ಬೇಳೆ ಕಾಳಿನಲ್ಲಿ ಹುಳುಪತ್ತೆ-ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಮುಖ್ಯ ಶಿಕ್ಷಕಿಯ ಧಿಮಾಕಿನ ಉತ್ತರ ಏನುಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ನಗರದ ಸೂಳೆಬೈಲ್ ಸರಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟವಿಲ್ಲದ ಆಹಾರ ನೀಡಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಅಶಿಸ್ತು ಮುಖ್ಯಾಧ್ಯಾಪಕಿಯ ಧಿಮಾಕಿನ ಮಾತುಗಳು ಇವೆಲ್ಲಾವೂ ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿನ ಶಿಕ್ಷ ಕ್ಷೇತ್ರ ಅದೋಗತಿಗೆ ಇಳಿಸಿದೆಯಾ ಎಂಬ ಅನುಮಾನವೂ ಹುಟ್ಟಿಸಿದೆ.  ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಸೊಕ್ಕಿನ ಮಾತುಗಳು ಮಕ್ಕಳ ಸುರಕ್ಷತೆಯನ್ನ ನಿರ್ಲಕ್ಷಿಸುತ್ತಿರುವ ಬಗ್ಗೆ ವರದಿಯಾಗಿದೆ.

ಮಾಧ್ಯಮದವರು ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿ ಊಟದಲ್ಲಿ ತೊಗರಿ ಬೇಳೆಯಲ್ಲಿ ಹುಳು ಪತ್ತೆಯಾಗಿದೆ, ಶಿಸ್ತು ಇಲ್ಲದಿರುವ ಬಗ್ಗೆ ಮಾಹಿತಿ ಪಡೆದು ತೆರಳಿದಾಗ ಮುಖ್ಯ ಶಿಕ್ಷಕಿ  ಫಾತಿಮಾ ಬೇಗಂ ಏನಾದರೂ ಮಾಡಿಕೊಳ್ಳಿ ನಾವು ಕೊಡುವ ಆಹಾರ ಇದೆ ಎಂಬ ಲೆಕ್ಕಾಚಾರದಲ್ಲಿ ಮಾತನಾಡಿದ್ದಾರೆ.

ಇದರಿಂದ ಶಾಲೆಯ ಎಸ್ ಡಿಎಂಸಿ ಸಮಿತಿಯವರೆ  ಮಾಧ್ಯಮದವರ ಮುಂದೆ ತಮ್ಮ ಕಳವಳ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮುಖ್ಯ ಶಿಕ್ಷಕಿಯವರ ಈ ರೀತಿಯ ಹೇಳಿಕೆ ಎಂತಹ ಪೋಷಕರನ್ನೂ ರಚ್ಚಿಗೇಳಿಸದೆ ಬಿಡುವಂತದ್ದಿರಲಿಲ್ಲ.

ಬೇಳೆ ಕಾಳು ನಿಜವಾಗಿಯೂ ಕಳಪೆಯಾಗಿತ್ತು. ಅದರಲ್ಲಿ ಹುಳುಗಳು ಕಂಡುಬಂದಿವೆ ಮತ್ತು ಶಾಲೆಯ ಪರಿಸ್ಥಿತಿಯು ಹದಗೆಟ್ಟಿದೆ. ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟವಿಲ್ಲದ ಆಹಾರ ನೀಡಲಾಗುತ್ತಿದೆ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿ ಶಾಲೆಯ ಶಿಕ್ಷಕಿ ಫಾತಿಮಾ ಬೇಗಂ ಅವರನ್ನು ಪ್ರಶ್ನಿಸಿದಾಗ ಅವರು ನಾನು ನಿವೃತ್ತಿ ಪಡೆಯುತ್ತಿದ್ದೇನೆ. ಇನ್ನು ಕೆಲವೇ ದಿನಗಳು ಉಳಿದಿವೆ, ನೀವು ಏನು ಮಾಡಬೇಕೋ ಅದನ್ನು ಮಾಡಿ ಎಂದು ಉಡಾಫೆ ಮಾತನ್ನಾಡಿದರು.

ದಾಲ್‌ನಲ್ಲಿ ಹುಳುಗಳಿವೆ, ಇದು ಹಳೆ ಸ್ಟಾಕ್ ಆಗಿದೆ, ಏಪ್ರಿಲ್‌ನಲ್ಲಿ ಬಂದ ದಾಸ್ತಾನು ಆಗಿದೆ, ಅದು ಮುಗಿದ ನಂತರವೇ ಹೊಸ ದಾಸ್ತಾನು ಲಭ್ಯವಿರುತ್ತದೆ. ನನ್ನ ನಿವೃತ್ತಿ ಇನ್ನೂ ಕೆಲವು ದಿನಗಳು ಉಳಿದಿವೆ, ನಾನು ದಾಖಲೆಗಳನ್ನು ಸರಿಪಡಿಸುವಲ್ಲಿ ನಿರತನಾಗಿದ್ದೇನೆ. ಆದ್ದರಿಂದ ಈ ವಿಷಯಗಳ ಬಗ್ಗೆ ಗಮನ ಹರಿಸಲು ಬಯಸುವುದಿಲ್ಲ ಎಂದು ಮುಖಕ್ಕೆ ಹೊಡದಂತೆ ಮಾತನಾಡಿದ್ದಾರೆ.

ಎಸ್ ಡಿಎಂಸಿ ಅಧ್ಯಕ್ಷ ನವಾಝ್ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ, ಆದರೆ ಇಲ್ಲಿನ ಶಿಕ್ಷಕರ ಸಹಕಾರ ಇಲ್ಲ, ಶಿಕ್ಷಕರು ಪ್ರತಿ ವಾರ ರಜೆಯಲ್ಲಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣ ಸರಿಯಾಗಿ ನಡೆಯುತ್ತಿಲ್ಲ. . ಸರಕಾರದಿಂದ ಹಣ ನೀಡುವ ಹಣ ಸ್ವಚ್ಛತೆಗೆ ಬಳಸಿಕೊಳ್ಳಲಾಗುತಿಲ್ಲ. ಮಕ್ಕಳನ್ನು ಬಲವಂತವಾಗಿ ಶಾಲೆಯ ಕೆಲಸ ಮಾಡಿಸುತಿದ್ದಾರೆ.

ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂಡ್ರಿಸುತ್ತಾರೆ. ಈ ಬಗ್ಗೆ ಬಿಇಒ ಹಾಗೂ ಡಿಡಿಪಿಐಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈಗ ಮುಖ್ಯೋಪಾಧ್ಯಾಯರು ನಿವೃತ್ತಿಯಾಗುವ ಮುನ್ನವೇ ಶಾಲೆಯನ್ನು ಹಾಳು ಮಾಡಲು ಮುಂದಾಗಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ಉಳಿವಿಗೆ ಶಿಕ್ಷಣ ಸಚಿವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/17715

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close