ಸುದ್ದಿಲೈವ್/ಶಿವಮೊಗ್ಗ
ಜಮೀನಿನ ಆರ್‌ಟಿ ಸಿ ಪ್ರತಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲು ಅರ್ಜಿ ಸಲ್ಲಿಸಿದ ಸಾರ್ವಜನಿಕರ ಬಳಿ ಸಾಗರ ಬಳಸಗೋಡು ತಾಲೂಕು ಕಚೇರಿಯ ಅಟೆಂಡರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಅಸೀಫ್ ಬಿನ್ ಬಶೀರ್, ಸ್ನೇಹಿತರಾದ ತೋಹಿದ್ ಅಬ್ದುಲ್ ರವರಿಗೆ ಸೇರಿದ ಸಾಗರ ತಾಲ್ಲೂಕ್ ಕಸಬಾ ಹೋಬಳಿ ಬಳಸಗೋಡು ಗ್ರಾಮದ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಗರ ತಾಲ್ಲೂಕ್ ಕಛೇರಿಯ ಭೂಮಿ ಕೇಂದ್ರಕ್ಕೆ ಹೋಗಿ 1999 ರಿಂದ 2001 ರ ವರೆಗೆ ಕೈ ಬರಹದ ಪಹಣೆಯನ್ನು ತೆಗೆಸಿಕೊಂಡು ಬರಲು ತಿಳಿಸಿದ್ದಾರೆ.
ಆಸೀಫ್ ಸ್ನೇಹಿತರಾದ ನವೀನ.ಜೆ ರವರೊಂದಿಗೆ ನಿನ್ನೆ ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗಕ್ಕೆ ಹೋಗಿ ಅಟೆಂಡರ್ ಬಸವರಾಜ್ ರವರಿಗೆ ದಾಖಲಾತಿಗಳನ್ನು ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ಅಟೆಂಡರ್ ಎಲ್ಲಾ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಬೇಕು, ಚಲನ್ ಕಟ್ಟಬೇಕು ಖರ್ಚು ಇದೆ ಎಂದು ಒಟ್ಟು 1500/- ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ಹಣದ ಬೇಡಿಕೆ ಇಟ್ಟ ಬಸವರಾಜ್ ಗೆ ಹಣ ನೀಡುವಾಗ ಸ್ನೇಹಿತ ನವೀನ್ ಜೆ ರವರು ಅವರ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗದ ಅಟೆಂಡರ್ ಬಸವರಾಜ್ ರವರ ವಿರುದ್ಧ ಈ ದಿವಸ ದಿನಾಂಕ:06/06/2024 ರಂದು ಪ್ರಕರಣ ದಾಖಲಾಗಿದೆ.
ಅದರಂತೆ ಈ ದಿವಸ ದಿನಾಂಕ:-06/06/2024 ರಂದು ಸಂಜೆ 4 ಗಂಟೆಗೆ ಅಪಾದಿತ ಅಟೆಂಡರ್ ಬಸವರಾಜ್ ಅಟೆಂಡರ್ ಕಛೇರಿಯಲ್ಲಿ ಅಸಿಫ್ ಬಳಿ ಲಂಚದ ಹಣ ರೂ 2000/- ಪಡೆದಿರುತ್ತಾರೆ ಈ ಸಮಯದಲ್ಲಿ ಲೋಕಾಯುಕ್ತ ಆಗಿದೆ.
ಲೋಕಾಯುಕ್ತ ಹೆಚ್.ಎಸ್ ಸುರೇಶ್ ಪೊಲೀಸ್ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಶ್ರೀ ಮಂಜುನಾಥ್ ಚೌದರಿ ಎಂ.ಹೆಚ್. ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾದಿತನನ್ನು ಬಂದಿಸಲಾಗಿರುತ್ತದೆ.
ದಾಳಿ ವೇಳೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಅಧಿಕಾರಿಗಳಾದ ಉಮೇಶ್ ಈಶ್ವರ ನಾ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕ.ಲೋ ಶಿವಮೊಗ್ಗ. ಸಿಬ್ಬಂದಿಗಳಾದ ಯೋಗೇಶ್ ಸಿ.ಹೆಚ್.ಸಿ. ಸುರೇಂದ್ರ ಹೆಚ್.ಜಿ .ಸಿ.ಹೆಚ್.ಸಿ. ಬಿ.ಟಿ ಚನ್ನೇಶ, ಸಿ.ಪಿ.ಸಿ ಶ್ರೀ ರಘುನಾಯ್ಕ ಸಿ.ಪಿ.ಸಿ. ಶ್ರೀಮತಿ ಪುಟ್ಟಮ್ಮ ಮ.ಪಿ.ಸಿ, ಗಂಗಾಧರ ಎ.ಪಿ.ಸಿ ಪ್ರದೀಪ್ ಎ.ಪಿ.ಸಿ. ಜಯಂತ್ ಎ.ಪಿ.ಸಿ ಇವರುಗಳು ಹಾಜರಿದ್ದರು.
ಇದನ್ನೂ ಓದಿ-https://suddilive.in/archives/16378