ರ ಯಾದವ ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಮಾಜಿ ಸಚುವರಾದ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ,ಕುಮಾರ ಬಂಗಾರಪ್ಲ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಮೊದಲಾದ ಗಣ್ಯ ವ್ಯಕ್ತಿಗಳು ಅಂತದಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಇದನ್ಮೂ ಓದಿ-https://suddilive.in/archives/17118

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close