ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿಗೆ ಬೀಗ-ತೀ.ನಾ.ಶ್ರೀ ಎಚ್ಚರಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಭೂಮಿ ಸಮಸ್ಯೆ ನಿವಾರಣೆ ಕುರಿತು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನ ಮುಖ್ಯಮಂತ್ರಿಗಳ ಗಮನಕ್ಜೆ ತಾರದೆ ಹೇಳಿಕೆ ನೀಡಿ ಹೋಗಿದ್ದಾರೆ. ಸಚಿವ ಮಧು ಬಂಗಾರಪ್ಪನವರು ಸಿಎಂ ಗಮನಕ್ಜೆ ತಂದು ಸಭೆ ನಡೆಸಬೇಕಿತ್ತು. ನಡೆಸಲಿಲ್ಲ. ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯನವರು ಈ ಕುರಿತು ಪಾದಯಾತ್ರೆ ಬಡೆಸಿ ಸರ್ಕಾರ ರಚನೆಗೊಂಡು ಒಂದು ತಿಂಗಳ ಒಳಗೆ ಬಗುರ್ ಹುಕುಂ ಭೂಮಿಗೆ ಹಕ್ಕು ಪತ್ರ ನೀಡುವುದಾಗಿ ಹೇಳಿ ಒಂದು ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ.

ಉಪವಿಭಾಗಾಧಿಕಾರಿಗಳು ಕುಂಚೇನಹಳ್ಳಿ, ಕಟ್ಟಿಗೆಹಳ್ಳ, ಚೋರಿ ಭಾಗದಲ್ಲಿ ಗ್ರಾಮದಲ್ಲಿ 110 ರೈತರಿಗೆ ನೀಡಿದ ಜಮೀನನ್ನ ವಜಾಗೊಳಿಸಿ ಇದು ಅರಣ್ಯ ಭೂಮಿ ಎಂದು ನೋಟಿಫಿಕೇಷನ್ ನೀಡಿದೆ. 70 ವರ್ಷದ ಹಳೆಯ ಭೂಮಿಯಲ್ಲಿ ರೈತರು ಸಾಲಪಡೆದು ಜೀವನ ನಡೆಸುತ್ತಿದ್ದವರಿಗೆ ಅರಣ್ಯ ಭೂಮಿ ಎಂದು ನೋಟೀಸ್ ನೀಡಲಾಗಿದೆ. ಇದು ನಾಚಿಜೆ ಗೇಡಿನ ಕ್ರಮವಾಗಿದೆ ಎಂದು ದೂರಿದರು.

ಸಚಿವ ಮಧು ಬಂಗಾರಪ್ಪನವರು ಇನ್ಬೈ ಚುಬಾವಣೆಯ ಗುಂಗಿನಲ್ಲಿದ್ದಾರೆ. ಸಂಸದರೂ ಸಹ ಈ ಜನರಿಗೆ ಮೋಸ ಮಾಡಿದ್ದಾರೆ. ಒತ್ತುವರಿ ಮಾಡಲು ಬಿಡಲ್ಲ ಎಂದು ಸಂಸದರು ಮತ್ತು ಸಚಿವರು ಹೇಳಿಕೆ ನೀಡ್ತಿದ್ದಾರೆ. ಆದರೆ ಒಮ್ಮೆ ಈ ರೈತರ ಭೂಮಿಯನ್ನ ವಜಾಗೊಳಿಸಿದರೆ ರೈತರಿಗೆ ಸಾಲ ಸಿಗಲ್ಲ. ಅನುಕೂಲವಾಗಲ್ಲ ಎಂದು ದೂರಿದರು.

ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಪತ್ರ ಬರೆದು ಮಲೆನಾಡ ಸಮಸ್ಯೆ ಬಗೆಹರಿಸಲು ಸಭೆ ನಡೆಸಿ ಎಂದು ಆಗ್ರಹಿಸಿದ್ದಾರೆ. ತಕ್ಷಣವೇ ಸಭೆ ನಡೆಸಬೇಕು. ರೈತರ ಅರ್ಜಿ ವಜಾ ಆದರೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.

ಜೂ26 ರಂದು ಡಿಸಿ ಕಚೇರಿಯ ಮುಂದೆ ಕುಂಚೇನಹಳ್ಳಿ ಗ್ರಾಮಸ್ಥರು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುವುದು. 110 ವರ್ಷದ ಹಿಙದಿನ ಸರ್ವೆಗೆ 2023 ರಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಅದನ್ನೂ ವಜಾಗೊಳಿಸಲಾಗುವುದು ಎಂದು ಇಲಾಖೆ ಹೊರಟಿದೆ. ಡಿಸಿ ಮತ್ತು ಸಚಿವರೂ ಸಹ ಇದನ್ನ ಏನೂ ಮಾಡಲು ಆಗಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಮುಖಕ್ಕೆ ಬಟ್ಟೆಕಟ್ಟಿಕೊಂಡು ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ಮಲೆನಾಡ ರೈತ ಹೋರಾಟ ಸಮಿತಿಯ ರೈತಜಯರಾಮ್ ಬಾಯ್ಕ್ ತೀರ್ಥನಾಯ್ಕ್, ವಿನಾಯಕ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು.

ಇದನ್ನೂ ಓದಿ-https://suddilive.in/archives/17630

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close