ಗಾಂಜಾ ಮಾರಾಟ-ಓರ್ವ ಬಂಧನ

ಸುದ್ದಿಲೈವ್/ಶಿವಮೊಗ್ಗ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ತುಂಗ ನಗರ ಪೊಲೀಸರು ಆತನಿಂದ 2 ಕೆಜಿ 214 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ದಿನಾಂಕ:-21-06-2024 ರಂದು ಮದ್ಯಾಹ್ನ ಶಿವಮೊಗ್ಗ ಟೌನ್ ಓತಿಘಟ್ಟದಿಂದ ದುಮ್ಮಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕ ರುದ್ರಭೂಮಿಯ ಹತ್ತಿರ ಬೈಕ್ ನಿಲ್ಲಿಸಿಕೊಂಡು, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ತುಂಗನಗರ ಪೊಲೀಸರಿಗೆ ಖಚಿತ ಮಾಹಿತಿ ಲಬ್ಯವಾಗಿದೆ.

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ,  ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ ಮೇಲ್ವಿಚಾರಣೆಯಲ್ಲಿ, ತುಂಗನಗರ ಪೊಲೀಸ್ ಠಾಣೆ ಪಿಐ ಮಂಜುನಾಥ್ ಬಿ,  ಮತ್ತು ಪಿಎಸ್ಐ ಸಿದ್ದಪ್ಪ,ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿನಡೆಸಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ನಾಗೇಶ ನಾಯ್ಕ, 29 ವರ್ಷ, ಲಕ್ಷ್ಮಿಪುರ ಹೊಸಳ್ಳಿ ತಾಂಡಾ, ಶಿವಮೊಗ್ಗ ಈತನನ್ನು ಬಂಧಿಸಿ ಆರೋಪಿಯಿಂದ ಅಂದಾಜು ಮೌಲ್ಯ 88,560/- ರೂಗಳ 2 ಕೆಜಿ 214 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ಧ ತುಂಗಾನಗರ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.‌

ಇದನ್ನೂ ಓದಿ-https://suddilive.in/archives/17448

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close