ಹಿಂದೂ ಸಂಘಟನೆಯ ಯುವಕ ದೇವರಾಜ್ ಅರಳಹಳ್ಳಿಯ ಮೇಲೆ ಹಲ್ಲೆ?

ಸುದ್ದಿಲೈವ್/ಶಿವಮೊಗ್ಗ

ಗೋ ರಕ್ಷಕ ನ ನೇಲೆ ದಾಳಿ ನಡೆದಿದೆ. ಹಿಂದೂ ಸಂಘಟನೆ ಯುವಕರು ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿದೆ ಎಂದು‌ ಆರೋಪಿಸಿದ್ದಾರೆ.

ಶಿರಾಳಕೊಪ್ಪದ ಮೈದಾನದಲ್ಲಿ ಗೋತ್ಯಾಜ್ಯವನ್ನ ಬಿಸಾಕಲಾಗಿತ್ತು. ಇದನ್ನ ವಿಡಿಯೋ ಮಾಡಲು ಹೋಗಿದ್ದ ಹಿಂದೂ ಸಂಃಟನೆ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರು ದಂಡೆತ್ತಿಬಂದಿದ್ದಾರೆ.

ಹಿಂದೂ ಸಂಘಟನೆ ಯುವಕರು ಇದೊಂದು ಹಲ್ಲೆಯಾಗಿದ್ದು, ಗೋಹತ್ಯೆ ಬಗ್ಗೆ ಮಾಹಿತಿ ನೀಡಿದರೂ ಪೊಲೀಸರು ಕ್ರಮಕೈಗೊಂಡಿಲ್ಲವೆಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಯುವಕರು ಆರೋಪಿಸಿದ್ದಾರೆ.

ಆದರೆ ಗೋರಕ್ಷಕ ಅವರನ್ನ ಪೊಲೀಸರೇ ರಕ್ಷಿಸಿರುವುದಾಗಿ ಹೇಳಲಾಗುತ್ತಿದೆ. ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, ದೇವರಾಜ್ ಅವರನ್ನ‌ತಳ್ಳಾಡಲಾಗಿದೆ. ಹಲ್ಲೆಯಾಗಿಲ್ಲ. ಅವರನ್ನ ಪೊಲೀಸರೇ ರಕ್ಷಿಸಿ ಕರೆತಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/17088

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close