ಜಮೀನಿನ ಮಣ್ಣು ತೆಗೆಯುವ ವಿಚಾರದಲ್ಲಿ ಮಾರಾಮಾರಿ-ಮೆಗ್ಗಾನ್ ಆವರಣದಲ್ಲಿಯೇ ಆರೋಪಿಗಳು ವಶಕ್ಕೆ?

ಸುದ್ದಿಲೈವ್/ದಾವಣಗೆರೆ

ಜಿಲ್ಲೆಯ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ಸರ್ವೆ ನಂಬರ್ 106 ರಲ್ಲಿನ ಬಗುರ್ ಹುಕುಂ ಜಮೀನಿನ ಮಣ್ಣು ತೆಗೆಯುವ ವಿಚಾರದಲ್ಲಿ ಸಂಬಂಧಿಕರ ನಡುವೆ ಮಚ್ಚಿನಲ್ಲಿ ಹೊಡೆದುಕೊಂಡು ಮೆಗ್ಗಾನ್ ಗೆ ದಾಖಲಿಸಿದ್ದಾರೆ.

ಚಿನ್ನಾ ನಾಯ್ಕ, ಶ್ರೀಧರ್ ನಾಯ್ಕ್, ಸೈನ್ಯ ನಾಯ್ಕ್, ಸುಶೀಲಾ ಬಾಯಿ ಇವರು ಮಚ್ಚಿನಿಂದ ದೊಡ್ಡಪ್ಪನ ಮಕ್ಕಳಾದ ಗಿರೀಶ್ ನಾಯ್ಕ್, ಹರೀಶ್ ಮೇಲೆ ಹಲ್ಲೆ ನಡೆಸಿದ್ದು ಮೆಗ್ಗಾನ್ ಗೆ ದಾಖಲಾಗಿದ್ದಾರೆ.

ಸರ್ವೆ ನಂಬರ್ 106 ರಲ್ಲಿರುವ 1 ಎಕರೆ 8 ಗುಂಟೆ ಜಮೀನಿನಲ್ಲಿ ಮಣ್ಣುತೆಗೆಯಲು ಸೈನ್ಯ ನಾಯ್ಕ್ಮತ್ತಿತರರು ನಣ್ಣು ತೆಗೆಯಲು ಮುಂದಾಗಿದ್ದಾರೆ. ಇದನ್ನ ಗೀರೀಶ್ ನಾಯ್ಕ್ತಡೆದಿದ್ದಾರೆ. ಈ ಘಟನೆ ನಾಲ್ಕು ದಿನ ಹಿಂದೆ ನ್ಯಾಮತಿ ಪೊಲೀಸ್ ಆಣೆ ವ್ಯಾಪ್ತಿಯಲ್ಲಿ ನಡೆದಿತ್ತು

ಇಂದು ಗರೀಶ್ ಮತ್ತು ಹರೀಶ್ ನಾಯ್ಕ್ ರ ನ್ನ ಜಮೀನಿಗೆ ಕರೆಯಿಸಿಕೊಂಡು ಚಿನ್ನಾ ನಾಯ್ಕ, ಶ್ರೀಧರ್ ನಾಯ್ಕ್, ಸೈನ್ಯ ನಾಯ್ಕ್, ಸುಶೀಲಾ ಬಾಯಿ ಮಚ್ಚಿನಲ್ಲಿ ಹಲ್ಲೆ ನಡೆಸಿದ್ದಾರೆ. ಹರೀಶ್ ಗೆ ಕಾಲು ಮುರಿದಿದೆ. ಗಿರೀಶ್ ಗೆ ತಲೆಗೆ ಪೆಟ್ಟಾಗಿದೆ. ನ್ಯಾಮತಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಧರ್  ವಶಕ್ಕೆ ಪಡೆದ ಪೊಲೀಸರು

ಅಚ್ಚರಿಯ ರೀತಿಯಲ್ಲಿ, ಸೈನ್ಯಾನಾಯ್ಕ್ ಮತ್ತು ಶ್ರೀಧರ್ ನಾಯ್ಕ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆಗ್ಗಾನ್ ಗೆ ದಾಖಲಾಗಲು ಬಂದಾಗ ಸೈನ್ಯ ನಾಯ್ಕ್ ಗೆ ಮಗ ಶ್ರೀಧರ್ ನಾಯ್ಕ್ ಕೊರಳಪಟ್ಟಿ ಹಿಡಿದು ಜಗಳಕ್ಕೆ ನಿಂತಿದ್ದಾಗ  ನ್ಯಾಮತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಧರ್ ನಾಯ್ಕ್ ಹಲ್ಲೆಗೊಳಗಾದ ಹರೀಶ್ ನ ಮನೆಯ ಮುಂದೆ ನಿಂತಿದ್ದ ಟ್ರ್ಯಾಕ್ಟರ್ ನ್ನ ಜಖಂಗೊಳಿಸಿದ್ದನು.

ಇದನ್ನೂ ಓದಿ-https://suddilive.in/archives/16344

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close